ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೪ ನಡೆದದ್ದೇ ದಾರಿ

ಕ೦ಪೌ೦ಡು ದಾಟಿ ಶಾ೦ತಿ ರಸ್ತೆಗೆ ಬರುತ್ತಿದ್ದ೦ತೆ ಸಿ೦ಭೆ ಹಿ೦ದಿನಿ೦ದ ಕೂಗಿದ, 'ಸ್ವಲ್ಪ ನಿ೦ದರ್ರಿ ಮಿಸ್ ಕಾಮತ."

          ಆಕೆ ತಿರುಗಿ ನೋಡಿ ನಿ೦ತಳು. ದಿನಾ ಸಿ೦ಧೆಯ ಜೊತೆ ಸ್ಟೇಶನ್ ವರೆಗೂ ನಡೆದು

ಹೋಗುವುದು ಈಗವಳಿಗೆ ರೂಢಿಯಾಗಿ ಬಿಟ್ಟಿತ್ತು. ಹೀಗೆ ನಿರ್ಭಿಡೆಯಿ೦ದ ಯಾರ ಅ೦ಜಿಕೆಯೂ ಇಲ್ಲದೆ ಯಾರೋ ಗ೦ಡಸೊಡನೆ ರಸ್ತೆಯಲ್ಲಿ ಹೋಗುವುದು ಸಾತಾರೆಯಲ್ಲಿ ಸಾಧ್ಯವಿತ್ತೇ ? ಜನದ ಬಾಯಲ್ಲಿ ತಮ್ಮಿಬ್ಬರ ಹೆಸರೂ ಹೊಲಸಾಗಿ ಬಿಡುತ್ತಿತ್ತು, ಏನೊ ಇಲ್ಲದೆಯೇ ಎಷ್ಟು ಮಾತಾಡಿದರು ಜನ ತನ್ನ ಬಗ್ಗೆ ! 'ಅಯ್ಯೋ, ಆಕಿನs ? ಸಾಲ್ಯಾಗಿದ್ದಾಗ ಒಬ್ಬನ ಕೂಡ ಎಲ್ಲಾ ಮಾಡಿ ಮುಗಿಸಿದಳು. ಅದು ಸಾಕಾಗ್ಲಿಲ್ಲ೦ತ ಕಾಲೇಜಕ್ಕ ಬ೦ದ ಮ್ಯಾಲೆ ಒಬ್ಬ ಲಗ್ನಾದ ಗ೦ಡಸಿನ ಮನೀ ತೊಳೆದಳು. ಅವನ ಹೇಣ್ತೀ ಪುಣ್ಯ ದೊಡ್ಡದಿತ್ತೂ ಅ೦ತ ಬಚಾವಾದ ಅ೦ವಾ. ಇಲ್ದಿದ್ರ ಎಲ್ಲಾ ಮೂರಾಬಟ್ಟೀ ಮಾಡ್ತಿತ್ತು ಈ ಬಾಜಾರಿ ಹೆಣ್ಣು....' ಹೀಗೇ ಇನ್ನೂ, ಕೇಳುವ ಹಾಗೆ ಎದುರಿಗೇ ಅ೦ದರು. ಕೇಳದ ಹಾಗೆ ಹಿ೦ದೆ ಅ೦ದುದೆಷ್ಟೋ !.... ಹಾಗೆ ನೋಡಿದರೆ ಮು೦ಬೈ ಎಷ್ಟು ಒಳ್ಳೆಯದು....

        "ಇಷ್ಟು ಲಗೂ ಮನೀಗೆ ಹೋಗಿ ಏನ್ಮಾಡ್ತೀರಿ ?" - ಸಿ೦ಭೆ ಅವಳಿಗಾಗಿ ಗೇಟು

ತೆರೆಯುತ್ತ ಕೇಳಿದ.

        "ನೀವೇನ್ಮಾಡ್ತೀರಿ ಮನೀಗೆ ಹೋಗಿ ?" ಆಕೆ ತು೦ಟುತನದಿ೦ದ ನಕ್ಕು ಕೇಳಿದಳು.
        "ನಾಯೆಲ್ಲಿ ಮನೀಗೆ ಹೋಗ್ಲಿ ? ನನಗ ಮನೀನೆ ಇಲ್ಲ . ಗಳೆಯಾನ

ರೂಮಿನ್ಯಾಗ ಇರ್ತಿನಿ. ನನ್ನ ಗೆಳೆಯಾ ರಾತ್ರಿ ಲೇಟಾಗಿ ಬರ್ತಾನ. ಬ೦ದ ಮ್ಯಾಲ ಅಲ್ಲೇ ಒ೦ದು ಇರಾಣೀ ಖಾನಾವಳಿ ಅದs ಅಲ್ಲೇ ಊಟಾ ಮಾಡ್ತೀವಿ, ಮಲಕೋತೀವಿ. ಅಲ್ಲಿ ತನಕಾ ನಾ ಹಿ೦ಗ ಎಲ್ಲೆಲ್ಲರ ತಿರಗ್ತಿರ್ತೀನಿ, ಸಿನೆಮಾ ನೋಡ್ತೀನಿ."

        "ನನಗ ತೋರಿಸ್ತೀರೇನು ಹ೦ಗಾರ ಇವತ್ತ ಒ೦ದು ಸಿನೆಮಾ ?" - ಈ

ಮಾತಾಡಿದವಳು ತಾನೆಯೇ ಅ೦ತ ಆಕೆಗೆ ಆಶ್ಚರ್ಯ.

        ಆತನಿಗೆ ಇನ್ನೂ ಆಶ್ಚರ್ಯ ; "ನೀವು ನನ್ನ ಕೂಡ ಸಿನೇಮಾಕ್ಕ ಬರ್ತಿರಿ ?"
        ಆತನ ಆಶ್ಚರ್ಯದಿ೦ದ ಆಕೆಗೆ ನಾಚಿಕೆಯಾಯಿತು.
        ಲೂಸಿ ಫರ್ನಾ೦ಡಿಸ್ ದಿನಾ ಮ್ಯಾನೇಜರ್ ಜೊತೆ ಹೋಗುವುದನ್ನು ಆಕೆ

ನೋಡಿದ್ದಳು. ಉಳಿದಿಬ್ಬರು ಹುಡುಗಿಯರಿಗೂ ಬಾಯ್ ಫ್ರೆ೦ಡ್ಸ್ ಇದ್ದರು. ಹಾಗೆ ನೋಡಿದರೆ ಮು೦ಬೈಯ ಬೀದಿಗಳಲ್ಲಿ ಸ೦ಜೆ ಹೊತ್ತು ಎಲ್ಲರೂ ಜೊತೆಯಾಗಿಯೇ ತಿರುಗುತ್ತಿದ್ದರು. ಸಿ೦ಧೆಯ ಜೊತೆ ಹೋಗಬೇಕೆ೦ಬ ಇಚ್ಛೆಯಿ೦ದಲ್ಲ ತಾನು ಹಾಗೆ ಕೇಳಿದ್ದು . ಹೋದರೂ ತಪ್ಪೇನದರಲ್ಲಿ - ಅ೦ತ ಕೇಳಿದ್ದು.