ಈ ಪುಟವನ್ನು ಪ್ರಕಟಿಸಲಾಗಿದೆ

ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ...

೪೧೧


ಇತ್ಯಾದಿ.....
ಶಾಂತಾ ಆಪ್ಟೆಯ ಲೆಕ್ಚರಿಗೆ ತಡೆ ಬಂದದ್ದು ಕರೆಗಂಟೆಯ ಸದ್ದಿನಿಂದ.
ಚೆಕ್ ಆಪ್‌ಗೆ ಬಂದಿದ್ದ ಪೂರ್ಣಿಮಾ ಸಿಂಗ್ ಅಪರೂಪವಾಗಿ ಬಿಡುವಾಗಿದ್ದ ಗಂಡ
ಭಾಸ್ಕರ್‌ಸಿಂಗನನ್ನೂ ಡಾಕ್ಟರ್‌ಬಾಯಿ ಹೇಳಿದ್ದಂತೆ ಆಕೆಯ ಭೇಟಿಗೆ ಕರೆತಂದಿದ್ದಳು.
ಲೊಕ್ಯಾಲಿಟಿಯಲ್ಲೆಲ್ಲ ಪರಿಚಿತಳಾಗಿದ್ದ ಆಪ್ಟೆ ವಕೀಲಬಾಯಿಯನ್ನು ಸಿಂಗ್
ದಂಪತಿಗಳೂ ಬಲ್ಲವರಾದ್ದರಿಂದ ಆಕೆ ಎದ್ದು ಹೋಗದೆ ಅಲ್ಲೇ ಕೂತಳು. ಅಷ್ಟೇ
ಅಲ್ಲ, ಅಲ್ಲೇ ಅವರಿಗೂ ಹತ್ಹತ್ತು ರೂಪಾಯಿಯ ನಾಲ್ಕು ತಿಕೇಟು ಹಾಕಿದಳು. ನಂತರ
ಪೂರ್ಣಿಮಾಗೆ ಕೇಳಿದಳು, “ಮುಂದಿನ ತಿಂಗಳು ಕ್ಲಬ್ಬಿನ ವಾರ್ಷಿಕೋತ್ಸವ ಆದ,
ಆವಾಗ ನೀವು ದಯಮಾಡಿ ನಿಮ್ಮ ಕವಿತಾವಾಚನ ಮಾಡಬೇಕು. ಹಿಂದಕ್ಕೊಮ್ಮೆ ನೀವು
ಮುಂಬಯಿಯ ಲೋಕಲ್ ಕವಿ ಸಮ್ಮೇಳನದಾಗ ಕವಿತಾ ಓದಿದ್ದು ಕೇಳಿದ್ದೆ. ಭಾಳ
ಇಂಪ್ರೆಸಿವ್ಹ್ ಅನಿಸ್ತು. ನಮಗ ಈ ಸಲ ನಿರಾಶ ಮಾಡಬ್ಯಾಡ್ರಿ ನೀವು."

ಪೂರ್ಣಿಮಾಳ ಬದಲು ಆಕೆಯ ಗಂಡ ಇಂಗ್ಲೀಷಿನಲ್ಲಿ ಉತ್ತರಿಸಿದ,
“ಲಗ್ನಾ ಗೂಕಿಂತಾ ಮೊದ್ಲ, ಆಮ್ಯಾಲ ಲಗ್ನಾದ ಮ್ಯಾಲೂ ಹೊಸದಾಗಿ ಸ್ವಲ್ಪ ದಿನ,
ಖಾಲೀ ಇದ್ದಳು ಅಂತ ಅದೇನೇನೋ ರಬಿಶ್ ಬರೀತಿದ್ಳು. ಈಗ ಶೀ ಹ್ಯಾಜ್ ಬೆಟರ್
ಥಿಂಗ್ಸ್ ಟು ಲುಕ್ ಟು. ಇಂಥಾದ್ದಕ್ಕೆಲ್ಲಾ ಆಕೀಗೆ ಟೈಮೇ ಸಿಗೂದಿಲ್ಲ."
ಮುಖಭಂಗ ಮಾಡಿಸಿಕೊಂಡು ಸುಮ್ಮನಿರುವ ಹೆಂಗಸೆ ಆಪ್ಟೆ
ವಕೀಲಬಾಯಿ ? “ನೋಡ್ರಿ ಮಿ. ಸಿಂಗ್, ನಿಮ್ಮ ಮಿಸೆಸ್ಸು ಟ್ಯಾಲೆಂಟೆಡ್ ಇದ್ದಾರ.
ಅದನ್ನ ಅಪ್ರೀಶಿಯೇಟ್ ಮಾಡೋದು ಬಿಟ್ಟು ಹಿಂಗ ಡಿಸ್‌ಕರೇಜ್ ಮಾಡೋದು
ಇಟ್ ಈಜ್ ರಾದ‌ರ್ ಅನ್‌ಜಂಟಲ್‌ಮನ್ಲೀ."
ಅನಿವಾರ್ಯವಾಗಿ ಶಶಿ ಮಧ್ಯೆ ಬಾಯಿ ಹಾಕಿ ಮಾತು ಬದಲಿಸಬೇಕಾಯಿತು :
“ಆದಿರ್ಲಿ ಮಿಸ್ಟರ್ ಸಿಂಗ್, ನೀವು ಬಿಝೀ ಇರ್ತೀರಂತ ಗೊತ್ತಿದ್ದೂ ಮುದ್ದಾಂ ನಿಮ್ಮನ್ನ
ಕರಕೊಂಡ ಬರ್ರಿ ಅಂತ ಯಾಕ ಹೇಳಿದ್ದೆ ಹೇಳ್ತೀನಿ, ಕೇಳ್ರಿ. ಈ ಸರೆ ಪೂರ್ಣಿಮಾಬಾಯಿಗೆ
ನಾರ್ಮಲ್ ಡೆಲಿವ್ಹರಿ ಆಗ್ಲಿಕ್ಕಿಲ್ಲ. ಭಾಳ ವೀಕ್ ಆಗ್ಯಾರ...."
“ನಾರ್ಮಲ್ ಆಗ್ದಿದ್ರ ಸಿಝೇರಿಯನ್ ಮಾಡಿದ್ರಾತು. ಈಗ ಸಿಝೇರಿಯನ್
ಅಂದ್ರ ಸೀರಿಯಸ್ ಆಪರೇಶನ್ನೇ ಅಲ್ಲವಲ್ಲ" – ನಿರ್ಲಕ್ಷ್ಯವಾಗಿ ಹೇಳಿದ ಆತ,
ಸಿಗರೇಟು ಸೇದುತ್ತ ಆರಾಮವಾಗಿ ಕೂತು.
“ಅದಲ್ಲ ಪ್ರಶ್ನಿ ಈಗ. ಅವರಿಗೆ ಪಾಪ ಪ್ರೆಗ್ನೆನ್ಸಿ ಬೇರ್ ಮಾಡೋವಷ್ಟು
ಶಕ್ತಿನೇ ಉಳಿದಿಲ್ಲ ಈ ಸಲ. ಆದಕ್ಕ ಡಿ & ಸಿ ಮಾಡಿಸಿದ್ರ...." - ಡಾಕ್ಟರ್‌ಳನ್ನು
ಅಲ್ಲೇ ತಡೆದು ಆತನೆಂದ, “ಹೆಂಗಸಾಗಿ ಪ್ರೆಗ್ನೆನ್ಸಿ ಬೇರ್ ಮಾಡೋ ಶಕ್ತಿ ಇಲ್ಲ ಅಂದ್ರ