ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ ರಿ ಕೆ. ಶ್ರೀಮತಿ ಸೀತಾದೇವಿಯವರು ಬಂಗಾಳಿಯಲ್ಲಿ ಬಗೆದ ಕತೆಗಳು ಇವುಗಳಲ್ಲಿ ಚಿತ್ರಿಸಿರುವ ಪ್ರೀತಿ ದಿವ್ಯ ಪ್ರೀತಿ, ಈ ಪ್ರೀತಿಯನ್ನ ಬಾಳಿನ ಕಂಡು ಆನಂದಿಸತಕ್ಕುದಾಗಿದೆ ಆದರೆ ಲೋಕದಲ್ಲಿ ವ್ಯಾಪಾರೀ ಬುದಿ ಯು ಪ್ರಬಲವಾಗಿ ಈ ಕತೆಗಳಲ್ಲಿ ಕಾಣಿಸಿದ ಅಮೃತ ಸದೃಶ ಪ್ರೀತಿಯು ಕಣ್ಮರೆಯಾಗುತ್ತಿದ್ದು ದುರ್ದೈವ ಇಂತಹ ಕತೆಗಳನ್ನು ಗಂಡು, ಹೆಣ್ಣು ಮಕ್ಕಳು ಓದಿ ತಮ್ಮ ದೃಷ್ಟಿ ಯನ್ನು ಪವಿತ್ರ ಮಾಡಿಕೊಳ್ಳಬಹುದುಗಿದೆ. ತಾಯ ಬೆಲೆಯೆ ತಿಳಿಯದೆ ಅವಳಿಗೆ ಅನ್ಯಾಯ ಬಗೆವ ಪಾಪವು ಹಲವರಿಂದ ತಿಳಿಯದೆಯೆ ಆಗುತ್ತದೆ, ಆದರೆ ಚಿಕ್ಕಂದು ತಾಯಿ, ಸಾಕಿ ಸಲುಹಲು, ಪಡುವ ಕಷ್ಟಗಳ ಅರಿವು ಉಂಟಾದರೆ ಮಕ್ಕಳು ದೊಡ್ಡವರಾದ ಬಳಿಕ ತಾಯಲ್ಲಿ ತಮ್ಮ ಆದರೆ ಪ್ರೀತಿ ಗಳನ್ನು ಎಂದೂ ಕಳೆದುಕೊಳ್ಳಲಾರರು ಇದರಿಂದ ಬಾಳಿನಲ್ಲಿ ನೆಮ್ಮದಿಯು ಹೆಚ್ಚಿ ಸಂಸಾರಿಕ ಸೌಖ್ಯವು ದೊರೆಯಲು ಸಹಾಯವಾಗುವುದೆಂಬ ಭಾವನೆ ಯಿಂದ ನನ್ನ ಸೋದರ ಸೋದರಿಯರಿಗೆ ಈ ನನ್ನ ಅಲ್ಪ ಕಾಣಿಕೆಯನ್ನು ಸಲ್ಲಿಸುತ್ತಿದ್ದೇನೆ ಹಿ, ನೀ.