ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ಧರ್ಮಸಾಮ್ರಾಜ್ಯಮ್ (ಸಂಧಿ C• : , .. ಎ. • . . . . . . ••• ಬೇಗನೆ ಕರೆದುಕೊಂಡು ಬಾರೆಂದು ಕಳುಹಿಸಿ ಎಷ್ಟೋ ಹೊತ್ತಾದರೂ ಹಾಗೆಮಾಡದ್ರೆ ಇಲ್ಲಿವಳೊಡನೆ ಸರಸವಾಡುತ್ತ ಕುಳಿತಿರುವೆ ! ಚೆನ್ಯಾ ಯಿತು ! ಚೆನ್ನಾಯಿತು !! ?” ಎಂದು ಗಜರಲಾಗಿ, ಇಂದುಮತಿಯು ಉತ್ಸಾಹರಹಿತಳಾಗಿ: -- ನಾನು ಎಷ್ಟು ವಿಧವಾಗಿ ಒಡಂಬಡಿಸಿದರೂ ಒಪ್ಪದೆ ಧಿಕ್ಕರಿಸುವಳು, ಹಾಗಾದರೆ ನೀವೇ ಅವಳನ್ನು ಸಮಾಧಾನಪಡಿಸಿ ಕರೆದುಕೊಂಡು ಬನ್ನಿರಿ; ನಾನು ಹೋಗುವೆನು.” ಎಂದು ವಿವಾಹಮಂಟ ಸಕ್ಕೆ ಹೊರಟುಹೋದಳು. ಆ ಬಳಿಕ ಕಿರೀಟವನು, ತಾನಿನ್ನು ಕಟಭಾಷೆಗಳನ್ನು ಪ್ರಯೋಗಿ ಸಿದರೆ ಕಾಠ್ಯವು ಕೆಟ್ಟು ಹೋಗುವುದೆಂಬ ಭೀತಿ ಯಿಂದ ಉನ್ಮಾದಿನಿಯನ್ನು ಕುರಿತು, ವಿನಯದೊಡನೆ:- ವತ್ಸೆ ! ಏಳಮ್ಮಾ ಏಳು; ಲಗ್ನವು ಮೀರಿಹೋಗುವುದು; ರಾಜನ ಯೋಜನೆಯನ್ನು ಬಿಡು; ಈಗ ನಾನು ಗೊತ್ತುಮಾಡಿರುವ ವರನು ಅವವಿಧದಲ್ಲಿಯ ರಾಜನಿಗಿಂತಲೂ ಕಡೆ ಯಾಗಿಲ್ಲ; ಅವನಾಗಲೇ ಒಂದು ವಿವಾಹಪೀಠದಮೇಲೆ ಕುಳಿತಿರುವನು; ಜಾಗ್ರತೆಯಾಗಿ ಬಂದು ವರಿಸು. ” ಎಂದು ಹೇಳಲು ಉನ್ಮಾದಿನಿಯು ಲಜ್ಜೆಯಿಂದ ಆನತಶಿರಸ್ತ್ರಳಾಗಿ, ಅಸಂಮತಿಯನ್ನು ವ್ಯಕ್ತಗೊಳಿ ಸುತ್ತ:- ಜನಕನೆ ! ಕುಮುದಿನಿಯ ಹೃತೊರಕವು ಜನಾಹ್ಲಾದಕರ ನಾದ ರಾಜನ ಕರಸ್ಪರ್ಶವಾದಲ್ಲದೆ, ಇತರ ಕೂರದ್ಯುತಿಗಳಿಂದ ವಿಕಸ ನವನ್ನು ಹೊಂದುವುದೆ ?” ಎಂದು ಹೇಳಲು, ಕಿರೀಟವನು ಸಖೇದ ನಾಗಿ ಜುಗುಪ್ಪೆಯಿಂದ:- ಈ ಮುಗ್ದಾ ಲಾಪಗಳಿಂದೀಗೇನೂ ಪ್ರಯೋ ಜನವಿಲ್ಲ ; ಮೂರ್ಖತನವನ್ನು ಮಾಡದೆ ಸುಮ್ಮನೆ ನಡೆ; ಮಕ್ಕಳು ತಂದೆ ತಾಯ್ಕಳ ಆಜ್ಞೆಯನ್ನು ಮೀರಬಾರದು. ” ಎಂದು ಹೇಳಲು ಉನ್ಮಾ ದಿನಿಯು ಮೌನದಿಂದ ಮುಖವನ್ನು ಹಿಂತಿರುಗಿಸಲು, ಕಿರೀಟವನು ಕೋಪಗೊಂಡು:-11 ಒಳ್ಳೆಯಮಾತಿನಿಂದೇಳು;ಎನ್ನ ಮನಸ್ಸಿಗೆದುಃಖವನ್ನೂ ಕೋಪವನ್ನೂ ಉಂಟುಮಾಡಬೇಡ.” ಎಂದು ಗದರಿಸಲು ಉನ್ಮಾದಿನಿಯು ಭೀತಳಾಗಿ, ಬಳಿಕ ವಿನಯದಿಂದ ನಮಸ್ಕರಿಸಿ, ಕೈಮಗಿದುಕೊಂಡು ದೈನ್ಯದಿಂದ:-