ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨ರ್೫ ಅನಾಥೆ ಅಂದು ಭಗಿನೀ ಸೇವಾ ಸಮಾಜದ ವಾರ್ಷಿಕೋತ್ಸವ, ಅಂತೆಯೇ ಎಲ್ಲ ಕಡೆ ಹಬ್ಬದ ವಾತಾವರಣ, ಒಂದೇ ಕಾಂಪೌಂಡಿನಲ್ಲಿರುವ ಸಮಾಜದ ಆಫೀಸು, ಹುಡುಗಿಯರ ವಸತಿಯ ಕೋಣೆಗಳು, ಸಣ್ಣದೊಂದು ಹಾಯ್ಸ್ಕೂಲು, ಶಿಶುವಿಹಾರ, ಹೊಸದಾಗಿ ಕಟ್ಟಿಸಿದ ಪುಟ್ಟ ಅತಿಥಿಗೃಹ- ಎಲ್ಲ ಕಡೆ ತಳಿರು ತೋರಣ. ಹಾಯ್ ಸ್ಕೂಲಿನ ಹೆಡ್ಮಾಸ್ತರ ಶಿವರಾಮರೆಡ್ಡಿ ತನ್ನ ಪೂರ್ಣ ಬೆಳ್ಳಗಾದ ತಲೆಗೆ ಈ ಉತ್ಸವದ ಪ್ರಸಂಗಕ್ಕಾಗಿ ಡಾಯ್ ಮಾಡಿಸಿಕೊಂಡು, ಮಲ್ಲಿನ ಜುಬ್ಬಾ-ಖಾದೀ ಧೋತರ ಉಟ್ಟು ಲವಲವಿಕೆಯಿಂದ ಓಡಾಡುತ್ತಿದ್ದಾನೆ. ಅವನ ಸಹಕಾರಿಯೂ ಸೇವಾ ಸಮಾಜದ ಅನಾಥಾಲಯದ ಮೇಲ್ವಿಚಾರಕಿಯೂ ಆದ ಕಮಲಮ್ಮ ದೇಸಾಯಿ ಹೊಸ ಸಿಲ್ಕ್ ಸೀರೆ ಉಟ್ಟು, ಅಪ್ಪಣೆಗಳನ್ನು ರವಾನಿಸುತ್ತ ತುಂಬ ಬಿರಿಯಾಗಿರುವಂತೆ ತೋರುತ್ತಿದ್ದಾಳೆ. ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಆಚರಿಸಲ್ಪಡುವ ಇಂಥ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸಮಾಜಕ್ಕೆ ದರ್ಶನ ಕೊಡುವ ಪರಿಪಾಠವುಳ್ಳ ಭಗಿನೀ ಸೇವಾ ಸಮಾಜದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಅಂಬುಜಮ್ಮ ಸರದೇಶಪಾಂಡೆ ಇಂದು ಹೊತ್ತಾರೆಯೇ ಎದ್ದು ತನ್ನಷ್ಟೇ ವಿಶಾಲವಾದ ಮರ್ಸಿಡಿಸ್ ಕಾರಿನಲ್ಲಿ ಸಮಾಜಕ್ಕೆ ಆಗಮಿಸಿ ಸೊಂಟದ ಮೇಲೆ ಕೈಯಿಟ್ಟುಕೊಂಡು ಚೌಕಾಗಿ ನಿಂತು ಎಲ್ಲ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದಾಳೆ. ಮಧ್ಯದ ಹಾಲ್‌ನ ಗೋಡೆಯ ಮೇಲೆ ತೂಗುಹಾಕಿದ ಧೋಂಡೂಬಾಯಿ ಪಂತ ಅವರ ದೊಡ್ಡ ಭಾವಚಿತ್ರದ ಮೇಲೆ ಇವತ್ತು ಧೂಳಿಲ್ಲ. ಬ್ರಿಟಿಷರ ಕಾಲದಲ್ಲಿ ಸಾಂಗಲಿಯ ಶ್ರೀಮಂತ ಕುಟುಂಬವೊಂದರಲ್ಲಿ ಹುಟ್ಟಿ, ಆಭಾಗಿನ ಹೆಣ್ಣು ಮಕ್ಕಳ ಉದ್ದಾರಕ್ಕಾಗಿ ಹಲವು ರೀತಿಯಿಂದ ಶ್ರಮಿಸಿ, ಅದರಲ್ಲೇ ಜನ್ಮ ಸವೆಸಿದ ಆ ತಾಯಿ ಸಾಯುವ ಕೆಲ ವರ್ಷಗಳ ಮುಂಚೆ ತನ್ನ ಅಪಾರ ಆಸ್ತಿಯನ್ನೆಲ್ಲ ವಿಕ್ರಯಿಸಿ ಬಂದ ಹಣದಿಂದ ಆಗಿನ ಮುಂಬಯಿ ಕರ್ನಾಟಕದ ಹಲವು ಪಟ್ಟಣಗಳಲ್ಲಿ ಹಲವು ಬಗೆಯ ಸಂಸ್ಥೆಗಳನ್ನು, ಶಾಲೆಗಳನ್ನು, ಅನಾಥಾಲಯಗಳನ್ನು ಸ್ಥಾಪಿಸಿದಳು. ಹಾಗೆ ಅಲ್ಪ ಬಂಡವಾಳದೊಂದಿಗೆ ಬೆಳಗಾವಿಯಲ್ಲಿ ಸುರುವಾಗಿತ್ತು ಈ ಭಗಿನೀ ಸೇವಾ ಸಮಾಜ. ತನ್ನ ಕೊನೆಗಾಲದಲ್ಲಿ ಬೆಳಗಾವಿಯಲ್ಲೇ ಇದ್ದ ಧೋಂಡೂಬಾಯಿ ತಾನಿರುವವರೆಗೂ