ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ದಿವ್ಯಸು :ದು ಅಥವಾ ದೀರ್ಘ ಪ್ರಯತ್ನ.

  • * * * * - - - - -

- * - * - ದಿಂದಲೇ ಗೊತ್ತಾಗಿದೆ. ಇಂಥ ಯಃಕಶ್ಚಿತ ಮನುಷ್ಯನು ಕೂಡ ಸಮಾಜದ ವ್ಯಾಸ ಪೀಠದ ಮೇಲೆ ನಿಂತುಕೊಂಡು ಗುರುವಾಗಿ ( ಎಲೈ ದೇವನೇ, ನೀನು ಹಾಗೆ ಇರುವಿ, ಹೀಗೆ ಇರುವಿ” ಎಂಬದಾಗಿ ಪಾಠಮಾಡಿದ ಕೆಲವು ನಿಶ್ಚಿತ ವಾಕ್ಯಗಳನ್ನು ಅನ್ನು ತಾನೆ. ಇದು ಕೇವಲ ನಿರಾಕಾರತತ್ವದ ಅಪಹಾಸ್ಯವಲ್ಲವೇ ? ?” ಮೊದಲು ವಿನಾಯಕನು, ಇಂದಿರೆಯು ಸಾಧಾರಣ ಸ್ತ್ರೀಯರಂತೆ ಅಲ್ಪಸ್ವಲ್ಪ ಕಲಿತಿರಬಹುದೆಂದು ಊಹಿಸಿದ್ದನು; ಆದರೆ ಅವಳ ಮೇಲಿನ ವ್ಯಾಖ್ಯಾನವನ್ನು ಕೇಳಿ ಆಶ್ಚರ್ಯಚಕಿತನಾಗಿ ಅವನು:- ವಿನಾಯಕ:-ಹೌದು, ನೀವನ್ನು ವದು ಎಷ್ಟೋ ಮಟ್ಟಿಗೆ ನಿಜವಾಗಿದೆ. ದೊಡ್ಡ ದೊಡ್ಡ ಮನುಷ್ಯರು ಕೇವಲ ಅಭಿಮಾನವಶರಾಗಿ ಅಸಹ್ಯ ತತ್ವಗಳಿಗೆ ಮನಸೋತು, ತಮ್ಮ ಆಯುಷ್ಯವನ್ನು ವ್ಯರ್ಥಗಳೆಯುವದು ರಾಷ್ಟ್ರೀಯ ದೃಷ್ಟಿಯಿಂದ ಬಹಳ ಹಾನಿಕರವಾಗಿದೆ. ಇರಲಿ, ಮುಖ್ಯ ವಿಷಯವು ಮೂಲೆಗೆ ಬೀಳಹತ್ತಿದೆ. ಶಾಮ ರಾಯನು ಬರುವಷ್ಟರಲ್ಲಿ ನೀವು ನಿಮ್ಮ ವಿಷಯವನ್ನು ಹೇಳಿದರೆ ಒಳಿತು. ಇಲ್ಲವಾ ದರೆ ನಾನು ಇದಕ್ಕಿಂತಲೂ ಹೆಚ್ಚು ಸಂಕಟವನ್ನು ಅನುಭೋಗಿಸಬೇಕಾದೀತು.?? ಇಂದಿರೆ:- ( ನಗುತ್ತ) ಆ ಸಂಬಂಧ ತಾವು ಚಿಂತೆ ಮಾಡಬೇಡಿರಿ, ಅವರು ಮೂರು ಅಥವಾ ನಾಲ್ಕು ಹೊಡೆಯುವ ಸುಮಾರಕ್ಕೆ ಬರುವರು. ಈಗ ಬಹಳವಾ ದರೆ ಹನ್ನೆರಡು ಹೊಡೆದಿರಬಹುದು, ತಂದೆಯ ಸಂಗಡ ನಾನು ಆ ಸಮಾಜಕ್ಕೆ ಹೋಗುತ್ತಿದ್ದೇನೆಂದು ನಿಮಗೆ ಹೇಳಿರುವೆನಷ್ಟೇ, ಅಲ್ಲಿಗೂ ಎರಡನೇ ಸ್ಥಳಕ್ಕೂ ತಂದೆಯಸಂಗಡ ಹೋಗುತ್ತಿದ್ದುದರಿಂದ ಸ್ತ್ರೀಯರ ಸ್ವಾಭಾವಿಕಧರ್ಮವಾದ ಲಜ್ಜೆಯು ನನ್ನಲ್ಲಿ ಲೋಪವಾಯಿತು. ನನ್ನ ಮಾತಾಡುವ ಪದ್ಧತಿಯಲ್ಲಿ ಕೂಡ ಎಷ್ಟೋ ಹೆಚ್ಚು ಕಡಿಮೆಯಾಗಿದೆ. ಕುಲೀನ ಸ್ತ್ರೀಯರಂತೆ ನಡೆಯಬೇಕೆಂದು ನನ್ನಿಚ್ಛೆಯಿದ್ದರೂ ಅದು ನನಗೆ ಸಾಧಿಸದಂತಾಗಿದೆ. ಇದರಲ್ಲಿ ನನಗೆ ಎಷ್ಟು ಹಾನಿಯಾಗಿರುತ್ತದೆಂಬು ವದು ಎಷ್ಟೋ ಜನರಿಗೆ ತೋರಿರುವದಿಲ್ಲ. ಎಷ್ಟೋ ಜನರಿಗೆ ಸ್ತ್ರೀಯರು ಯಾವಾ ಗಲೂ ಪುರುಷರ ಸಂಗಡ ತಿರುಗಾಡುವದೂ, ವಿನೋದ ಮಾಡುವದೂ ಒಳ್ಳೇ ಸುಧಾ ರಣೆಯೆಂದು ತೋರುವದು, ಈಶ್ವರನು ಸ್ತ್ರೀ-ಪುರುಷ ಹೀಗೆ ಎರಡು ವರ್ಗ ಮಾಡಿದ್ದು ತಪ್ಪಾಯಿತು. ಆ ತಪ್ಪನ್ನು ಸುಧಾರಿಸುವದೇ ಈ ಸುಧಾರಕರ ಹಣೆಯಲ್ಲಿ ಬರೆದದೆ. ಇದು ನನಗೆ ಅತಿಶಯ ಕುಧಾರಣೆಯಾಗಿ ತೋರುತ್ತದೆ. ಕುಲೀನ ಸ್ತ್ರೀಯ ಸಂಸ್ಕಾರ ಗಳನ್ನು ನಾಶಮಾಡಿ, ಅವಳ ಶೀಲಸಂವರ್ಧನದ ಮಾರ್ಗವನ್ನು ಕಂಟಕಮಯಮಾಡು ವದಕ್ಕೆ ಸುಧಾರಣೆಯೆಂದನ್ನ ಬೇಕಾದರೆ ವಿಷಕ್ಕೆ ಅಮೃತವೆಂದು ಯಾಕೆ ಅನ್ನ ಬಾರ ದೆಂಬ ಪ್ರಶ್ಯವು ಸಾಹಜಿಕವಾಗಿ ಹುಟ್ಟುವದು, ಯಾವ ಸ್ತ್ರೀಗೆ ಹೀಗೆ ಬಹುಜನ ಪುರುಷ ರಲ್ಲಿ ಒಂದೇಸವನೆ ೧೦-೧೨ ವರ್ಷ ಇರಬೇಕಾಗಿರುತ್ತದೆಯೋ ಆ ಸ್ತ್ರೀಯ ಹೃದಯ