ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ಮೊದಲನೆಯ ಆಂಗ

  • 1/4 \+1

ಅಸಾಧುವಾಗಿರ್ದರೂ (ಹೊರಗೆ) ಯೋಗ್ಯವಾಗಿಯೂ ಕಾಗ್ನಿರುವು ದುಂಟು; ಹೀಗಿರುವಲ್ಲಿ ಒಂದು ವಸ್ತುವಿನ ತತ್ವವು ಅನೇಕವಿಧದಿಂದ ಪರೀಕ್ಷಿಸಲ್ಪಟ್ಟ ಹೊರತು, ಕ್ಷಿಪ್ರಪ್ರಯತ್ನದಿಂದೆಂದಿಗೂ ವ್ಯಕ್ತವಾಗ ಲಾರದು.] ಆದಕಾರಣ ನಾವೀರಾಜಧಾನಿಯ ದೀಪಪ್ರಕಾಶವನ್ನೂ ಸ್ವರ್ಣ ಕಲಶಗಳನ್ನೂ ದೂರದಿಂ ನೋಡಿದಮಾತ್ರದಿಂದ, ಇದು ಸರ್ವವಿಧದ ಅಯ ಸಮಿಾಚೀನವಾಗಿರುವುದೆಂದೂ, ಇದರ ರಾಜನನ್ನು ಧರ್ಮಾತ್ಮ ನೆಂದೂ, ಸತ್ತ್ವಜಾಪಾಲಕನೆಂದೂ ನಿರ್ಧರಿಸಲವಕಾಶವಿಲ್ಲವು ; ನಾವು ಈ ರಾಜಧಾನಿಯಂತೆಯೇ ಮಹೋನ್ನತವಾಗಿರ್ದ ಅನೇಕ ಪುರವರಗಳನ್ನು ಹಿಂದೆ ನೋಡಿದೆವಷ್ಟೆ; ಅಲ್ಲಿ ಪ್ರಜೋಪದ್ರವಗಳು ಸಂಭವಿಸಿರ್ದರೂ ಅಲ್ಲಿನ ರಾಜರು ಸ್ವಭೋಗನಿರತರಾಗಿ ಧರ್ಮವನ್ನು ತೃಣೀಕರಿಸಿರುವು ದಿಲ್ಲವೆ ? ನಾವೀಗ ಅದೃಶ್ಯರೂಪವನ್ನು ಅಳವಡಿಸಿಕೊಂಡು ಹೋಗಿ ಈ ರಾಜನ ಮತ್ತಿವರಾಷ್ಟ್ರದ ಪ್ರತಿಯೊಂದು ವಿಷಯವನ್ನೂ ಪರೀಕ್ಷಿ ಸೋಣ ನಡೆ, ” ಎಂದು ಹೇಳಿ ಈರ್ವರೂ ರಾಜಧಾನಿಯನ್ನು ಪ್ರವೇಶಿ ಸಿದರು. -ಆGe ಮೂರನೆಯ ಸಂಧಿ. THE KING AND HIS HAPPY COUNCIL. ರಾಜರಾಜಕಸಂಪತ್ತಿಗಳು. ಇತ್ತಲಾ ಸಮಯಕ್ಕೆ ಸರಿಯಾಗಿ ಈರಾಷ್ಟ್ರಾಧಿಪತಿಯಾದ ದೇವ ಸೇನಮಹಾರಾಜನು ತನ್ನ ಮನ್ತಿಯಾದ ಸುಮತಿ, ಪ್ರಧಾನನಾದ ರಾಜ್ಯ ವರ್ಧನ, ಸೇನಾಧಿಪನಾದ ಅಭಿಪಾರ ಇವರುಗಳಿಂದಲೂ, ಪ್ರಜಾ ಪ್ರಮುಖರಿಂದಲೂ, ಪರಿವೇಷ್ಟಿತನಾಗಿ ಮಂತ್ರಾಲೋಚನಾಸಭೆಯಲ್ಲಿಕು ಳಿತು, ಆ ಸಭಿಕರನ್ನು ಕುರಿತಿಂತು ಪ್ರಶ್ನೆ ಮಾಡಿದನು: “ ಎಲೈ ಎನ್ನಾ