ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಕಪೋತವಾಕ್ಯ

೫


ಮರಳಿ ಪುರುಷ ಬರೆ ಕರೆಕರೆಗೆಯ್ವಂತ | ದುರುಳೆಯಾದಡೆ ನಿನ್ನ ನೆನೆಯೆ ǁ ೫೪
ಅಡಿಗೆಯಾಗದ ಮುನ್ನ ಕುರುತಿಂಡಿ ತಿಂಬಳ | ಗಡಬಡಿಸುತೆ ಬಾಯಾಡುವಳ |
ಕಡುಗೇಡಿತನದೊಳಗೊಡಲ ಹೊರೆಯುವಂತ | ತುಡುಗೆಯಾದಡೆ ನಿನ್ನ ನೆನೆಯೆ ǁ
ಉತ್ತರವಿತ್ತವಳಲ್ಲ ವೆನ್ನೆ ದಿರಿಗೆ | ಮತ್ತಿಲ್ಲ, ನಿನ್ನಂತ ಮಡದಿ |
ಮಿತ್ತಾಗಿ ಮನೆಯೊಳಗಿರುವ ಹೆಣ್ಣಾದಡೆ | ಸತ್ತಳೆಂದತ್ತಡೆ ನರಕ || ೫೬

ಸಾವು ತಪ್ಪದು ದೊಡ್ಡ ಜೀವಕೆಂದಿದ್ದರು | ನೋವು ಸಲ್ಲದು ಈವಾಗ | ಆವಾವ ಗುಣಗಳ ನೆನೆವೆನಲ್ಲದೆ ನಿನ್ನ | ಜೀವಕೆ ಮಗುವನಲ್ಲ || ೫೭ ಕಂಡಕಂಡವರೊಳು ನೇಹವ ಬಲಿಯುವ | ದಿಂಡೆವೆಣ್ಣಲ್ಲವೆ ನೀನು | ಕೊಂಡಾಡ ಬಾರದ ಗುಣವನು ಮಾನಿನಿ/ಕಂಡು ನಾ ಹೇಗೆ ಮರೆಯಲಿ || ೫೮ ಅಕ್ಕ ಬಲೆಗೆ ಸಿಕ್ಕಿದ ಸತಿಗೋಸುಗ | ದುಕ್ಕವೆರಸಿ ಮೊಗ ಬಾಡಿ | ಮಿಕ್ಕ ಮಾತಿನ್ನೇಕೆ ಹರಣದ ಹಂಗಿಲ್ಲ | ದುಕ್ಕವೆರಸಿ ಕಪೋತಕನು || ೫೯ ದುಕ್ಕವ ಮಾಡುವ ಹಕ್ಕಿಯೆಡೆಗೆ ದಿಕ್ಕು | ದಿಕ್ಕಿನ ಹಕ್ಕಿಗಳೆಡ್ಡಿ | ಗಕ್ಕನೆ ಕೇಳಿದುವ ಯಾತಕೆ ಎಂದು | ಒಕ್ಕಣಿಸುತಲೆಮ್ಮ ಕಳುಹು || ೬೦ ಆಡುವೆ ನಾನೊಂದ ನಾಡಾಡಿ ಹೆಣ್ಣಲ್ಲ | ಕೂಡಿಯಗಲದಿರ್ಪ ಸತಿಯು | ಬೇಡನ ಬಲೆಯೊಳು ಸಿಕ್ಕಿದ ಸತಿಯೊಡ | ಗೂಡದ ಹರಣವನ್ನೇಕೆ || ೬೧ ಸತಿಯು ಸಿಕ್ಕಿದಳಯ್ಯೋ ಗತಿಗೆಟ್ಟು ನಾನಿಂದು | ಕ್ಷಿತಿಯೊಳು ಹೇಗೆ ಜೀವಿಸಲಿ | ಅತಿಹಿತದಿಂದ ಕೂಡಿರುವಂತ ಸತಿಯಳ | ಪೃಥಿವಿಯೊಳಗಲಿರಲಾತಿ | ೬೨ ಪತಿಯ ಮಾತನ್ನು ಕೇಳಿ ಹಿತವಾಗಿ ಸೇವೆಯ ನಹಿತದೊಳು ಮಾಡುವಂತ || ಸತಿಯಳನಗಲಿ ಜೀವಿಸುವುದರಿಂದಲೆ | ಮೃತವಾಗುವುದತಿ ಲೇಸು | ೬೩. ಕೇಳೆಲೆ ಎಲೆ ಪಕ್ಷಿಯಾಲೋಚನೆಯೇಕ | ಹೇಳುವೆ ನಾನೊಂದು ಮಾತ | ಬಾಳ ಪ್ರೀತಿಯ ಮೋಹ ಸಲ್ಲದು ಹೆಣ್ಣಿಗೆ | ಗೋಳಿಟ್ಟಳುವುದು ಸಲ್ಲ | ೬೪ ಸತಿಯಳು ಸತ್ತಡೆಯತಿದುಃಖಗೊಂಬರೆ | ಪ್ರತಿಹೆಣ್ಣನೊಂದ ತರುವುದು | ಹಿತವಾಗಿ ಕೂಡಿ ಸಂತಸದಿ ಬಾಳುವುದೆಂದು | ನುತಿಸಿ ಹೇದುದೊಂದು ಹಕ್ಕಿ || ಕೇಳಲೆ ಎಲೆ ಹಕ್ಕಿ ಬಾಜ್ವ ಮಾತಿನ್ನೇಕೆ | ಚೂಳೀಲಿ ಬಂದ ಸ್ತ್ರೀಯಟಿಯೆ | ಕೂಟ ನಿಚ್ಚೆಗೆ ಬಂದ ಕೀಟಲಕ್ಕಣವೆಣ್ಣ | ಬಾಳ ಸುಡೆಂದುದು ಪಕ್ಷಿ 11 ೬೬ ಚೇತಕೆ ಬಾರದ ಸತಿಯಳು ಮನೆಯೊಳು | ಮಾತನಾಡಲು ಪುರುಷರಿಗೆ || ಭೂತದ ದನಿಯ ಕೇಳಿದ ಹಾಗೆ ಕಿವಿಯೊಳು | ಭೀತಿಯಾಗುವುದಂಜುವೆನು 3 ೬೭ ಒಡೆದ ಗಡಿಗೆಯೊಳಗುದಕವ ತುಂಬಿಟ್ಟು 1 ಅಡಿಗೆಯ ಮಾಡುವರುಂಟೆ | ಒಡಲೊಳಗಣ ಪ್ರಾಣ ನುಡಿವಂತ ಸತಿಯಳ | ಯೆಡೆಯಲ್ಲಿ ಬಿಟ್ಟು ಜೀವಿಸೆನೆಗೆ ೮