ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                             ಮಧುಸೂದನ                           29

^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^^ ಮಗನಿಗೂ ತ್ರಿಯಂಬಕಶಾಸ್ತಿಗಳ ಪುತ್ರಿಗೂ ಸಂಬಂಧವೇನೂಇಲ್ಲವು. ಆದರೆ ನೀವು ವಿವಾಹವು ಸಂಪೂರ್ಣವಾಗಿ ನೆರವೇರಿತೆಂದೇ ಹೇಳಿದಹಾಗೆ ತಿಳಿಯಬಂದಿತು. ಅದು ತಪ್ಪು. ನಿಮ್ಮ ಪುತ್ರನೂ ಅದಕ್ಕೆ ಒಪ್ಪುವುದಿಲ್ಲ, ಆದ್ದರಿಂದ ಕೂಡಲೇ ತ್ರಿಯಂ ಬಕಶಾಸ್ತ್ರಿಗಳಿಗೆ ಕಾಗದಾಬರದು ಅವರ ಮಗಳನ್ನು ಮತ್ತಾರಿಗಾದರೂ ಮದುವೆ ಮಾಡಿಕೊಡುವಂತೆ ತಿಳಿಸಿರಿ. ನಾವು ಕೇಳದಿದ್ದರೂ ನಿಮ್ಮ ಪುತ್ರನು ತಾನಾಗಿಯೇ ಒಬ್ಬ ಋತುಮತಿಯಾದ ಕನ್ಯೆಯನ್ನು ಇನ್ನು ಕೆಲವು ದಿವಸಗಳಲ್ಲಿ ವಿವಾಹವಾಗಬೇಕೆಂದಿರುತ್ತಾನೆ. ನೀವು ಇದನ್ನು ತಪ್ಪಿಸಲಾರಿರಿ. ನೀವು ನಿಮ್ಮ ಪುತ್ರನನ್ನು ಕಂಡುಹಿಡಿಯಲು ಏನು ಪ್ರಯತ್ನ ಮಾಡಿದರೂ ಸಾರ್ಧಕವಾಗಲಾರದು. ನೀವು ಪೋಲಿಸಿನವರಿಗೆ ಹೇಳಿ ಮಾಡಿದ್ದೇನು ? ಇನ್ನೂ ಪ್ರಯತ್ನ ಮಾಡಬೇಕೆಂದಿದ್ದರೆ ಆ ಆಲೋಚನೆಯನ್ನು ತ್ಯಜಿಸಿರಿ. ಹಾಗೇನಾದರೂ ಪತ್ತೇದಾರರನ್ನು ಕರಿಸಿ ಪ್ರಯತ್ನ ಮಾಡಿದ್ದೇ ಆದರೆ "ಹುಷಾರ್" ನಿಮ್ಮ ಪುತ್ರನ ಸೌಖ್ಯಕ್ಕೆ ಕುಂದಕ ಬರುವುದು. ಎಚ್ಚರಿಕೆ.

                                                    ಇತಿ,    ನಾವುಗಳು.
   ಈ ರೀತಿಯಾಗಿ ಬರೆದಿದ್ದ ಕಾಗದವನ್ನು ಓದಿ ಮುಗಿಸಿದನಂತರ ಭಾಸ್ಕರನು ನಗುತ್ತಾ ಸೋಮಸುಂದರನು ಈ ಕಾಗದವನ್ನು ನೋಡಿ ಬಹಳ ಭಯಪಟ್ಟಿರಬೇಕೆಂದು ಯೋಚಿಸಿ ತಕ್ಷಣವೇ ಸೋಮಸುಂದರನಿಗೆ "ಭಯಪಡಬೇಡಿ ಸ್ವಲ್ಪ ಕಾಲದಲ್ಲೇ ಎಲ್ಲಾ ವಿಷಯಗಳೂ ಹೊರಕ್ಕೆ ಬರುವವು. ತ್ರಿಯಂಬಕಶಾಸ್ತ್ರಿಗಳಿಗೇನೂ ಕಾಗದ ಬರೆಯಬೇಡಿ” ಎಂದು ಒಂದು ಕಾಗದವನ್ನು ಬರೆದು ಆ ದಿವಸದ ಟಪ್ಪಾಲಿಗೇ ಹಾಕಿಬಿಟ್ಟನು.

ಸಾಯಂಕಾಲವಾದಮೇಲೆ ಭಾಸ್ಕರನು ಒಂದಲದಿವಸದಾಗೆಯೇ ಉಡುಪನ್ನು ಧರಿಸಿ ಗೋವಿಂದನಿಗೆ ಹೇಳಬೇಕಾದ ವಿಷಯಗಳನ್ನೆಲ್ಲಾ ಹೇಳಿಬಿಟ್ಟು ಒಂದು ಗಾಡಿಯನ್ನು ಬಾಡಿಗೆಗೆ ಮಾಡಿಕೊಂಡು ಕಾಳೀಬೀದಿಗೆ ಹೋಗಿ ಅಲ್ಲಿ ಆ ಗಾಡಿಯನ್ನು ಅಲ್ಲೇ ಕಾದಿರುವಹಾಗೂ ಸ್ವಲ್ಪ ಹೊತ್ತಾದಮೇಲೆ ತಾನು ಒಬ್ಬ ಕುಡುಕನನ್ನು ಕರೆದುಕೊಂಡು ಬಂದು ಗಾಡಿಯಲ್ಲಿ ಕೂರಿಸುವಹಾಗೂ, ಅವನನ್ನು ಗೋವಿಂದನ ಮನೆಗೆ ಕರದುಕೊಂಡುಹೋಗಿ ಅಲ್ಲೇ ಕಾದಿರುವಹಾಗೂ ಆಮೇಲೆ ಪ್ರನಹಾ ಕಾಳೀಬೀದಿಗೆ ಬರಬೇಕಾಗುವುದೆಂದೂ ಹೇಳಲು ಆ ಗಾಡಿಯವನು ಇಷ್ಟಕ್ಕೂ ಹತ್ತು ರೂಪಾಯಿ ಬಾಡಿಗೇ ಕೇಳಲು ಅದನ್ನು ಕೊಡುವುದಾಗಿಯೂ ಅದರಮೇಲೆ ಇನ್ನೂ ಇನಾಮನ್ನು ಕೊಡುವುದಾಗಿಯೂ ಹೇಳಿ ಈ ವಿಷಯಗಳನ್ನು ಯಾರಿಗೂ ಹೇಳಕೂಡದೆಂತಲೂ ನಾನು ಒಬ್ಬ ಪತ್ತೇದಾರನೆಂದೂ ಹೇಳಿ ಆ ಗಾಡಿಯ ನಂಬರು ಮುಂತಾದ್ದನ್ನು ತೆಗೆ