ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Che Kingdom of Righteousness, ಧರ್ಮಸಾಮಾಮ್ ADORATION. ಮ ೦ ಗ ಳ ಮ್ ಧರ್ಮೋ ವಿಷ್ಣು ವಿರಿಂಚಿನೀಲಗಳಕೃದ್ಧರ್ಮ೦ ವಿರಾಟ್ಟೇವತೇ || ಧರ್ಮಗ್ಸ್ವ ಸುಶಾಸಿತಂ ಜಗದಿದಂ'ಧರ್ಮಾಯ ದದ್ಯಾದ್ಯ ಪುಟ | ಧರ್ಮಾಾಪರಂ ಪದಂ ಸುಖತರಂ ಧರ್ಮಸ್ಯ ಮಲಂ ದಯಾ | ಧರ್ಮೆ ಚಿತ್ರಲಯೋ ಹಿ ಮುಕ್ಕಿರನಘಾ ಹೇ ಧರ್ಮ ಪಾಯಾ ಜಗತ್ || [೧ ತಾತ್ಸರ:-ಧರ್ಮವು (ತ್ರಿಮೂರ್ತಿಗಳಾದ) ಬ್ರಹ್ಮ-ವಿಷ್ಣು -ಮಹೇಶ್ವರರನ್ನು ಸೃಷ್ಟಿಸಿದುದು; ಆ ಧರ್ಮವನ್ನು ವಿರಾಟಪುರುಷನೂ ಸೇವಿಸುವನು; ಆ ಧರ್ಮದಿಂದಲೇ ಈ ಜಗತ್ತು ಕ್ರಮಪಡಿಸಲ್ಪಟ್ಟಿರುವುದು; ಆ ಧರ್ಮಕ್ಕಾಗಿ (ಮನುಷ್ಯನಾದವನು ತನ್ನ ಶರೀರವನ್ನಾದರೂ ಅರ್ಪಿಸಬೇಕು; ಆ ಧರ್ಮಕ್ಕಿಂತಲೂ ಸುಖತರವಾದ ಸ್ಥಾನವು ಮತ್ತೊಂದಿಲ್ಲ ವ; ಆಧರ್ಮದ ಬುಡವೇ ದಯೆಯು; ಆ ಧರ್ಮದಲ್ಲಿ (ಮನುಷ್ಯನ) ಚಿತ್ರವು ಲೀನವಾಗುವುದೇ ಪಾಪರಹಿತವಾದ (ಪುನರಾವೃತ್ತಿರಹಿತವಾದ) ಮುಕ್ತಿಯು; ಅಂತಹ ಎಲೆ ಧರ್ಮವೇ?! (ಪರಬ್ರಹ್ಮನೆ ಅಥವಾ ಪರಮಾತ್ಮನೆ!) ಲೋಕವನ್ನು ರಕ್ಷಿಸು] ಜೇತ!ಂತಯ ಸಂತತಂ ಗುರುವರಂ ಜ್ಞಾನಾಕರಂ ಶಂಕರಂ | ಸರ್ವೆಶಂ ನುತಧರ್ಮದೇಹರುಚಿರ ಸ್ಮಾತ್ಯ ಪ್ರಭಾಭಾಸುರಮ್ || ಉತ್ಪತ್ತಿಸ್ಥಿತಿಮೃತ್ಯುಭಂಗಲಹರೀಸಂಸಾರಥೋರಾರ್ಣವಾ~ | ದಕ್ಷಂ ಪಾಲಯಿತುಂ ಜಗತಿತರಾಮಶ್ವತ್ಥನಾರಾಯಣಮ್ || [೨, ತಾ|| ಎಲೈ ಮನಸ್ಸೇ ! ಶ್ರೇಷ್ಟನಾದ ಗುರುವೂ ಜ್ಞಾನಕ್ಕೆ ಸ್ಥಾನನೂ, ಮಂಗಳಕರನೂ, ಪ್ರಪಂಚಕ್ಕೆ ಅಧಿಪತಿಯೂ, ಸ್ವಪ್ರಕಾಶದಿಂದ ಬೆಳಗುತ್ತಿರುವವನೂ ಸಂಸಾರಸಮುದ್ರದಲ್ಲಿ ಹುಟ್ಟದು, ಬದುಕುವುದು, ಸಾಯುವುದು ಎಂಬ ಅಲೆಗಳ ಹೊಡೆದಾಟಕ್ಕೊಳಗಾಗಿರುವ ಪ್ರಾಣಿವರ್ಗವನ್ನು ಉದ್ಧರಿಸಿ ಕಾಪಾಡುವುದರಲ್ಲಿ ಅತ್ಯಂತ ಕೌಶಲ್ಯವುಳ್ಳವನೂ ಆದ ಆ ಅಶ್ವತ್ಥನಾರಾಯಣಭಗವಂತನನ್ನು ನಿರಂತರವೂ ಭಜಿಸು.] -me