ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿರುಕಾದಂಬರಿಗಳು/ಗಂಡಸರು. ೩୭೯

ಪತ್ರವಿರಬಹುದೆ,ಮತ್ತೊಮ್ಮ ತನ್ನ ಗಾಲಿ ಮುರಿಯಿತೇ,ಅನಿಸಿತು. . ಆದರೆ ಇಲ್ಲ.ಪತ್ರ'ಅಫಿಶಿಯಲ್'ಎಂದತ್ತು.ಅದರ ಮೇಲೆ ಸ್ಪಷ್ಟವಾಗಿ ಟೈಪ್ ಮಾಡಿದ ಅಕ್ಷರಗಳಿದ್ದವು.ಒಡೆದೇ ಇದ್ದ ಕವ್ಹರಿನೊಳಗಿಂದ ಪತ್ರ ತೆಗೆದು ನೋಡಿದಳು ಆಕೆ‌.

   -ಕಲಕತ್ತೆಯಿಂದ ಬಂದತ್ತು women ಎಂಬ ಅಂತಿರಾಷ್ಟ್ರೀಯ ಸಹಯೋಗದೊಡನೆ ಭಾರತದ ಸಮಾಜಕಲ್ಯಾಣ ಸಂಸ್ಥೆಯೊಂದು ಇತ್ತೀಚೆ ಹೊರಡಿಸಲಾರಂಭಿಸಿದ್ದ, ಈಗಾಗಲೇ ಸಾಕಷ್ಟು ಪ್ರಸಿದ್ದಿ ಪಡೆದ್ದಿದ ಪತ್ರಿಕೆಗೆ ಸಹಸಂಪಾದಕಿಯ ಕೆಲಸದ
ಆರ್ಡರು.ಶಾಂತಿಗೆ ಒಂದು ಕ್ಷಣ ಸಹಜವಾಗಿ ಸಂತೋಷವಾಯಿತು.ಆಕೆ ಕಣ್ಣರಳಿಸಿ ಜಾನ್ ಕಡೆ ನೋಡಿದಳು ಇದರಾಗ ಏನದ ನೀ ಇಷ್ಟ ಅಪ್ ಸೆಟ್ ಆಗೂವಂಥಾದ್ದು?" 
  "ಏನಿದು? ನೀನಿದಕ್ಕೆ ಯಾವತ್ತು ಅಪ್ಲೈ ಮಾಡಿದ್ದು ಇಂಟರ್ವ್ಯೂ ಆದದ್ದು ಯಾವಾಗ? ನನಗೆ ಏನೂ ಹೇಳದೇ ಇದ್ದುದೇಕೆ?"
  "ಓಹ್!"– ಆತನ ಸಿಟ್ಟಿನ ಕಾರಣ ತಿಳಿದು ಸಮಾಧಾನವಾಗಿ ಉತ್ತರಿಸಿದಳು ಆಕೆ. "ಇದಕ್ಕೆ ಅಪ್ಲೈ ಮಾಡಿದು ಆರು ತಿಂಗಳ ಹಿಂದೆ, ಇಂಟರ್ವ್ಯೂನೊ ಆವಾಗೇ ಆತು. ನೀ ಆವಾಗ ನನ್ನ ಕೊಡಿ ಸರಿಯಾಗಿ ಮಾತು ಸುದ್ದಾ ಆ ಅಡ್ತಿರಲಿಲ್ಲ."
  "ಆಮೇಲಾದ್ರೂ ಹೇಳಬಹುದಿತ್ತಲ್ಲ?"- ಆತನ ಸಿಟ್ಟು ಇನ್ನೂ ಇಳಿದಿರಲಿಲ್ಲ.
  "ಖರೇ ಹೇಳಬೇಕಂದ್ರ...."ಶಾಂತಿ ಖರೆ ಹೇಳಿದಳು, "ನನಗದು ಮರತ ಹೋಗಿತ್ತು."
   "ಇಲ್ನೋಡು ಶಾಂತಿ," ಆತ ಗಂಭೀರವಾಗಿ ಹೇಳಿದ,ನೀನು ಏನೇ ಮಾಡೋದಿದ್ರೂ ನನಗೆ ಹೇಳಿ‌ ಮಾಡ್ಬೇಕು. ನನ್ನ ಪರ್ಮಿಶನ್ ಇಲ್ಲದೆಯೇ ಇಂಥದ್ದೆಲ್ಲ ಮಾಡಬೇಡಿ ಇನ್ನು. ನಿನ್ನ ಒಳ್ಳೇದಕ್ಕಾಗಿಯೇ ನನೇಳೋದು. ಏನಂತೀರಿ?".
  "ಅದಕ್ಯಾಕ ಅಷ್ಟೇ ಸಿಟ್ಟಾಗ್ತೀ ಮಾರಾಯ ? ಈ ಕೆಲಸಕ್ಕೆ ಹೋಗದಿದ್ರಾತಲ್ಲ " ಅಂದಳಾಕ್ಕೆ ಜಗಳ್ಳಕ್ಕೆ ಪೂರ್ಣವಿರಾಮ ಕೊಡಬಯಸುತ್ತ.
  "ಈ ಕೆಲಸಾನೂ ಬೇಡ ,ಆತನ ಕೆಲಸಾನನೊ‌ಬೇಡ ನೀನಿನ್ಮೇಲೆ ಮನೇ ನ್ನೊಡ್ಕೋಂಡು ಇದಿಬಿಡು. ಏನಂತಿಯಾ?"
   ಆಕೆ ಅಚ್ಚರಿಯಿಂದ ಆತನನ್ನು ನೋಡಿದಳು. ನಂತರ ಈಗಾಗಲೇ ಆಫೀಸಿಗೆ ಹೋಗಲು ಆತನಿಗೆ ತಡವಾಗಿರುವುದನ್ನು ತಿಳಿದು ಬೇಗನೆ "ಹಂಗs ಆಗ್ಲಿ " ಅಂದಳು.