ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅದನ್ನು ಹುಡುಕಲು ತೊಡಗಿದ; ಮನೆಯಲ್ಲಿಯೇ ಯಾರಾದರೂ ಮನೆ ಯವರೇ ಕಳ್ಳರಾಗಿರಬೇಕೆಂದು ಸೂಚಿಸಿದ, ಆಯಳು ಮಾತ್ರ ಮೌನ ೪ಾಗಿಯೇ ಇದ್ದಳು. ಬಿರುಗಾಳಿ ಬೀಸಿಹೋದಮೇಲೆ ಮನೆಯು ಸ್ವಾಭಾವಿಕವಾಗಿ ಮೌನ ವಾಯಿತು, ನೃಪೇಶ ತನ್ನ ಕೆಲಸದಲ್ಲಿ ತೊಡಗಿದ, ಹರನಾಥ ಪೇಟೆಗೆ ಹೋದ. ಹಾಲನ್ನು ಅರ್ಧವೇ ಕುಡಿದು, ಅತ್ತು ಅತ್ತು ಶೋಕಾ ಮಲಗಿ ಕೊಂಡನು, ಆಯಳು ಮೌನಳಾಗಿ ಧ್ವರಾಂಡದಲ್ಲಿ ಕುಳಿತಿದಳು, ಒಮ್ಮೆಲೇ ಹರನಾಥ ಅಚ್ಚರಿಬಡುತ್ತ ಒಳನುಗ್ಗಿ ಕೇಳುತ್ತ ಒಡೆಯರೆ, ಟ್ರಾಯಿಸಿಕಲ್ಲ ಸಿಕ್ಕಿತು ” ಎಂದು ಹೇಳಿದ, ವರಾಂಡದಲ್ಲಿ ಕುಳಿತ ಆಯಳ ಮುಖವು ಒಂದು ತೆರನಾಯಿತು ನೃಪೇಶ ಆತುರತೆಯಿಂದ ಕ ಳಿದ. • ಎಲ್ಲಿ ಆದೆ ? ” ಹರನಾಧ ಹೇಳಿದ ಬೀದಿಯ ಒಂದು ಮೂಲೆಯಲ್ಲಿ ಮದ್ರಸಿಯವರ ಒಂದು ಅಂಗಡಿ ಆದೆ. ಅಲ್ಲಿ ಅವನು ಹಳೆಯ ಸಾಯಕಲ್ಲಗಳನ್ನು ರಿಪೇರಿ ಮಾಡುತ್ತಾರೆ ಅಯ ನಸುಕಿನಲ್ಲಿದೆ. ಅಲ್ಲಿಗೆ ಒಯ, ಮಾರೆಂದು ಅವರಿಗೆ ಹೇಳಿದ್ದಾಳಂತೆ. ತನ್ನ ಕಿವಿಗಳನ್ನೇ ನೃಪೇಶನಿಗೆ ನಂಬುವದಕ್ಕೆ ಆಗಲಿಲ್ಲ. ಆಯ ಹೀಗೇಕೆ ಮಾಡಿದಳು ? ಆಕೆ ಕಲಸಕ್ಕೆ ಬಂದಂದಿನಿಂದ ಒಂದು ಕಾಸಿನ ಬೆಲೆ ಬರುವ ವಸ್ತುವನ್ನೂ ಈ ಮೊದಲು ಮಾರಲಿಕ್ಕೆ ಕೊಟ್ಟಿಲ್ಲ. ಸಂಬ ತಕ್ಕಾಗಿ ದುಡಿಯುತ್ತಿರುವಾಗ, ತನ್ನ ಸಂಬಳದಲ್ಲಿ ಯ ಬಹುಭಾಗವನ್ನೆ ಮಗುವಿಗಾಗಿ ವೆಚ್ಚ ಮಾಡುತ್ತಿದ್ದಳು. ಈಗ ಆಕೆ ಸ೦ಬಳವಿಲ್ಲದೆ ದುಡಿದರೂ ಮಗುವನ್ನು ಮೊದಲಿಗಿಂತ ಹೆಚ್ಚಾದ ಲಾಲನೆ ಪಾಲನೆಗಳಿಂದ ನೋಡುತ್ತ ಬಂದಿದ್ದಾಳೆ. ಇಂದು ಇದನ್ನೇಕೆ ಮಾರಿದಳು ? ಆಕಯ ಸ್ವತಃ ಹೀಗೆ ಮಾಡಿರದ ವಿನಃ ಕರನಾಥನು ಎಂದೂ ಚಾಡಿ ಹೇಳುವ ಧೈರ್ಯ ಮಾಡಿ ಲಾರನು; ಎಷ್ಟೋ ರೀತಿಯ ವಿಚಾರಗಳು ನೃಪೇಶನ ತಲೆಯಲ್ಲಿ ಸುಳಿದಾಡಿ ದವು; ಅವನಿಗೆ ಏನು ಮಾಡುವದೆಂಬುದೇ ತಿಳಿಯದ .ಯಿತು, ಹರನಾಥ ನನ್ನೆ ಪುನಃ ಕೇಳಿದೆ

  • ನಿಶ್ಚಯವಾಗಿಯೂ ಆಕೆ ಕೊಟ್ಟು ಬಂದಿದ್ದಾಳೆಯೇ?”