ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧರ್ಮಸಾಮ್ರಾಜ್ಯಮ್ [ಸಂಧಿ ಮೊ ದ ಲ ನೆ ಯ ಅ೦ಗ ಒ೦ದನೆ ಯ ಸ೦ಧಿ WRONG ENVYING THE RIGHT. ಧರ್ಮಪ್ರಭಾವ ಮತ್ತು ಅಧರ್ಮಾಂಕುರ. ಒಂದಾನೊಂದು ದಿನ ದೇವೇಂದ್ರನಾದ ಶಕ್ರನು ದಿಕ್ಷಾಲರುಗ `ಳಿಂದಲೂ ಬೃಹಸ್ಪತಿ ಮೊದಲಾದ ಮಂತ್ರಿಗಳಿಂದಲೂ ಅಲಂಕೃತಗಳಾದ ದಿವ್ಯಾಸನಗಳ ಮಧ್ಯದೊಳ್ ಮೆರೆವ ಧರ್ಮಾಸನದಲ್ಲಿ ಶಾಂತಿಸ್ವರೂಪಿಣಿ ಯಾದ ಶಚೀದೇವಿಯೊಡನೆ ಮಂಡಿಸಿ ಬೃಹಸ್ಪತಿಯನ್ನು ಕುರಿತಂತೆಂ .ದನು_“ ಪೂಜ್ಯರೇ ! ಕೆಲವುದಿನಗಳಿಂದಲೂ ಈ ಸಿಂಹಾಸನದ ಮೇಲೆ ಕುಳಿತೊಡನೆಯೇ ಆವುದೋ ಒಂದುವಿಧವಾದ ತಾಪವೂ ಭೀತಿಯ ಎನಗುಂಟಾಗುವುದು ! ಇದಕ್ಕೆ ಕಾರಣವು ಏನಾಗಿರಬಹುದು ?” ಇದನ್ನು ಕೇಳಿದ ಬೃಹಸ್ಪತಿಯು ದಿವ್ಯದೃಷ್ಟಿಯಿಂದ ಒಂದು ಕ್ಷಣಕಾಲ ಯೋಚಿಸಿದ ಬಳಿಕ ಸಂಕೋಚದಿಂದ ಇಂತೆಂದನು_C ಸಹಸ್ರಾಕ್ಷನೇ ಅದರ ಕಾರಣವನ್ನು ನಿನ್ನಲ್ಲಿ ಹೇಳುವುದಕ್ಕೆ ಎನ್ನ ಮನವು ಸ್ವಲ್ಪ ಹಿಂತೆಗೆ ಯುವುದು.” ಇದನ್ನು ಕೇಳಿದ ದೇವೇಂದ್ರನು ಕಳವಳಗೊಂಡವನಾಗಿ ಇಂತೆಂದನು:-“ ನಿಮ್ಮ ಮಾತಿನಿಂದ ಎನ್ನ ಭೀತಿಯು ಮತ್ತಷ್ಟು ವೃದ್ಧಿಯಾಗುವುದು ಕಾರಣವನ್ನು ತಡಮಾಡದೆ ಹೇಳಿರಿ !” ಬಳಿಕ ಬೃಹಸ್ಪತಿಯು ಇಂತೆಂದನು: “ಹಾಗಾದರೆ ಹೇಳುವೆನು ಕೇಳು ಅವನೋ ಮಹಾತ್ಮನಾದ ಒಬ್ಬ ರಾಜರ್ಷಿಯು ಭೂಲೋಕದಲ್ಲಿ ಅವ ತಾರಮಾಡಿರುವಂತೆಯ, ಆತನ ಧರ್ಮಪ್ರಭಾವವು ನಿನ್ನ ಆಸನವನ್ನು ವ್ಯಾಪಿಸಿ ನಿನಗೀರೀತಿಯಾದ ತಾಪವನ್ನೂ ಭೀತಿಯನ್ನೂ ಉಂಟು ಮಾಡಿರುವಂತೆಯೂ ತೋರುವುದು; ಮುಖ್ಯವಾಗಿ ನಿನ್ನ ಇಂದ್ರಪಟ್ಟದ .ಅವಧಿ ಮುಗಿಯುವ ಕಾಲವು ಪ್ರಾಪ್ತವಾಗಿರುವುದರಿಂದ ಈ ನಿಮಿ ತಗಳುಂಟಾಗಿರುವುವು. ” ಇದನ್ನಾ ಕರ್ಣಿಸಿದೊಡನೆಯೇ ದೇವೇಂದ್ರನು ಖಿನ್ನ ಮುಖನಾಗಿ ತನ್ನಲ್ಲಿತಾನೇ ಈರೀತಿ ಮಾತನಾಡಿಕೊಂಡನು :-