ಈ ಪುಟವನ್ನು ಪರಿಶೀಲಿಸಲಾಗಿದೆ



                           ಮಧುಸೂದನ                         39
      ವಿಶ್ವನಾಥ:-----ಸ್ವಾಮಿಾ ! ನೀವೇನು ಹೇಳುತ್ತಿರುವಿರಿ ? ನೀವು ಹೇಳುವದೊಂದೂ ನನಗರ್ಥವಾಗುವುದಿಲ್ಲ. ಹೀಗೆ ಗೂಢಾರ್ಥವಾಗಿ ಮಾತನಾಡಿದರೆ ನಾನು ಹೇಗೆ ತಿಳಿದುಕೊಳ್ಳಲಿ. ?
   ಮೋಸೆಸ್‌:---ಅಯ್ಯೋ ! ಸಾಕು !!! ವೃಥಾ ಏಕೆ, ನನ್ನನ್ನು ಮೋಸಗೊಳಿಸಲು ಪ್ರಯತ್ನ ಮಾಡುವಿರಿ, ಕಳೆದ ಆರು ತಿಂಗಳುಗಳಿಂದಲೂ ನಿಮ್ಮ ಮೇಲೆ ನನಗೆ ಕಣ್ಣಿರುವುದು. ಚರ್ಮದ ವ್ಯಾಪಾರಿಯನ್ನು ಲೂಟೀಮಾಡಲಿಲ್ಲವೆಂದೂ ನಿನ್ನೇದಿವಸ ನೀವು ದರೋಡೆಯನ್ನು ನಡಿಸಲಿಲ್ಲವೆಂದೂ ನನ್ನ ಮುಖವನ್ನು ನೋಡಿ ಹೇಳಿರಿ.
      ವಿಶ್ವನಾಥ:---ಇದೀಗ ಸರಿಯಾದ ಮಾತು. ಏನು ? ನಾನು ದರೋಡೇ ಮಾಡ ತಕ್ಕ ಕಳ್ಳನೋ ? ನಾನೇನು ಕೊಲೆಪಾತಕನೋ ? ಸರಿ ಸರಿ ! ನನ್ನನ್ನು ಹಿಡಿಯುವುದಕ್ಕಾಗಿ ಬಂದಿರುವಿರಲ್ಲವೇ ? ವಾರಂಟನ್ನು ಸ್ವಲ್ಪ ತೋರಿಸಿ ! ನೋಡೋಣ! ಯಾರಾರನ್ನು ಸಾಕ್ಷಿಗಾಗಿ ಸಿದ್ಧಪಡಿಸಿರುವಿರಿ ? ಸ್ವಾಮಿಾ ! ನಿಶ್ಚಯವಾಗಿಯೂ ತಮ್ಮ ಮಾತುಗಳು ನನಗೆ ಆಶ್ಚರ್ಯವನ್ನುಂಟುಮಾಡುತ್ತಿವೆ. ನಾನು ಮನಃಪೂರಕವಾಗಿ ದೇಶದ ಹಿತಕ್ಕಾಗಿ ಕಷ್ಟಪಡುತ್ತಿರಲು ನನ್ನನ್ನು ಕಳ್ಳನೆಂದೂ ಬೀದಿಯಲ್ಲಿ ನಿಂತು ತಲೆಯೊಡೆಯುವ ಕೊಲೆಪಾತಕನೆಂದೂ !! ಅಪರಾಧವನ್ನು ಹೊರಿಸುವಿರಾ ? ನೀವು ಪೋಲೀಸ್ ಇಲಾ ಖೆಗೇ ಗೌರವವನ್ನು ತರತಕ್ಕವರಲ್ಲವೇ !!!
      ಮೋಸೆಸ್ :-(ಆಶ್ಚರ್ಯದಿಂದ ಸ್ತಂಭಿತನಾಗಿ,) ತಾನು ಯೋಚಿಸಿದ್ದ ಉಪಾಯಗಳೆಲ್ಲಾ ಹಾಳಾದವೆ:ದು ಯೋಚಿಸಿ, ನಗುತ್ತಾ ಅಯ್ಯಾ! ನಿಮಗೆ ಇಷ್ಟು ಬುದ್ಧಿಯಿಲ್ಲದಿದ್ದರೆ ನೀವು ಇಷ್ಟುದಿನಸವೂ ತಪ್ಪಿಸಿಕೊಂಡು ಅಲೆಯುತ್ತಿರಲಿಲ್ಲ.ಈಗತಾನೇ ಏನು ? ದಯವಿಟ್ಟು ನನ್ನನ್ನು ಈ ಮನೆಯನ್ನು ಶೋಧಿಸುವುದಕ್ಕೆ ಬಿಡುವಿರಾ ?
      ವಿಶ್ವನಾಥ :-ಯಾವ ಅಧಿಕಾರದ ಮೇಲೆ ನನ್ನ ಮನೆಯನ್ನು ನೀವು ಹುಡುಕು ವಿರಿ ? ಒಂದುವೇಳೆ ನಾನು ನಿಮ್ಮನ್ನು ತಡದರೋ ? ಪೋಲೀಸ್---(ಆಹಾ ಈಗಲೀಗ ಸಿಕ್ಕಿಬಿದ್ದನೆಂದು ಯೋಚಿಸಿ) ಇದೋ ಈ ಪೋಲೀಸ್ ಅಧಿಕಾರದ ಮಹಾತ್ಮೆಯಿಂದಲೂ ಮತ್ತು ಇದೋ, ಈ ಎರಡು ರಿವಾಲ್ವರುಗಳ ಮಹಾತ್ಮಿಯಿಂದಲೂ ನಾನು ನಿಮ್ಮ ಮನೆಯನ್ನು ಹುಡುಕುವೆನು. ಹಾಗೆ ನೀವು ನನ್ನನ್ನು ಬಿಡದಿದ್ದರೆ ನಿಮ್ಮನ್ನು ಈ ಕ್ಷಣದಲ್ಲಿ ಕೈದಿಯನ್ನಾಗಿಮಾಡಿ ತೆಗೆದುಕೊಂಡು ಹೋಗುವೆನು. ಅದಾಗದಿದ್ದರೆ ಈ ಗೋಲಿಗಳು ನಿಮ್ಮ ದೇಹವನ್ನು ಹೊಕ್ಕು ದಾರಿಯನ್ನು ಬಿಡಿಸುವವು.
      ವಿಶ್ವನಾಥ :-ಸ್ವಾಮಿಾ ನೀವು ಅಷ್ಟು ಆಗ್ರಹಮಾಡಿದಮೇಲೆ ನನೇನು ಮಾಡುವದು ? ಅಂತೂ ಈ ರಾಜ್ಯದಲ್ಲಿ ಜನಗಳಿಗೆ ತಮ್ಮ ಮನೆಯಲ್ಲಿ ಕೂಡಾ ಸ್ವಾತಂತ್ರ್ಯ.