ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೆಲಸಕ್ಕಾಗಿ ಹೊರಗೆ ಹೋಗಬೇಕಾಗಿರುವದೆಂದೂ, ಆದ್ದರಿಂದ ಮಗುವನ್ನು ನೋಡಿಕೊಳ್ಳಬೇಕೆಂದೂ, ಅವನು ಎದ್ದರೆ ಹಾಲು ಕುಡಿಸಂದ್ರ, ಬಹಳ ಮಾಡಿ ತಾನು ನಾಲ್ಕು ಬಡಿಯುವದರೊಳಗಾಗಿ ಬರಬಹುದೆಂದೂ ಹೇಳಿ ಹೋದಳು. ಹರನಾಥನು ಎಂದೂ ಆ ಕಿಯ ಮಾತನ್ನು ನಡೆಯಿಸಿದವನಲ್ಲ. ಆದರೂ ಇಂದು ಯಾಕೆ ಒಪ್ಪಿದನು ಒಲ್ಲೆನೆನ್ನಲು ಮನಸ್ಸಾಗಲಿಲ್ಲ. ಖೋಕರಿ ಪ್ರತಿದಿನ ಏಳುವ ಹೊತ್ತಿಗೆ ಎದ್ದು ಆಯಳನ್ನು ಕಾಣದೆ ಅಳಲಿಕ್ಕೆ ಮೊದಲು ಮಾಡಿದ, ಹರನಾಧ ಹಾಲು ಕುಡಿಸಲಿಕ್ಕೆ ಹೋದನು, ಅವನ ಕೈಯೊಳ ಗಿನ ಹಾಲಿನ ಬಟ್ಟಲವನ್ನು ಜಾಡಿಸಿ ಒದ್ದು ಬಿಟ್ಟನು, ಅದೃಷ್ಟಕ್ಕೆ ಆಯ ತೀವ್ರನೇ ಬಂದುಬಿಟ್ಟಳು ಇಲ್ಲವಾದರೆ ಶೋಕಾ ಹರನಾಥನಿಗೆ ಇನ್ನೂ ಎಷ್ಟು ನರಕ ಶಿಕ್ಷೆ ಕೊಡುತ್ತಿದ್ದನೋ? - ಆಯಳನ್ನು ಕಂಡಾಕ್ಷಣ ಶೋಕಾನ ಆಳುವದು ಇನ್ನೂ ಹೆಚ್ಚಾಯಿತು. ಆಕೆ ಅವನನ್ನು ಎತ್ತಿಕೊಂಡು ಮಲಗುವ ಕೋಣೆಗೆ ಹೋದಳು. ಮರು ಕ್ಷಣದಲ್ಲಿ ಖೋಕಾ ಟೈಸಿಕಲ್ಲ ಮೇಲೆ ಕುಳಿತು ಮರೆಯಹತ್ತಿದ, ಆಯ ಕೋಣೆಯಲ್ಲಿ ಆ ಮೂಲೆಯಿಂದ ಈ ಮೂಲೆಗೆ ಎಳೆಯುತ್ತ ಆಡಿಸುತ್ತಿದ್ದಳು. ಖಕನಿಗೆ ಅ೦ದು ಆದ ಆನಂದ ಅಷ್ಟಿಷ್ಟಲ್ಲ ಶೋಕಾನ ಅಳುವು ಒಮ್ಮೆಲೇ ಅಡ್ಡ ಮಳೆ ಬಂದು ನಿಂತಂತಾದುದನ್ನು ತಿಳಿದ ಹರನಾಥ ಆಶ್ಚರ್ಯ ಒಟ್ಟು ಕೋಣೆಯಲ್ಲಿ ಇಣಕಿ ಹಾಕಿ ಆ ದೃಶ್ಯವನ್ನು ಕಂಡು ಮನಸ್ಸಿಗೆ ಚೇಳು ಕಡಿದಂತಾಗಿಹಿಂತಿರುಗಿದ. ಹರನಾಥ ದುಡ್ಡು ತಕೊ೦ಡು ದುಡಿಯುತ್ತಾನೆ ಆಯಹಾಗೆಯೇ ದುಡಿಯುತ್ತಾಳೆ, ಆದರೂ ಯೋಕಾನಿಗೆ ಆಕೆ ಮರಗಾಲಿ ಸಾಯ ಕಲ್ಲ ತಂದಿದ್ದಾಳೆ, ಆದ್ದರಿಂದ ತಾನು ಆಕೆಗಿಂತ ಕಡಿಮೆಯ ತರಗತಿಯವನೆಂಬಂತೆ ಅವನಿಗೆನಿಸಿತು. ಆಕೆ ಸೈಕಲ್ಲ ತಂದ್ದರಿಂದ ತನಗಿಂತಲೂಒಡೆಯರು ಆಕೆಯನ್ನು ಹೆಚ್ಚಾಗಿ ಪ್ರೀತಿಸುವಳು. ಆದರೂ ಈ ಹೆಂಗಸಿಗೆ ದುಡ್ಡು ಎಲ್ಲಿಂದ ಬಂತು ? ಎಂದು ಇನ್ನೊಂದು ಕ್ಷಣದಲ್ಲಿ ವಿಚಾರ ಮಗ್ನನಾದನು. ನೃಪೇಶ ಬಂದಾಕ್ಷಣವೇ ಹರನಾಥ ಅವನಿಗೆ ಈ ಸುದ್ದಿ ತಿಳಿಸಿದ. ಅವನೂ ಅಚ್ಚರಿ ಬಿಟ್ಟು ಆಕೆಯನ್ನು ಕರೆಕಳಿಸಿದ. ಆಕ ಬ೦ದಳು; ಸಾಯ ಕಲ್ಲ ಕೊಳ್ಳಲಿಕ್ಕೆ ಅವಳಿಗೆ ದುಡ್ಡು ಎಲ್ಲಿತ್ತೆಂದು ಕೇಳಿದನು. ಆಕೆಯು