ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾಕುತಾಯಿ ವಿನೋದಿನಿಯ Tomನದಲ್ಲಿ ಮೂರುನಾಲ್ಕು ವರ್ಷ ಇದ್ದ ಕು; ಆದರೂ ಆಕೆಯಗಂಡ ರಂಗೂನ ಬಿಟ್ಟು ಕಲಕತ್ತೆಗೆ ಕೂಗಿ ವಾಸವಾ ಗೋಣವೆಂದಾಗ, ಆಕೆಯ ಮುಖದಲ್ಲಿ ಯಾವ ಬದಲಾವಣೆಗಳೂ ಕಂಡು ಬರಲಿಲ್ಲ; ತದ್ವಿರುದ್ಧವಾಗಿ ಹರ್ಷಿತಳಾಗಿದ್ದಂತೆಯೇ ಕಂಡು ಬಂದಳು

  • ಇಷ್ಟು ದಿನಗಳವರೆಗೆ ಚಿಕ್ಕಂದದಿಂದ ಇಲ್ಲಿ ವಾಸವಾಗಿದ್ದೆವು; ಈಗ ಬಿಟ್ಟು ಹೋಗಲು ನಿನಗೆ ದುಃಖವಾಗುವದಿಲ್ಲವೆ ? ಆಕೆಯ ಪತಿ ನೃವೇಶ ಕೇಳಿದ, ವಿನೋದಿನಿಯು ಮೊದಲಿನಂತೆಯೇ ಮುಖಮಾಡಿ ಉತ್ತರವಿತ್ತಳು

“ ಇಲ್ಲ, ದುಃಖವಾಗುವದಿಲ್ಲ; ಯಾಕೆ ದುಃಖವಾಗಬೇಕು ? ಆದರೆ w... ಮಗ ಯೋ ಕಾನಿಗಾಗಿ ಮಾತ್ರ ಸ್ವಲ್ಪ ವ್ಯಸನವಾಗುತ್ತದೆ” • ಶೋಕನಿಗಾಗಿ ಯಾಕೆ ವ್ಯಸನಪಡುವದು? ಹೇಗೂ ನಮ್ಮೊಂದಿಗೆ ಅವನು ಬರಬೇಕಲ್ಲ.” ನೃಪೇಶನೆಂದ |

  • ಆವನು ಬರುತ್ತಾನೆ; ಅದು ನಿಜ. ಆದರೆ ಅವನ ಅಮಾ” ಬರುವದಿಲ್ಲ. ಆಕೆ ಇರದಿದ್ದರೆ ಅವನು ಊಟವನ್ನೂ ಮಾರುವದಿಲ್ಲ; ಮಲ ಗುವದೂ ಇಲ್ಲ; ಆಕೆ ಇರದಿದ್ದರೆ ಅವನು ನನ್ನನ್ನು ಗೋಳಿಡಿಸಿ ಎರಡೇ ದಿನ ಗಳಲ್ಲಿ ಕೊಂದುಬಿಡುತ್ತಾನೆ. ತೀವ್ರ ಮರೆತುಬಿಡಲಿಕ್ಕೆ ಆವನೇನೂ ಇನ್ನೂ ಸಂಣವನಲ್ಲ; ದೊಡ್ಡವನಾಗಿದ್ದಾನೆ. ಬೇರೆ ಯಾವ ಒಕ್ಕಲಗಿತ್ತಿಯೂ ಅವ ನಿಗೆ ಹಿಡಿಸುವದಿಲ್ಲ ಏನೋದಿನಿ ಅಂದಳು

ವಿನೋದಿನಿ ನೃಪೇಶರಿಗೆ ಶೋಕಾ ಒಬ್ಬನೇ ಮಗನು; ಆತನನ್ನು ಆಡಿ ಸಲಿಕ್ಕೆಂದು 'ಆಯಾ' ಎಂಬ ಹೆಸರಿನ ಒಕ್ಕಲುಗಿತ್ತಿಯೊಬ್ಬಳಿದ್ದಳು. ಮನೆ ಯಲ್ಲಿ ಎಲ್ಲರೂ ಆಕೆಯನ್ನು ಆಯಾ' ಎಂದೇ ಕರೆಯುತ್ತಿದ್ದರು. ಬೋಲಾ