ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೫

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ, MonAnacoawwwx ಕೂಡ ಹೇಗೆ ನಡೆಯಬೇಕು; ಇದು ಅವನಿಗೆ ತಿಳಿಯುವದಿಲ್ಲ; ಶ್ರೀಮಂತರ ಸಂಗದ ನಡಕೊಳ್ಳಬೇಕಾದ ವರ್ತನವು ಅವನಿಗೆ ಗೊತ್ತಿಲ್ಲ; ಅವನ ಪೋಷಾಕು ಸಾದಾ ಇರು ಇದೆ; ಅವನು ಶೋಧಿಸಿದ ಉದ್ಯೋಗವಾದರೂ ನೀಚತರಹದದೆ; ಈ ಮೊದಲಾದ ಅನೇಕ ಸುಳ್ಳೆಂದು ಸೊಕ್ಕೊಂದು ವಸಂತನು ರಾಮರಾಯನ ಕಿವಿಯಲ್ಲಿ ತುಂಬಿ ದನು, ಆದರೆ ವಸಂತನ ಈ ಅಧಮತನದ ಬೋಧದಿಂದ ಸಾರಾಸಾರ ವಿಚಾರಿಯಾದ ರಾಮರಾಯನ ಮನಸ್ಸಿನ ಮೇಲೆ ಏನೂ ಪರಿಣಾಮವಾಗಲಿಲ್ಲ. ತಿರುಗಿ ವಿನಾಯಕನ ವಿಷಯವಾಗಿ ರಾಮರಾಯನ ಮನಸ್ಸಿನಲ್ಲಿ ಮೊದಲಿಗಿಂತ ಹೆಚ್ಚಾದ ಆದರವೂ, ಮೊದಲೇ ವಸಂತನ ವಿಷಯವಾಗಿ ಉದಾಸೀನಳಾಗಿದ್ದ ದಿವ್ಯಸುಂದರಿಯ ಮನಸ್ಸಿನಲ್ಲಿ ಅವನ ವಿಷಯವಾಗಿ ತುಂಬಾ ತಿರಸ್ಕಾರವೂ ಉತ್ಪನ್ನ ವಾದವು, ವಿನಾಯಕನ ರಮ್ಯ ಮೂರ್ತಿ, ಸೌಮ್ಯ ಸ್ವಭಾವ, ಮಧುರವಚನ, ವಿನಮ್ರವರ್ತನ, ಅತುಲಬುದ್ದಿ ಸಾಮರ್ಥ ಮೊದಲಾದವುಗಳು ಯಾರ ಮನಸ್ಸಿನಲ್ಲಿ ತಾನೇ ಆದರವನ್ನು ಹುಟ್ಟಿಸಲಿಕ್ಕಿಲ್ಲ! ಚಿಂತಾಮಣಿರಾಯನ ಭೂಮಿಯನ್ನು ಲಾವಣಿಯಿಂದ ಹಿಡಕೊಂಡ ಕೂಡಲೆ ವಿನಾಯಕನು ರಾಮಪುರಕ್ಕೆ ಹೋಗುವ ಸಿದ್ಧತೆ ನಡಿಸಿದನು. ಆಗಂತೂ ಚಿಂತಾ ಮಳೆರಾಯನ ಮನೆಯಲ್ಲಿ ಅವನಿಗೆ ಹೆಚ್ಚು ಅದರ-ಸತ್ಕಾರಗಳು ಆಗಹತ್ತಿದವು, ಅದ ರಲ್ಲಿಯೂ ವಿನಾಯಕನು ಮುಂಬಯಿ ಬಿಟ್ಟು ರಾಮಪುರಕ್ಕೆ ಹೊರಟ ದಿವಸವಂತೂ ಸ್ವತಃ ಚಿಂತಾಮಣಿರಾಯನು ವಿನಾಯಕನಿಗೆ ಎಷ್ಟೋ ಗೌರವಮಾಡಿದನು. ದಿವ್ಯ ಸುಂದರಿಗಂತೂ ಆ ದಿವಸವು ವಿಚಿತ್ರತರವಾಗಿ ಕಾಣಿಸಿತು. ಸುಂದರಭವನ ” ವೆಂಬ ಸುವರ್ಣಾಕ್ಷರಗಳಿಂದ ಶೋಭಾಯಮಾನವಾಗಿ ಕಾಣಿಸುತ್ತಿದ್ದ ಕಿಡಿಕಿಯ ಹತ್ತರ ನಿಂತುಕೊಂಡು ದಿವ್ಯಸುಂದರಿಯು ಕಣ್ಣುಂಬ ಕಣ್ಣೀರು ತುಂಬಿಕೊಂಡು ವಿನಾಯಕ ನನ್ನು ನಿರೀಕ್ಷಣಮಾಡುತ್ತಿದ್ದಳು, ಆ ಕಡೆಗೆ ಸ್ವಲ್ಪಾದರೂ ವಿನಾಯಕನ ಲಕ್ಷವಿದ್ದಿಲ್ಲ. ತೋಟದ ಹೊರಗೆ ಬಂದು ಗಾಡಿಯಲ್ಲಿ ಕುಳಿತ ಕೂಡಲೆ ವಿನಾಯಕನ ದೃಷ್ಟಿಯು ಸಾಹಜೀಕವಾಗಿ ಹಿಂದಕ್ಕೆ ತಿರುಗಿತು. ನೋಡುತ್ತಾನೆ, ದಿವ್ಯಸುಂದರಿಯ ಅಪೂರ್ವ ಸ್ನಿಗ್ಗಮೂರ್ತಿಯು ವಿರಾಜಮಾನವಾಗಿದೆ ! ಆ ಸ್ಥಿತಿಯನ್ನು ನೋಡಿ ವಿನಾಯಕನಿಗೆ ಸಾನಂದಾಶ್ಚರ್ಯವಾಯಿತು, ಅವನು ತನ್ನ ಕೈಯೊಳಗಿನ ರುಮಾಲವನ್ನು ಮೇಲ ಕೃತ್ತಿ ಹೋಗಿಬರುತ್ತೇನೆಂಬದಾಗಿ ದಿವ್ಯಸುಂದರಿಗೆ ಸೂಚಿಸಿದನು. ದಿವ್ಯಸುಂದರಿಯ ನಗೆಮೊಗದಿಂದ ತನ್ನ ಕೈಯನ್ನು ಮೇಲಕ್ಕೆತ್ತಿ ನಿರೋಪಗೊಟ್ಟಳು, ವಸಂತನು ದೂರ ನಿಂತುಕೊಂಡು ಈ ಎಲ್ಲ ಚಮತ್ಕಾರವನ್ನು ನೋಡುತ್ತಿದ್ದನು. ಅವನು ಕೆಲಹೊತ್ತು ತೆರೆದ ರೆಪ್ಪೆಯನ್ನು ಮುಚ್ಚದಂತೆ ಕೆಂಗಣ್ಣಿನಿಂದ ದಿವ್ಯಸುಂದರಿಯನ್ನು ನೋಡಿ, ಹಲ್ಲು ಗಳನ್ನು ಕರಕರ ಕಡಿಯುತ್ತ ತನ್ನ ಮನೆಗೆ ಹೊರಟುಹೋದನು. ದಿವ್ಯಸುಂದರಿಯು ಕಿಡಿಕಿಯ ಹತ್ತಿರ ನಿಂತುಕೊಂಡು ವಿನಾಯಕನ ಗಾಡಿಯು ಮರೆಯಾಗುವ ತನಕ ಆ ಗಾಡಿಯನ್ನು ನೋಡಿದಳು, ಆ ಗಾಡಿಯು ಹೋಗಿ ಎಷ್ಟೋ