ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮಧುಸೂದನ 41
ಒಂಭತ್ತನೇ ಅಧ್ಯಾಯ.
(ವಿವಾಹಭಂಗ ಮತ್ತು 4 ಎಂ ಸಂಘದ ಮುಕ್ತಾಯ.) ಮಾರನೇ ದಿವಸ ಪೊಲೀಸ್ ಕಮಿಾರ್ಷರು ತಮ್ಮ ಆಫೀಸಿನಲ್ಲಿ ಕುಳಿತಿರುವಾಗ ಒಬ್ಬ ಸೇವಕನು ಬಂದು ಚೀಟಿಯೊಂದನ್ನು ಕೊಟ್ಟನು. ಅದರಲ್ಲಿ « ಪತ್ತೇದಾರಿ ಇಲಾಖೆಗೆ ಸೇರಿದ ಭಾಸ್ಕರ” ಎಂದಿದ್ದಿತು. ಕೂಡಲೇ ಕಳೆಗುಂದಿದ್ದ ಕಮಾರ್ಷರ ಮುಖವು ಕಾಂತಿಯನ್ನು ಹೊಂದಿತು. 'ತಕ್ಷಣವೇ ಅವರನ್ನು ಕರೆದುಕೊಂಡು ಬಾ' ಎಂದು ಕಟ್ಟಳೇಮಾಡಿ ಕಳುಹಿಸಿದನು. ಭಾಸ್ಕರನು ಅವನಿಗೆ ಹೊಸಬನಲ್ಲವು, ಭಾಸ್ಕರನೂ ಅವನೂ ಸ್ನೇಹಿತರಾಗಿದ್ದರು. ಹಿಂದಲ ದಿವಸಗಳಲ್ಲಿ ನಡೆದ ವಿಷಯಗಳ ವಿಷ ಯವಾಗಿ ಯೋಚಿಸುತ್ತಾ ಭಾಸ್ಕರ'ಗೆ ಈ ವಿಷಯಗಳನ್ನೆಲ್ಲಾ ತಿಳಿಯಪಡಿಸಬೇಕೆಂದಿದ್ದನು. ಅಷ್ಟರಲ್ಲೇ ಭಾಸ್ಕರನೇ ತನ್ನನ್ನು ನೋಡಲು ಬರಲು ಅತ್ಯಂತ ಸಂತೋಷದಿಂದ ಅವನನ್ನು ಬರುವಹಾಗೆ ಹೇಳಿಕಳುಹಿಸಿದನು. ಸ್ವಲ್ಪಹೊತ್ತಿಗೆ ಭಾಸ್ಕರನು ಪೊಲೀಸ್ ಕಮಿಾರ್ಷರ ಕೊಠಡಿಗೆ ಬಂದು ಅವನನ್ನು ಕಾಣಿಸಿಕೊಂಡನು. ಆತನು ಇವನ ಕೈಹಿಡಿದು ಆಡಿಸಿ 'ಭಾಸ್ಕರಾ ! ನೀನು ಈ ಸಮಯದಲ್ಲಿ ಬಂದದ್ದು ನನಗೆ ಬಹಳ ಸಂತೋಷವನ್ನುಂಟುಮಾಡಿದೆ. ನೀನು ನಿನ್ನೆ ಮೊನ್ನೇ ನಡೆದ ಡಕಾಯಿತಿಗಳನ್ನೂ ಮತ್ತು ಕೊಲೆಗಳನ್ನೂ ಕೇಳಿರುವಿಯೆಂದು ನಂಬುತ್ತೇನೆ, ನೀನು ಈ ವಿಷಯಗಳಲ್ಲಿ ಪ್ರವೇಶಮಾಡಿ ಈ ಕೊಲೆಪಾತಕರನ್ನು ಪತ್ತೆಮಾ ಡುವಿಯೆಂದು ನಂಬಿರುತ್ತೇನೆ. ನೀನು ಪತ್ತೆಮಾಡಿಕೊಟ್ಟರೆ ನಿನಗೆ ಬಹುಮಾನವೂ ಮತ್ತು ಯಶಸ್ಫೂ ಬರುವುವು ಮತ್ತು ನನಗೂ ಬಹಳ ಸಹಾಯಮಾಡಿದಂತಾಗುವುದು. ಎಂದು ಹೇಳಿದನು. ಭಾಸ್ಕರ :---ಸ್ವಾಮಾ ! ನಾನು ಆಗಲೇ ಎಲ್ಲವನ್ನೂ ಪತ್ತೆಮಾಡಿರುತ್ತೇನೆ. ಈ ಎರಡು ದಿವಸಗಳಲ್ಲಿ ನಡೆದ ವಿಷಯಗಳಲ್ಲದೆ ಕೆಲವು ದಿವಸಗಳ ಹಿಂದೆ ವಾಸವಪುರದ ಜಮಾನ್ದಾರರ ಮಗನು ಕಾಣದೇಹೋದ ವಿಷಯವನ್ನೂ ಸಹ ಪತೇಮಾಡಿರುತ್ತೇನೆ. ಕಮೀಷನರು :---ಏನು ? ಆಗಲೇ ಎಲ್ಲವನ್ನೂ ಪತೇಮಾಡಿರುವಿಯಾ? ನೀನೀಗ ನಿಜವಾದ ಪತ್ತೇದಾರನು. ಈ ವಿಷಯಗಳೆಲ್ಲಾ ಪತ್ತೆಯಾಗಲು ಇನ್ನೂ ಅನೇಕ ತಿಂಗಳುಗಳಾಗುವುವೆಂದು ನಾನು ಯೋಚಿಸಿದ್ದೆನು, ಆದರೆ ನೀನು ಆಗಲೇ