ಈ ಪುಟವನ್ನು ಪರಿಶೀಲಿಸಲಾಗಿಲ್ಲ.

90 ಧರ್ಮಸಾಮ್ರಾಜ್ಯಮ್ [ಸಂಧಿ •vvvv yyyyy 11 1 11r 1t 44 YUV4 M ಪರವೃತ್ತಿಗಳನ್ನು ಅವಲಂಬಿಸಿದರೆ, ಅಂಥವರು ಉಭಯಭ್ರಷ್ಟರಾಗುವುದ ಲ್ಲದೆ ವೃತ್ತಿಗಳ ಪರಿಣಾಮಗಳು ಕೆಟ್ಟು ಹೋಗಿ ರಾಜ್ಯ ಕುಟುಂಬದ ಸುಖ ಯಾತ್ರೆಗೂ ಮತ್ತು ರಾಜನ ಆಯಕ್ಕೂ ಕುಂದುಂಟಾಗುತ್ತಾದುದರಿಂದ, ಅಂತಹ ಸ್ವವೃತ್ತಿಭ್ರಷ್ಟರನ್ನು ಎಮ್ಮ ರಾಜನು ದಂಡಿಸುವನು. ಆದಲ್ಲದೆ ಮನುಷ್ಯನು ಆವ ಕುಲವೃತ್ತಿಯನ್ನು ಅವಲಂಬಿಸಿರ್ದರೂ ಧರ್ಮಾನು ಸಾರವಾಗಿ ನಡೆದುಕೊಂಡರೆ ಇಹಪರಸುಖಂಗಳೆರಡನ್ನೂ ಪಡೆಯಬಹು ದಲ್ಲವೆ ?” ಚಿತ್ರನು ಆಶ್ಚರ್ಯದಿಂದ;_r“ಒಳ್ಳೆಯದು ನೀನಾವದೇವ ರನ್ನು ಪೂಜಿಸುವೆ ? ಕುರುಬ:-“ಪ್ರತ್ಯಕ್ಷದೈವನಾದ ಎಮ್ಮ ಮಹಾ ರಾಜನನ್ನೂ, ಪರೋಕ್ಷದೈವನಾದ ಯನ್ನ ಅಂತರಾತ್ಮನನ್ನೂ ಪೂಜಿಸು ವೆನು. ಚಿತ್ರ:- ನಿಮ್ಮ ಮಹಾರಾಜನ ಶತ್ರುಗಳಾರಾದರೂ ಅವನನ್ನು ಹಿಂಸಿಸುವುದಕ್ಕೆ ಯತ್ನಿಸಿದರೆ ಆಗ ನೀನೇನುಮಾಡುವೆ ? ” ಕುರುಬನು ನಗುತ್ತ:-11 ಎಮ್ಮ ಮಹಾರಾಜನನ್ನು ಇತರದೇಶದ ರಾಜರುಗಳೆಲ್ಲರೂ ಧರ್ಮಸ್ವರೂಪನೆಂದು ಪೂಜಿಸುತ್ತಿರುವಲ್ಲಿ ಹೊಸಶತ್ರುವೆಲ್ಲಿಂದ ಬರು ವನು ? (ಕೋಪದಿಂದ) ಹಾಗೆ ಒಂದುವೇಳೆ ದುರಾಶಾಸೂಯೆಗಳಿಂದ ಪ್ರೇರಿತರಾದ ದುಷ್ಟರಾಜರಾರಾದರೂ ಪ್ರಜಾಪಿತನಾದ ಎಮ್ಮ ಮಹಾ ರಾಜನನ್ನು ಹಿಂಸಿಸಲು ಯತ್ನಿಸಿದರೆ ತಂದೆಯನ್ನು ದುಷ್ಟರು ಹಿಂಸೆಮಾ ಡುವಸಂದರ್ಭದಲ್ಲಿ ಸುಪುತ್ರರು ತಮ್ಮ ತನು ಧನ ಪ್ರಾಣಗಳನ್ನಾದರೂ ಲಕ್ಷಿಸದೆ ಹೇಗೆ ತಂದೆಯನ್ನು ಕಾಪಾಡುವರೋ ಅದರಂತೆಯೇ, ನಾನೂ ಎಮ್ಮ ದೇಶದ ಪ್ರತಿಯೊಬ್ಬ ಪ್ರಜೆಯ ಮಾಡುವೆವು. ” ಎಂದು ಹೇಳಿ ತನ್ನ ಕೈಗೊಡಲಿಯನ್ನು ಅಳ್ಳಾಡಿಸಲುಪಕ್ರಮಿಸಿದನು. - ಇದನ್ನು ನೋಡಿದ ಚಿತ್ರನು ಲಜ್ಜೆಯಿಂದಲೂ ಆಶ್ಚರ್ಯದಿಂದಲೂ ಭೀತಿಯಿಂದಲೂ ಕೂಡಿ, ಇನ್ನು ಅವನಲ್ಲಿ ರ್ಕೋ ಪೋದ್ರೇಕಕರವಾದ ಮಾತುಗಳನ್ನಾಡುವುದು ಉಚಿತವಲ್ಲವೆಂದು ನಿಶ್ಚಯಿಸಿ, ನವ್ರಭಾವ ದಿಂದೀರೀತಿ ಹೇಳಿದನು:-* ಮಿತ್ರನೇ ! ಈಗ ನಮಗೆ ಭಕ್ತಕಾಲ (ಉಟದ ಹೊತ್ತು.) ಸಮೀಪಿಸಿತು ; ಇನ್ನು ನಾವು ಮುಂದಕ್ಕೆ ಹೊರಡುವವು. "