ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ದಾರಿ/ಮಳೆ ಬಂದಾಗ

೧೦೩

ಮೊದಲಲ್ಲಿನ ಬೇಸರ ಈಗಿಲ್ಲ. ಎಲ್ಲವೂ,ಇಡೀ ಬೆಳಗಾವಿ-ಸರೋಜಳ
ಪೆದ್ದು ಗಂಡ ಸಹ-ಎಷ್ಟು ಚೆನ್ನಾಗಿ ಕಾಣುತ್ತಿದೆ!ಅಂದ ಹಾಗೆ ಸರೋಜಳನ್ನು ಕರೆದು
ಈ ಚಿತ್ರ ತೋರಿಸಬೇಕು.'ಕೆಟ್ಟು ಹೋದೀತು' ಆಂದಿದ್ದಳಲ್ಲ, ಈಗ ನೋಡಲಿ. ತಾನು
ಕೈ ಹಾಕಿದ ಕೆಲಸ ಎಂದಾದರೂ ಕೆಡುವುದುಂಟೆ?
"ಏ ಸರೋಜ, ಇಲ್ಲೆ ಬಾ."
"ಮುಗೀತೇನು ನಿನ್ನ ಚಿತ್ರ?.... ಅಬಾಬಾಬಾ, ಇದು ಆದೇ ಚಿತ್ರ ಅಂದರ
ನಂಬಲಿಕ್ಕೆ ಆಗೂದಿಲ್ಲ ನೋಡು. ಈ ಚಿತ್ರದ ತುಂಬೆಲ್ಲಾ ಇದ್ದ ಮಳೆಹನಿ ಎಲ್ಲೆ
ಮಟಾಮಾಯ ಆದವು?ಈ ಬಿಸಲು ಎಲ್ಲಿಂದ ಬಂತು ? ಪೂರಾ ಹೊಸ ಮನಷ್ಯಾ
ಆಗ್ಯಾನಲ್ಲ ಈತ ? ಏ ಸಹನಾ, ನಿನ್ನ ಏನಂತ ವರ್ಣನಾ ಮಾಡಲಿ?"
"ಏನೂ ಬ್ಯಾಡ. ಇನ್ನೂ ಮುಗಿಯೂದದ ಈ ಚಿತ್ರ.ಆತನ ಕೂದಲೆಲ್ಲಾ
ತೂಯ್ದು ಹ್ಯಾಂಗ ಹಣೆಗೆ ಅಂಟಿಕೊಡಾವ ನೋಡು. ಅದನ್ನುಷ್ಟು ಗಾಳಿಗೆ
ಹಾ ಡೋ ಹಾಂಗ ಮಾಡಬೇಕು."
"ಇಷ್ಟೆಲ್ಲಾ ಮಾಡಿದಾಕೀಗಿ ಅದಷ್ಟರ ಮಾತು ? ಅಲ್ಲ ಸಹನಾ, ಇಷ್ಟು ತ್ರಾಸ
ತಗೋತೀಯಲ್ಲ ಈ ಚ್ತೈತ್ರದ ಸಲುವಾಗಿ! ಆತ ನಿನ್ನ ಮ್ಯಾಲ ಎಂಥಾ ಇಂಪ್ರೆಶನ್
ಹಾಕ್ಯಾನಲಾ ಆಂತೀನಿ. ಅವನ ಹುಚ್ಚ ನೆಟ್ಟಗ ಮಾಡೋದರಾಗ ನೆನಗ ಹುಚ್ಚು
ಹಿಡಿಸಿಬಿಟ್ಟನೇನು?"
"ಛೆ, ಯಾರೋ ಹಾದಿಹೋಖಕನ ಸಲುವಾಗಿ ಎಂಥಾ ಮಾತು! ಆತ ನೆಟ್ಟಗಾಗಿ
ತಿರಿಗಿ ತನಗ ಕೆಲಸವಾದ ಊರಿಗೆ ಹೋಗಿ ಎಷ್ಟು ದಿನಾ ಆಗಿಹೋದವು. ಆಮ್ಯಾಲ
ಭೆಟ್ಟಿ ಸುದ್ದಾ ಆಗಿಲ್ಲಾ . ಇಂಥವನ ಸಲುವಾಗೆ ಹುಚ್ಚು ಹಿಡೆಸಿಕೊಳ್ಳಲನು ನಾನು?"
"ಈಗೆಲ್ಲಿ ರತಾನ ಆತ? ಮುಂದೇನಾತು ಅವನ ಕಥಿ ?"
"ಆಗೂದೇನು ? ಅವನ ಕಥಿ ಅಲ್ಲಿಗೇ ಮುಗೀತು. ಅವನಿಗೆ ಪೂರ್ಣ ಗುಣಾ
ಆತು. ಎಷ್ತು ಹುರುಪಿನ ಮನುಷ್ಯ ಆತ! ಒಮ್ಮೆ ನಮ್ಮ ನ್ನ ಟೀ ಪಾರ್ಟೇಗೆ ಕರೆದಿದ್ದ.
ನಾನೂಹೋಗಿದ್ದೆ ಡಾಕ್ಟರ್ ಜೋಡಿ. ಆವತ್ತ ಮಳೆಬರತಾ ಇತ್ತು. 'ಮಳೆನಿಂತಮ್ಯಾಲ
ಹೋಗ್ರಿ, ಸುಮ್ನ ತೊಯಿಸಿಗೋತೀsಕ ?'ಅಂತ ನಮಗ ಹೇಳಿದ. ನಮ್ಮ
ಕಾಕಾಗಂತೂ ತಾವು ಹಿಡಿದ ಕೇಸು Successful ಆದರ ಭಾರಿ ಖುಶಿ. 'ನೇವೇ ನನ್ನ
ಪಾಲಿನ ದೇವರು' ಅಂದಿದ್ದ ಆತ ಆ ದಿವಸ. ಮುಂದೆ ಆವನಿಗೆ ಟ್ರೌನ್ಸಫರ್ ಆಗಿ
ಬ್ಯಾರೆ ಊರಿಗೆ ಹೋದ ಮ್ಯಾಲೂ ದಾಕ್ಟರರಿಗೆ ಕ್ಷೇಮಸಮಾಚಾರದ ಪತ್ರ ಬರೀತಿದ್ದ.
ಈಗೂ ಬರೀತಿರತಾನ ಒಮ್ಮೆಮ್ಮೆ."
"ನೀ ಅವನ ಚಿತ್ರಾ ತಗದು ಅವನನ್ನು ಅಮರ ಮಾಡಿಬಿಟ್ಟಿಯಲ್ಲ, ಆವನs