೨ ನೆಯ ಪ್ರಕರಣ- ೩೦ ದಿರೆಯ ಆತ್ಮನಿವೇದನ ! ೨೬ رم مم, مم مم مم ممه •°/ r 12೦೯:೨೨, ೨೫ ಫೆಬ್ರುವರಿ ೨೦೧೮ (UTC)..
- * * * * * * * * * */
ممممممرمرد مرمره •ಯ ಆಗ ಏನಾ:-ನನ್ನೇ ಪ್ರಶ್ನೆಗೆ ನೀವು ಉತ್ತರವನ್ನು ಕೆಡದೆ ಹೀಗೆ ಅಳುವ ಕಾರಣವೇನು ? ನೀವು ಯಾವ ರೀತಿಯಿಂದಲೂ ನನ್ನಲ್ಲಿ ಅನುಮಾನಗ್ರಸ್ತರಾಗದೆ ನಿಜವಾದ ಕಾರಣವನ್ನು ಹೇಳಿರಿ.” ಇಂದಿರೆ:- ( ನಿರುಪಾಯಳಾಗಿ ) ಇಂಥ ಚಮತ್ಕಾರಿಕ ಪರಿಸ್ಥಿತಿಯಲ್ಲಿ ಯಾವಾಗ ಎಂಥೆಂಥ ಮಾನಭಂಗವಾಗುವ ಪ್ರಸಂಗಗಳು ಬರುತ್ತವೆಂಬುವದಕ್ಕೆ ನಿಯಮವಿಲ್ಲ. ಅಂಥ ಮಾನಭಂಗವಾಗುವ ಪ್ರಸಂಗವು ಬಂದಲ್ಲಿ ದೇಹಪಾತವನ್ನು ಮಾಡಿಕೊಳ್ಳುವದಕ್ಕಾಗಿ ಇಂಥ ಪಂಚಪ್ರಾಣದ ಮೈತ್ರಿಣಿಯ ಹೊರ್ತು ಎರಡನೆಯ ವರು ಯಾರೂ ಉಪಯೋಗ ಬೀಳುವದಿಲ್ಲವೆಂದು! ವಿನಾ:-( ಇಂದಿರೆ, ನೀವು ಹೀಗೆ ಹುಚ್ಚರಂತೆ ಮಾಡಬೇಡಿರಿ, ಆತ್ಮಹತ್ಯ ದಂಥ ಭಯಂಕರ ಪಾಪವು ಜಗತ್ತಿನಲ್ಲಿ ಮತ್ತೊಂದಿಲ್ಲ, ನೀವು ನಿಮ್ಮ ಮನಸ್ಸನ್ನು ಸ್ಥಿರವಾಗಿಯೂ, ಪವಿತ್ರವಾಗಿಯೂ ಇಡಿರಿ, ಅಂದರಾಯಿತು. ಯಾರ ಮಾನಸಿಕ ಸಾಮರ್ಥ್ಯವು ಅತ್ಯಂತ ಉಜ್ವಲವಾಗಿರುವದೋ, ಅವರ ಮೇಲೆ ಬೇಕಾದವರು ಬೇಕಾ ದಷ್ಟು ಬಲಾತ್ಕಾರಮಾಡಿದರೂ ಅವರಿಂದ ಅನ್ಯಥಾಚರಣೆಯು ಸಂಭವಿಸಲಾರದು. ಯಾವಾಗಲೂ ಮನಸ್ಸಿನ ಪ್ರವೃತ್ತಿಯು ಸನ್ಮಾರ್ಗದಕಡೆಗೆ ಇದ್ದಿತೆಂದರೆ ಎಂಥ ಸಂಕ ಟದಲ್ಲಿಯಾದರೂ ಪರಮೇಶ್ವರನು ಪಾರುಮಾಡುತ್ತಾನೆ. ಮನುಷ್ಯನು ಮೃತ್ಯುವಿನ ನಿಮಂತ್ರಣಕ್ಕೆ ಯಾವಾಗಲೂ ಸಿದ್ಧನಾಗಿರುವಾಗ ಅವನಿಗೆ ಆತ್ಮಹತ್ಯವು ಯಾಕೆ ಬೇಕು ? ನೀವು ನಿಮ್ಮ ಶೀಲಸಂವರ್ಧನದ ಪ್ರಯತ್ನವನ್ನು ಬಿಡಬೇಡಿರಿ; ಪೂರ್ವ ಕಾಲದಲ್ಲಿ ಆಗಿಹೋದ ಸಾಧ್ಯಯರ ಚರಿತ್ರವನ್ನು ಕಣ್ಣಿನ ಮುಂದೆ ಇಡಿರಿ. ಮಾನಸಿಕ ದೌರ್ಬಲ್ಯದ ವಿಚಾರವನ್ನು ಎಂದೂ ಮನಸ್ಸಿನಲ್ಲಿ ತರಬೇಡಿರಿ.” ಹೀಗ ನ್ನುತ್ತ ಸ್ವಲ್ಪ ಹೊತ್ತು ನಿಂತು:- ನಿಮ್ಮ ಕಡೆಗೆ ಮೇಣಬತ್ತಿಯಿದ್ದರೆ ಹಚ್ಚಿರಿ. ಈಗ ವಿದ್ಯುಲ್ಲತೆಯ ದೀವಿಗೆಯನ್ನು ಹಚ್ಚ ಬೇಕಾಗಿದೆ.” ( ಅದೆ, ಹಚ್ಚುವೆನು. ” ಎಂದನ್ನು ಇಂದಿರೆಯು ತನ್ನ ಪೆಟ್ಟಿಗೆಯೊಳಗಿಂದ ಒಂದು ಮೇಣಬತ್ತಿಯನ್ನು ತೆಗೆದು ಅದನ್ನು ಹಚ್ಚಿ ಒಂದು ಟೇಬಲ್ಲಿನ ಮೇಲಿಟ್ಟಳು. ನಂತರ ವಿನಾಯಕಸು ದಿವಾಣಖಾನೆಯೊಳಗಿನ ದೀವಿಗೆಯನ್ನು ಹಚ್ಚಿ, ಬೀಸಣಿಕೆಯ ತಿರುಗುವಿಕೆಯನ್ನು ಕಡಿಮೆ ಮಾಡಿದನು, ಮತ್ತು ದೀವಿಗೆಯ ಹತ್ತರ ವಿದ್ಯುಲ್ಲತೆಯ ತಂತಿಯನ್ನು ಆ ಖಡ್ಡದಿಂದ ಹರಿದು ಅದನ್ನು ಬಿಡುತ್ತ ಬಿಡುತ್ತ ಅವನು ದಿವಾಣ ಖಾನೆಯೊಳಗೆ ಬರುವ ಪ್ರವೇಶದ್ವಾರದ ತನಕ ಒಯ್ದನು, ಅಲ್ಲಿ ವಿದ್ಯುಲ್ಲತೆಯ ಪ್ರವಾಹ ವನ್ನು ಬಿಡತಕ್ಕ ತಂತಿಯನ್ನು ಮೇಲ್ಬಾಗಕ್ಕೂ, ಪ್ರವಾಹರೋಧಕ ತಂತಿಯನ್ನು ಕೆಳ ಭಾಗಕ್ಕೂ ಇಟ್ಟನು. ಇದೇ ಪ್ರಕಾರ ಅವನು ಇಂದಿರೆಯ ಕೋಣೆಯೊಳಗಿನ ದೀವಿ ಗೆಯನ್ನು ಹೊತ್ತಿಸಿ, ಅದರ ತಂತಿಯನ್ನು ಪ್ರವೇಶದ್ವಾರದ ಕೋಣೆಯ ಮೇಲಿಟ್ಟನು.