ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಾಯಿ ಇರುಳು ಕತ್ತಲೆಯೊ೦ದಿಗೆ ಮೆಲ್ಲಮೆಲ್ಲನೆ ಹಿಂದೆ ಸರಿಯುತ್ತಿತ್ತು. ಹಣ ತೆಯಲ್ಲಿ ಎಂಣೆ ತೀರಿದಾಗ ಜ್ಯೋತಿ ನಂದಿ ಬರಿಯ ಬತ್ತಿಯ ತುದಿಯು ಕೆಂಪಗೆ ಪ್ರಜ್ವಲಿಸುವಂತೆ ಮ ಡಣದ ಬಾನಿನಲ್ಲಿ ಬೆಳ್ಳಿ ಬೆಳಗುತ್ತಿತ್ತು. ಮಂದ ಸಿಲನು ಮಂದಮಂದವಾಗಿ ಸುಳಿಯಲುಪಕ್ರಮಿಸಿದ್ದ ನು. ನಗರ * ಭೆಯವರ ಹೊಲಸನ್ನು ಚಲ್ಲುವ ಬಂಡಿಗಳು ಸದ್ದು ಮಾಡಿ ನಿದ್ರೆಯಲ್ಲಿ ವೈ ಮರೆತ ನಗರವನ್ನೆಲ್ಲ ಜಾಗ್ರ ತವನ್ನಾಗಿ ಮಾಡುತ್ತಿದ್ದವು ಆಗ ಕಮಲಾ ಎಚ್ಚತ್ತಳ; ಅದೇ ಸಮಯಕ್ಕೆ ಸರಿಯಾಗಿ ಅವಳ ಪಕ್ಕದಲ್ಲಿ ಮಲಗಿದ ವುಟ್ಟ ಕೂಸೂ ಎಚ್ಚತ್ತಿತು, ಎಲೆವನೆಗಳಲ್ಲಿ ಪಕ್ಕಿಗಳು ಸರಸದಿಂದ ನಲಿದಾಡು ವಂತೆ ತಾಯಿ ಮಗಳು ಹಾಸಿಗೆಯಲ್ಲಿ ಆಟವಾಡಲು ಮೊದಲುಮಾಡಿದರು. ಕೋಣೆಯಲ್ಲಿ ಇನ್ನೂ ಕತ್ತಲೆಯಿತ್ತು. ಪಕ್ಕಿ ನರಿಯೊಂದು ಗೂಡಿನಲ್ಲಿ ರೆಕು ಗೆದರಿ ಚಟಪಡಿಸುವಂತೆ ಪುಟ್ಟ ಕೂಸು ಹಾಸಿಗೆಯಲ್ಲಿಯೆ ಕಾಲು ಬಡಿದ } ಕೈ ಕುಣಿಸುತ್ತ ತಾಯಿಯ ಮ ಖವನ್ನೇ ದಿಟ್ಟ ಸುತ್ತಿತ್ತು. ಕಮಲಾ ಆಕೆಗೆ ಮುತ್ತನೆಂದು ಕೊಟ್ಟು ಸಡಲಿದ ಸೀರೆಯ ನೀರಿಗೆಗಳನ್ನು ಎಡಗೈಯಿಂದ ಹಿಡಿದುಕೊಂಡು ಎದ್ದಳು. ಅತ್ತಿತ್ತ ಸರಿದ ಹೊದಿಕೆಗಳನ್ನು ಪುನಃ ಸರಿ ಯಾಗಿ ಮಕ್ಕಳ ಮೈ ತುಂಬ ಹೊದೆಯಿಸಿದಳು, ರಾತ್ರಿ ಮಲಗುವಾಗ ಪ್ರತಿ ಯೊಬ್ಬರಿಗೂ ಒಂದೊಂದು ಛಾದರವನ್ನು ಹೊಕ್ಕಿ ಮಲಗಿಸುತ್ತಾಳೆ. ಬೆಳಿಗ್ಗೆ ಎದ್ದು ನೋಡಿದಾಗ ಅವೆಲ್ಲವು ಒ೦ದು ಮೂಲೆಯಲ್ಲಿ ಗುಡ್ಡಿಯಾಗಿ ರಾಶಿ ಬೀಳುತ್ತಿದ್ದವು. ಹೀಗೆ ರಾಶಿಯಾಗಿ ಬಿ: ಇವು ಆಕೆಗೊಂದು ಸಮಸ್ಯೆ ಯಾಗಿ ಬಿಟ್ಟಿತ್ತು. ಬೆಳಕು ಮತ್ತು ಸುಳಿಗಾಳಿ .೦ದ ಪತಿಯ ನಿದ್ರೆಗೆ ಭಂಗ ಬಂದೀತೆಂದು ಕಮಲಾ ಆತನ ಪಾದದ ಬಳಿಯಲ್ಲಿರುವ ಕಿಡಕಿಯನ್ನು ಮುಚ್ಚಿದಳು. ಮತ್ತೆ ಹಾಸಿಗೆಯಲ್ಲಿ ಪವಡಿಸಿ ಚಂಪುವನ್ನು ಎದೆಗೆ ಅಪ್ಪಿ ಕೊಂಡು, ಆಕೆಯ ಪುಟ್ಟ ಪಾದಗಳನ್ನು ಸೇವರಿಸುತ್, ಚಂಪಕದ ಮೊಗ್ಗು ಗ ಳಂತಿದ್ದ ಆಕೆಯ ಕಾಲ್ಪೆರಳುಗಳನ್ನು ದಿಟ್ಟಿಸುತ್ತಿದ್ದಳು. ಬೆಳಗಿನಲ್ಲಿಯೇ ಆಕೆಗೆ ಸ್ವಲ್ಪ ಬಿಡುವು. ಕಮಲಾ ಮುಗುಳು ನಗೆ ನಕ್ಕರೆ, ಚ೦ಪು ಕೇಕೆ