ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಧರ್ಮಸಾಮಾಜ್ಯಮ್ [ಸಂಧಿ ಬಳಿಕ ಸುಮತಿಯು ಒಂದು ಕ್ಷಣಕಾಲ ಆತ್ಮ ಚಚ್ಚಾಸೆಯನ್ನು ಮಾಡಿದ ಬಳಿಕ ಮಹಾರಾಜನನ್ನು ಕುರಿತು ವಿನಯಗೌರವಗಳಿಂದ ಇಂತೆಂದನು:- ದೇವ! ಈತನೇನೋ ಸುಲಸ್ತ್ರ ತನು ? * ಮನಿ ಚಿತ್ತಾಕರ್ಷಣದಕ್ಷ' ಎಂಬ ಪದವನ್ನು ಪ್ರಯೋಗಿಸಿರುವದರಿಂದ ಆ ಕನ್ಯಯು ಮಹಾರೂಪವತಿಯೆಂದೇ ಅರ್ಥವಾಯಿತು ; ಆದರೂ ಸ್ವವ ಸ್ತುಗಳನ್ನು ಇತರರಲ್ಲಿ ಶ್ಲಾಘಿಸುವದು ಲೋಕಸಾಮಾನ್ಯವು ; ಆದ ಕಾರಣ, ಎಮ್ಮಾಸ್ಥಾನದ ಪುರೋಹಿತಸೀಲಕ್ಷಣಙ್ಗರನ್ನು ಕಳುಹಿ ಪರೀ ಕ್ಷಿಸಿದ ಅನಂತರ, ಆ ಕಳ್ಳಿಯು ನಿನಗೆ ಅನುರೂಪೆಯೆಂದು ಅವರು ಹೇಳಿ ದರೆ ಆಗ್ಗೆ ಅವಳನ್ನು ಪರಿಗ್ರಹಿಸಬಹುದು. " ಇದನ್ನು ಕೇಳಿ ಸಂತುಷ್ಟನಾದ ದೇವಸೇನನು ಇಂತೆಂದನು:-“ಹಾ ಗಾದರೆ ಎಮ್ಮ ಆಸ್ಟಾನಪ್ರರೋಹಿತಸಿಗೂ ಸ್ತ್ರೀಲಕ್ಷಣನಿಗೂ ಕನ್ಯ ಯನ್ನು ಸುಕ್ಷಿಸಿಕೊಂಡು ಬಂದು ಎನಗೆ ತಿಳಿಯುವಂತಾಜ್ಞಾಪಿಸಿ, ಅವರುಗಳು ಬರುವ ವರ್ತಮಾನವನ್ನು ಮುಂದಾಗಿಯೇ ಕಿರೀಟವನಿಗೆ ಹೇಳಿಕಳುಹೋಣ ನಡೆ. ” ಎಂದು ಹೇಳಿ ಈರ್ವರೂ ಎದ್ದು ಹೊರಟು ಹೋದರು. -ಅಳಿ ಎರಡನೆಯ ಸಂಧಿ BEAUTY DELUDES KNOWLEDGE. ಅವಿದ್ಯಾಮಹಿಮೆ ಇತ್ತಲಾ ಕಿರೀಟವನು ತನ್ನ ಮಡದಿಯಾದ ಇಂದುಮತಿ ಯೊಡನೆ ಮನೆಯ ಹಜಾರದಲ್ಲಿ ಕುಳಿತು ಅವಳನ್ನು ಕುರಿತು ಸಂಭ್ರಮ ದಿಂದ ಈರೀತಿ ಪ್ರಶ್ನೆ ಮಾಡಿದನು:-( ಭದ್ರೆ ! ಪುರೋಹಿತಾದಿಗಳನ್ನು ಉಪಚರಿಸುವುದಕ್ಕೆ ಉನ್ಮಾದಿನಿಯನ್ನೇ ನಿಯಮಿಸಿದರೆ, ಅವಳೇ ಉಪ ಚರಿಸುವುದರಿಂದ, ಅವಳ ವಿನಯಾದಿ ಗುಣಸಂಪತ್ತಿಯು ಅವರಿಗೆ ತಿಳಿದು