ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ ಪ್ರತಿಯಾಗಿ, ಭೋಗಾಭಿಲಾಷೆಯೂ, ದುಷ್ಕಾರ್ಯದಲ್ಲಿ ಪ್ರವೃತ್ತಿಯೂ, ಅನ್ಯಮತ ದ್ವೇಷವೂ ಉಂಟಾಗಿ, ಅನೇಕ ಸ್ತ್ರೀ ಪುರುಷರು ದುಷ್ಕಾಮಾಸಕ್ತರಾಗುತ್ತ ಬಂದರು. ಇದುಂದ ಮತದೆ ಷಗಳು ಪ್ರಬಲಿಸಿ, ಸ್ವಡಕಲಹಗಳುಂಟಾಗಿ, ಭರತ ಖಂಡದ ಧರ್ಮಾರ್ಥಗಳ ಬಿಗಿಯೇ ತಪ್ಪಿಹೋಯಿತು. ಈಗಲೂ ನಾಟಕ ಪ್ರದರ್ಶನ ಗಳಿಂದ ಸ್ತ್ರೀ ಪುರುಷರಿಗೆ ಆವಿಧವಾದ ಹಾನಿಗಳು ಆಗಾಗ್ಗೆ ಸಂಭವಿಸುತ್ತಿರುವುವು, ಈ ಎಷಕ್ಕೆ ಈಗಿನ ನಾಟಕಪ್ರ ದರ್ಶಕರು ಕಾರಣರಲ್ಲ. ಆದರೆ ಮತವೈರವನ್ನೂ ವಿಷಯ ಲಾಂಪತ್ಯವನ್ನೂ ಹೊಂದಿರ್ದ ಕಾಮಿಗಳಾದ ಕವಿಗಳೂ, ಮತ್ತು ಅಂತಹ ಕವಿಗಳಿಗೆ ಆಶ್ರಯವಸಿತ್ತು, ತಾವೂ ಭೋಗಾಂಧರಾಗಿ, ದುಷ್ಕಾಮುಗಳಲ್ಲಿ ಪ್ರವರ್ತಿಸಿ, ತಮ್ಮಾ ದುಷ್ಕಾಮಗಳನ್ನು ತೃಪ್ತಿ ಪಡಿಸಿಕೊಳ್ಳುದಕ್ಕಾಗಿ ತಾವು ಮಾಡಿದ ಸಾಹಸವನ್ನೂ ವಂಚನೆ ಗಳನ್ನೂ ಘೋರಕೃತ್ಯಗಳನ್ನೂ ಗಭಿ೯ಕರಿಸಿರುವ ಕಾವ್ಯಗಳನ್ನೂ ನಾಟಕಗಳನ್ನೂ ರಚಿ ಸುವಂತೆ ತಮ್ಮ ಆಸ್ಥಾನದ ಕವಿಗಳಿಗೆ ಆಜ್ಞೆಯನ್ನಿತ್ತ ಹಿಂದಿನ ಅವಿವೇಕಿರಾಜರೂ ಕಾರಣರೆಂದು ಹೇಳಬೇಕು ಆದರೆ, ಈ ಕವಿಗಳೂ ಮತ್ತಾ ರಾಜರುಗಳೂ ಪ್ರೌಢ ರಲ್ಲವೆಂದು ಅರ್ಥವಲ್ಲ, ಅವರು ಕವಿತ್ವದಲ್ಲಿ ಕಾಮಕೇಳಿಗಳಲ್ಲಿಯೂ ಪ್ರೌಢರಾ ಗಿರ್ದರೇ ಹೊರತು, ನಿತಿಯಲ್ಲಿಯೂ ಗುಣದಲ್ಲಿಯೂ ಧರ್ಮರಹಸ್ಯದಲ್ಲಿಯೂ ಸಾಕಾದ ಗಮನವನ್ನು ಕೊಡಲಿಲ್ಲ ವೆಂಬಂಶವು ಅವರುಗಳ ಕೃತಿಗಳಿಂದಲೇ ತಿಳಿದು ಬರುವುದು. ಆದಕಾರಣ, ಈ ಇತಿಹಾಸದಲ್ಲಿ ಅಂತಹ ದೊಷಗಳಿಗೆ ಅವಕಾಶವಿಲ್ಲದೇ ಇರ್ಮದನ್ನೂ, ಮತ್ತಾರಾಜರನ್ನೂ ಪ್ರಜೆಗಳನ್ನೂ ಧರ್ಮಪಥಾನುಗಾಮಿಗಳನ್ನಾಗಿ ಮಾಡಲು ಅವಶ್ಯಕವಾದ ನೀತಿಗಳಿಂದಲೂ ಧರ್ಮರಹಸ್ಯಗಳಿಂದಲೂ ಗರ್ಭಿಕೃತ ವಾಗಿರುವುದನ್ನೂ, ಅರಿತು ಸಂತುಷ್ಟನಾಗಿ, ಈ ಇತಿಹಾಸಕ್ಕೆ 14 ಧರ್ಮಸಾಂರಾಜಿ” ವೆಂದು ಹೆಸರನ್ನಿಟ್ಟೆನು ಅದಲ್ಲದೆ ಈ ಗ್ರಂಥದ ಆಶಯದಂತ ರಾಜನು ಧರ್ಮಪರಾಯಣನಾಗಿಯ, ಸೇನಾಧಿಪನೇ ಮುಂತಾದ ರಾಜಕರು ತಮ್ಮ ರಾಜನ ಅವಸರಕ್ಕಾಗಿ ತಮ್ಮ ತನು ಧನ ಪ್ರಾಣಗಳನ್ನಾದರೂ ಅರ್ಪಿಸುವರಾಗಿಯ, ಸ್ತ್ರೀಯರು ತಮ್ಮ ಪಾತಿವ್ರತ್ಯವನ್ನು ಕಾಪಾಡಿಕೊಳ್ಳುದಕ್ಕಾಗಿ ಪ್ರಾಣವನ್ನಾದರೂ ಲಕ್ಷಿಸದವರಾಗಿಯೂ, ಮತ್ತು ಪ್ರಜೆಗಳು ಸ್ವಧರ್ಮ ಪ್ರವೃತ್ತಿ ಸ್ವದೇಶ ಸ್ವಗೌರವಗಳನ್ನು ಎಂತಹ ದುರ್ದಶೆಯಲ್ಲಿಯೂ ಬಿಡದೆ, ರಾಜಶಾಸನವೇ ತಮಗೆ ಭಗವಚ್ಚಾಸನವೆಂದು ಭಾವಿಸಿ, ಅದಕ್ಕೆ ಸರ್ವವಿಧದಿಂದಲೂ