ಈ ಪುಟವನ್ನು ಪರಿಶೀಲಿಸಲಾಗಿದೆ

೪೪

ನಡೆದದ್ದೇ ದಾರಿ

ತಡವಾಗಿ ಏಕಾಗಲೊಲ್ಲದು, ನಮ್ಮ ಭೆಟ್ಟಿಯಾಗಿದೆ. ಎಲ್ಲವನ್ನೂ -ಎಲ್ಲರನ್ನೂ ತೊರೆದು ದೂರವಾಗಿ ನಮ್ಮ ಕನಸಿಗೆ ಬಣ್ಣ ತುಂಬೋಣ ಬಾ' ಎಂದಿದ್ದ: (ಈಗ ಮಜಾ ಅನಿಸುತ್ತಿದೆ.) 'ನಿನಗೆ ನನ್ನೊಂದಿಗೆ ಬರುವ ಧೈರ್ಯವಿಲ್ಲ. ನೀನು ಹೇಡಿ, ಆದರ್ಶಗಳ ಲಕ್ಷ್ಮಣರೇಖೆಯನ್ನು ದಾಟಿ ಬರಲಾಗದ ದುರ್ಬಲಳು' ಎಂದು ತನ್ನನ್ನೇ ಆಕ್ಷೇಪಿಸಿದ್ದ: ತನಗಾಗ ಸಿಟ್ಟು ಬಂದರೂ ಸುಮ್ಮನೇಕಿದ್ದೆ? ಬಹುಶಃ ಆತನ ಆಕ್ಷೇಪಣೆಯಲ್ಲಿ ಸತ್ಯಾಂಶವಿತ್ತೆಂದೆ? ಆದರೆ ಆತನ ಹುಚ್ಚಿಗೆ ತಾನೂ ಸಾಥ ಕೊಡಲಾರದುದಕ್ಕೆ ತನ್ನಲ್ಲಿ ಧೈರ್ಯವಿಲ್ಲದ್ದೊಂದು ಮಹತ್ವದ ಕಾರಣವಲ್ಲ. ಇನ್ನೊಂದು ಮುಖ್ಯ ಕಾರಣವಿತ್ತು ಆದಕ್ಕೆ. ಅದಾವುದೆಂಬುದು ನಿನ್ನೆ ಸಂಜೆ ಸ್ಪಷ್ಟವಾಯಿತು- ಈ ತಲೆತಿರುಕನಲ್ಲಿ ತನಗೆಂದೂ ಪೂರ್ಣ ವಿಶ್ವಾಸ ಹುಟ್ಟಲಿಲ್ಲ. ಅವನ ತಲೆಗೇರಿದ ಅಮಲು ಇಳಿದುಬಿಟ್ಟ ನಂತರ ತನ್ನ ಜೊತೆ ದೂರ ಬಂದವಳನ್ನು ಮತ್ತೆ ತನ್ನಿಂದ ದೂರ ನೂಕಿಬಿಡುವ ಪ್ರವೃತ್ತಿ ಆತನದು.

ನನಗೆ ಗೊತ್ತಿತ್ತೋ No. IV! ನಿನ್ನ ಕನಸು, ಅದಕ್ಕೆ ಬಣ್ಣ ತುಂಬುವ ಬಯಕೆ, ಎಲ್ಲ ಬಿಟ್ಟು ಹೋಗುವ ಧೈರ್ಯ- ಇವುಗಳ ಅರ್ಥ ನನಗೆ ಆಗಲೇ ಗೊತ್ತಿತ್ತು ಎಂದೆ. ಒಬ್ಬನೇ ಇದ್ದು ಬೇಸರವಾದಾಗ ಸ್ವಲ್ಪ ದಿನಗಳ ಮಟ್ಟಿಗೆ ಜೊತೆ ಬೇಕಾಗಿತ್ತು ನಿನಗೆ — ಅಪ್ಪಿ ಮುದ್ದಿಡಲು, ರಕ್ತ-ಮಾಂಸ ತುಂಬಿದ ಜೀವಂತ ಗೋಂಬೆ. ಅಷ್ಟೇ ಅಲ್ಲವೆ?

ಈಗ ನಿನ್ನ ಅವಶ್ಯಕತೆ ಪೂರೈಸಿದೆ. ಈಗ ನನ್ನ ನೆನಪು ನಿನ್ನ ಸುಟ್ಟು ಕರಕಾದ ಹೃದಯದ ಒಂದು ಮೂಲೆಯಲ್ಲಿ ತುಕ್ಕು ಹಿಡಿದ ಕಬ್ಬಿಣದ ತುಣುಕಿನಂತೆ ಬಿದ್ದು ಕೊಂಡಿದೆ. ಈಗ ಇದನ್ನೆಲ್ಲ ವಸ್ತುನಿಷ್ಟವಾಗಿ, ವಿಮರ್ಶಕನ ದೃಷ್ಟಿಯಿಂದ ನೋಡಬಹುದಾದ ಶಕ್ತಿ ನಿನಗೆ ಬಂದಿದೆ — ಹೀಗೇ ಹೌದಲ್ಲವೆ ನೀನನ್ನು ವುದು? ಸುಟ್ಟಿತು ನಿನ್ನ ವಸ್ತುನಿಷ್ಠತೆ. ನನಗನಿಸುವದು-ಈ ವಸ್ತುನಿಷ್ಠತೆ ನಿನ್ನ ಸಾಹಿತ್ಯದಲ್ಲಿ ಮಾತ್ರ ಕಾಣಸಿಗುವ ಒಂದು ಬರಿಯ ಭ್ರಮೆ. ನಮ್ಮ ಹೃದಯದ ಭಾವನೆಗಳ ತೀವ್ರತೆಯ ಬಿಸಿಗೆ ಈ ಭ್ರಮೆ ಕರಗಿಹೋಗುವುದು. ಕನಸಿನಲ್ಲಿ ಕಂಡ ದುರಂತ ಸಿನೆಮಾದ ಹಾಗಿರುವ ಆ ನೆನಪುಗಳನ್ನು ಹೇಗೆ ವಸ್ತುನಿಷ್ಠವಾಗಿ ನೋಡುವುದು? — ಅಂದಿನ ದಿನಗಳಲ್ಲಿ ನಾವಿಬ್ಬರು ಕತ್ತಲಲ್ಲಿ ತಿರುಗಿದ್ದು, ಮಳೆಯಲ್ಲಿ ತೋಯಿಸಿಕೊಂಡದ್ದು, ಒಬ್ಬರನ್ನೊಬ್ಬರು ನೋಡುತ್ತ ಗಂಟೆಗಟ್ಟಲೆ ಮೌನವಾಗಿ ಕಳೆದದ್ದು, ಒಬ್ಬರೊಬ್ಬರ ಎದೆಯಲ್ಲಿ ಮುಖ ಹುದುಗಿಸಿ ಕಣ್ಣು ಮುಚ್ಚಿ ಜಗತ್ತನ್ನೆ ಮರೆತದ್ದು (ಮರೆತಿರುವವೆಂದು ತಿಳಿದದ್ದು?) — ಎಲ್ಲಾ ಎಲ್ಲಾ ಎಂದಾದರೂ ಈ ವಸ್ತುನಿಷ್ಠತೆಯ ಬಂಧನಕ್ಕೆ ಒಳಗಾಗುವದು ಸಾಧ್ಯವೆ? ನನ್ನಿಂದ ನನ್ನ