ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. \r\\n\h, AAAA, ಮನೆಗೆ ಹೋಗುವಾಗ ನೀನೂ ಅವನ ಸಂಗಡ ಹೋಗು. ಕೂಡಲೆ ನಾನು ಹಿಂದೆ ರಡು ತಾಸಿನಲ್ಲಿ ನಿನ್ನನ್ನು ಮನೆಗೆ ಕರಕೊಂಡು ಬರುವೆನು. ಇಷ್ಟು ಮಾಡಿದರಾ ಯಿತು. ನಿನ್ನ ನ್ನು ಅವನ ಮನೆಗೆ ಎಂದೂ ಕಳಿಸುವದಿಲ್ಲ. ಅವನೂ ನಮ್ಮ ಮನೆಗೆ ಎಂದೂ ಬರುವದಿಲ್ಲ. ಇದೇನು ನಿಜವಾದ ಲಗ್ನ ವಲ್ಲೆಂದು ಯಾವತ್ತರಿಗೂ ತಿಳಿಯು ವದು, ಮುಂದೆ ನಿನಗನುಗುಣವಾದ ಕಲಿತ ತರುಣ ವರನೊಡನೆ ನಿನ್ನ ಲಗ್ನ ವನ್ನು ಒಳ್ಳೆ ವೈಭವದಿಂದ ಮಾಡುವೆನು. ” ಇತ್ಯಾದಿ ಆತನ ವಿಚಾರವನ್ನು ಕೇಳಿದಾಗ ನನ್ನ ಮನಸ್ಸಿನಲ್ಲಿ ಯಾದ ವಿಕಾರವು ಆ ಈಶ್ವರನಿಗೇ ಗೊತ್ತು, ನಾನು ಈ ಬಗ್ಗೆ ತಂದೆಗೆ ಉತ್ತರವನ್ನು ಕೊಡದೆ ಸಿಟ್ಟಿನಿಂದ ಎರಡನೇ ಕಡೆಗೆ ಹೊರಟುಹೋದೆನು ಆದರೆ ತಂದೆಯು ಲಗ್ನದ ಸಿದ್ಧತೆಯನ್ನು ನಡಿಸಿಯೇ ಇದ್ದನು. ಲಗ್ನದಲ್ಲಿ ತಂದೆಯ ಕಡೆಯ ವರೂ, ನೀಲಕಂಠರಾಯನ ಕಡೆಯವರೂ ಯಾರೂ ಇದ್ದಿಲ್ಲ. ಆಪ್ತಸ್ವಕೀಯರಿಗೆ ತಿಳಿಸಿದರೆ ಈ ಲಗ್ನವ ಮುರಿದುಹೋದೀತೆಂಬ ಭೀತಿಯಿಂದ ನೀಲಕಂಠರಾಯನು ಒಂದು ಆಳನ್ನೂ, ಒಬ್ಬ ಮಿತ್ರನನ್ನೂ ಸಂಗಡ ಕರಕೊಂಡು ಲಗ್ನ ಮುಹೂರ್ತದ ಸುಮಾರಕ್ಕೆ ಬಂದನು. ವರನಂತೂ ಲಗ್ನಕ್ಕೆ ಬಂದು ಹಾಜರಾದನು, ವಧುವಿನ ದರ್ಶನವೇ ಇಲ್ಲ. ಆ ದಿವಸ ತಂದೆಯ ಲಕ್ಷವು ನನ್ನ ಮೇಲೆ ಬಹಳವಾಗಿದ್ದಿತು. ಆದರೂ ನನಗೆ ನನ್ನ ಆಯುಷ್ಯದ ಬಗ್ಗೆ ವೂಜ್ಯಭಾವವಿದ್ದದ್ದರಿಂದ ಒಳ್ಳೇ ಯುಕ್ತಿ ಯಿಂದ ಯಾರಿಗೂ ತಿಳಿಯದಂತೆ ಮನೆಯಿಂದ ಹೊರಬಿದ್ದೆನು. ಒಬ್ಬ ಮೈತ್ರಿಣಿಯ ಕೈ ಕಾಲುಬಿದ್ದು ಅವಳ ಮನೆಯಲ್ಲಿ ನಾಲ್ಕು ದಿವಸ ಕಾಲಗಳೆದನು. ನಾನಿಲ್ಲವಾದದ್ದ ರಿಂದ ಲಗ್ನವು ನಿಂತುಹೋದೀತೆಂದು ನನ್ನ ಭಾವನೆಯಾಗಿದ್ದಿತು, ಆದರೆ ನನ್ನ ಭಾವ ನೆಯು ವಿಪರೀತವಾಯಿತು. ಲಗ್ನ ವಾಗಿ ನೀಲಕಂಠರಾಯನು ನಾಲ್ಕು ಕೈಯವನಾ ಗಿಯೇ ಹೋದನು, ನಾನು ತಪ್ಪಿಸಿಕೊಂಡು ಹೋದದ್ದು ತಂದೆಗೆ ತಿಳಿದ ಕೂಡಲೆ ಅವನು ಒಬ್ಬ ನಾಯಕಿಣಿಯ ಬಳಿಗೆ ಹೋಗಿ ಅವಳ ಹದಿನಾರು ಹದಿನೇಳು ವರ್ಷದ ಒಬ್ಬ ತಂಗಿಯನ್ನು ಎಷ್ಟೋ ದುಡ್ಡು ಕೊಟ್ಟು ಮನೆಗೆ ಕರಕೊಂಡು ಬಂದನು. ಆಯಿತು, ಲಗ್ನವಾಯಿತು ! ಹುಡುಗೆಯು ತನ್ನ ಮನೆಗೆ ಹೋದಳು. ಮುದುಕಹುಡು ಗನೂ ತನ್ನ ಮನೆಗೆ ಹೋದನು, ಈ ಪ್ರಕಾರವಾಗಿ ಆ ಮೊಟ್ಟ ಇಂದಿರೆಯ ಸಂಗಡ ನೀಲಕಂಠರಾಯನ ಲಗ್ನ ವಾದದ್ದು ನಿಜ, ಆದರೆ ಅದರ ಸರ್ವ ಪ್ರಾಯಶ್ಚಿತ್ತವನ್ನು ನಿಜವಾದ ಇಂದಿರೆಯು ಭೋಗಿಸಬೇಕಾಗಿರುತ್ತದೆ. ೧೫ -೨೦ ದಿವಸವಾದ ಕೂಡಲೆ ನೀಲಕಂಠರಾಯನ ಕಡೆಯಿಂದ ನನಗೆ ಕರೆಯುವದರ ಸಲುವಾಗಿ ಮನುಷ್ಯನು ಬಂದನು. ಆಗ ತಂದೆಯು ನನ್ನ ಪ್ರಕೃತಿಯು ಸ್ವಸ್ಥವಿಲ್ಲವಾಗಿ ಸುಳ್ಳು ನೆವಹೇಳಿ ನನ್ನನ್ನು ಕಳಿಸಲಿಲ್ಲ. ಈ ಲಗ್ನದ ಸಲುವಾಗಿ ತಂದೆಯು ನೀಲಕಂಠರಾಯನ ಕಡೆ ಯಿಂದ ಮೂರುಸಾವಿರ ರೂಪಾಯಿ ತಕ್ಕೊಂಡಿದ್ದನು, ಮತ್ತು ಎರಡು ಸಾವಿರ ರೂಪಾ ಯಿಯ ಆಭರಣಗಳು ಕೈಯಲ್ಲಿ ಸಿಕ್ಕಿದ್ದವು, ಆದರೂ ಇಷ್ಟರಿಂದ ಅವನಿಗೆ ಸಮಾ