ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೨ ನಡೆದದ್ದೇ ದಾರಿ ಹಾಗೆಯೇ ಪರೋಪಕಾರಿ ಅಂತ. ಇಬ್ಬರೂ ಯಾವಾಗಲೂ ಹೀಗೆ ಬಡವರ, ಅನಾಥರ, ದುಃಖಿಗಳ ಸಲುವಾಗಿ ಮಿಡುಕುತ್ತಿರುತ್ತಾರೆ ಅಂತ. ಪಕ್ಕದಲ್ಲಿ ಕೂತಿದ್ದ ಗುಜರಾಥಿ ಹೆಂಗಸಿಗೆ ತನ್ನ ಕೇಸಿನ ವಿವರಗಳನ್ನು ಗಟ್ಟಿದನಿಯಲ್ಲಿ ಹೇಳುತ್ತ ಶಾಂತಾ ಆಪ್ಟೆ ಆಕೆಯ ಕಡೆ ಹೊರಳಿದಾಗ ಶಕ್ತಿ ಬೇಕೆಂತಲೆ ಸ್ವಲ್ಪ ದೂರ ಸರಿದಳು. ಯಾಕೋ ಇವತ್ತು ಬೇರೆಯವರ ಮಾತು ಕೇಳಿಸಿಕೊಳ್ಳುವ ತಾಳ್ಮೆಯಿಲ್ಲ. ಮನಸೂ ಇಲ್ಲ. ಮುಂಜಾನೆಯಿಂದ ತಲೆ ಬೇರೆ ಸಿಡಿಯತೊಡಗಿದೆ. ಎಷ್ಟು ಪ್ರಯತ್ನಿಸಿದರೂ ಕಮಲಾನ ಖಿನ್ನ ನಗು ಬೀರುವ ಕಣ್ಣುಗಳು, ಆ ವ್ಯಥೆ ತುಂಬಿದ ಮುಖ ಮನಸ್ಸಿನಿಂದ ಮರೆಯಾಗುತ್ತಿಲ್ಲ. ಆಕೆ ಅದೇಕೆ ಹೀಗೆ ಹೊರಟು ಹೋದಳೋ. ನಿಜವಾಗಿಯೂ ಬೆಂಗಳೂರಿಗೆ ಹೋದಳೋ ಅಥವಾ ತಿರುಗಿ ತನ್ನ ಹಳ್ಳಿಗೆ ಹೋದಳೋ ಅಥವಾ ಬೇರೆಲ್ಲಾದರೂ.... ಛೇ ತಾನು ಆಕೆಯನ್ನು ಹಾಗೆ ಹೋಗಗೊಡಬಾರದಿತ್ತು..... “ಆ ಹೆಂಗಸು, ಅದೇ ನಮ್ಮ ಆಡಿಗೆಯಾಕೆ, ವಿಧವೆ, ಪಾಪ, ಉಟ್ಟ ಸೀರೆಯ ಮೇಲೆ ನಮ್ಮಲ್ಲಿಗೆ ಬಂದಿದ್ದಳು. ಶಾಂತಾ ಆಪ್ಟೆ ಹುರುಪಿನಿಂದ ಇನ್ನಾರಿಗೋ ಹೇಳತೊಡಗಿದ್ದಳು, “ಈಗ ನೋಡ್ರಿ, ನಾಲ್ಕೆಕರೆ ಜಮೀನು, ಆರು ತೊಲ ಬಂಗಾರ, ಮೂರು ಸಾವಿರ ಕ್ಯಾಶ್ - ಇಷ್ಟೆಲ್ಲಾ ಸಿಗೋ ಹಾಂಗಾತು, ಪಾಪ, ಬದುಕಿಕೊಳ್ಳಲಿ ಬಡವಿ...." ಶಶಿ ಕಿಡಿಕಿಯ ಹೊರಗೆ ಓಡುತ್ತಿದ್ದ ಗಿಡಗಳನ್ನು, ತಾರು ಕಂಬಗಳನ್ನು, ಕಟ್ಟಡಗಳನ್ನು ನೋಡುತ್ತ ಸುಮ್ಮನೆ ನಿಂತಳು.

ವೈ. ಟಿ. ಯಲ್ಲಿ ಇಳಿದು ಕೈಗಡಿಯಾರ ನೋಡಿಕೊಂಡಾಗ ಶಶಿಗೆ ಅನಿಸಿತು, ಇನ್ನು ಬಸ್ಸಿಗಾಗಿ ಕಾಯ್ದು ನಿಂತರೆ ತಾನು ಸರಿಯಾದ ವೇಳೆಗೆ ಹಾಸ್ಪಿಟಲ್ ತಲುಪಲು ಶಕ್ಯವಿಲ್ಲ. ಆಕೆ 'ಟ್ಯಾಕ್ಸಿ' ಅಂತ ಕೂಗಿ ಪಕ್ಕಕ್ಕೆ ಬಂದಾಗ ಎದುರಿಗೆ ಲೀಲಾ ಕುಲಕರ್ಣಿ, ಕೆಳಗಿನ ಬ್ಲಾಕಿನಲ್ಲಿನ ರಿಟಾಯರ್ಡ್ ಟೀಚರರ ಮಗಳು ಕಾಣಿಸಿದಳು. “ಬಾ ಲೀಲಾ ನಿನ್ನ ಬ್ಯಾಂಕಿನ ಎದುರಿಗೇ ಹಾಯ್ದು ಹೋಗಬೇಕು ನಾನು, ನಿನಗ ಡ್ರಾಪ್ ಕೊಡ್ತೀನಿ" ಅಂದಳು ಶಶಿ. “ಥ್ಯಾಂಕ್ಸ್ ಡಾಕ್ಟರ್" ಅನ್ನುತ್ತ ಲೀಲಾ ಶಶಿಯೊಡನೆ ಟ್ಯಾಕ್ಸಿ ಏರಿದಳು. ಹತ್ತು ಮಿನಿಟಿನ ದಾರಿ. ಏನಾದರೂ ಮಾತನಾಡಲೆಂದು ಶಶಿ ಕೇಳಿದಳು, ಅಂದಹಾಗೆ ಬ್ಯಾಂಕಿನ ಡಿಪಾರ್ಟ್‌ಮೆಂಟಲ್ ಪರೀಕ್ಷಾ ಕೂತಿದ್ದೆಲ್ಲ ಲೀಲಾ, ರಿಝಲ್ಸ್ ಬಂತೇನು ? “ಜ್ಞಾ ಡಾಕ್ಟರ್, ಪಾಸಾಗೀನಿ."