44 ಕಾದಂಬರೀ ಸಂಗ್ರಹ ನಿಂತಿದ್ದ ಇಬ್ಬರು ಬ್ರಾಹ್ಮಣ ತರುಣರಿಗೆ ಏನನ್ನೋ ತೋರಿಸುತ್ತಾ ಒಳಕ್ಕೆ ಹೋಗುತ್ತಿದ್ದರು. ಈ ಬ್ರಾಂಹ್ಮಣರುಗಳನ್ನು ಯಾರಾದರೂ ಶೋಧನೆಮಾಡಿದ್ದರೆ ಪ್ರತಿಯೊಬ್ಬನ ಮಡಿಲಿಯಲ್ಲಿಯೂ ಒಂದೊಂದು ರಿವಾಲ್ವರುಗಳನ್ನು ನೋಡಬಹುದಾಗಿತ್ತು. ಈ ವಿವಾಹಮಂಟಪದಲ್ಲಿ ಮತ್ತೊಂದು ವಿಶೇಷವೇನೆಂದರೆ, ಆ ಸ್ಥಳದಲ್ಲಿ ಒಬ್ಬ ಸ್ತ್ರೀಯಾದರೂ ಇರಲಿಲ್ಲ, ಸುಂದರಿ ಯೆಂಬ ಋತುಮತಿಯಾದ ಕನ್ಯೆಯು ಸರ್ವಾಭ ರಣಗಳಿಂದಲಂಕೃತಳಾಗಿದ್ದಳು, ಅವಳು ಅತ್ಯಂತ ಸುಂದರಿಯಾಗಿದ್ದದ್ದರಿಂದ ಬಂದವರೆಲ್ಲರೂ ಅವಳನ್ನೇ ಅವಾಕ್ಕಾಗಿ ನೋಡುತ್ತಿದ್ದರು. ಇಂಥಾ ನಾರೀರತ್ನವು ನೀಚನಾದ ವಿಶ್ವನಾಥನಿಗೆ ಮಗಳಾಗಿ ಹುಟ್ಟಿದ್ದು ಆಶ್ಚರ್ಯವಾಗಿರುವದು. ಆಕೆಗೆ ತನ್ನ ತಂದೆಯ ದುರಾಪಾರದ ವಿಷಯವು ಸ್ವಲ್ಪವಾದರೂತಿಳಿಯದು. ಆಕೆಗೆ ತಾನು ಋತುಮತಿಯಾ ದಮಲೆ ವಿವಾಹವಾಗುವ ವಿಷಯದಲ್ಲಿ ಸ್ವಲ್ಪವಾದರೂ ಮನವಿಲ್ಲವು, ವಿಶ್ವನಾಥನು ಅವಳನ್ನು ಸೋಮೇಂದ್ರನೆಂಬ ಅತುಳೆಶ್ವರ್ ಸಂಪನ್ನನಿಗೆ ವಿವಾಹ ಮಾಡಿಕೊಡುವುದಾಗಿಯೂ, ಮದುವೆಯಾದಮೇಲೆ ಆ ಸೋಮೇಂದ್ರನ ನಿಜವಾದ ಹೆಸರು ತಿಳಿಯುವು ದೆಂದೂ ಅವನು ಈಗ ಯಾವುದೋ ಒಂದು ಕಾರಣದಿಂದ ಛದ್ಮವೇಷದಲ್ಲಿರುತಾನೆಂದೂ ಹೇಳಿ, ಅವಳನ್ನು ಈ ವಿವಾಹವನ್ನು ಮಾಡಿ ಕೊಳ್ಳುವ ಹಾಗೆ ಒಪ್ಪಿಸಿದನು. ಚಿಕ್ಕವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಆ ಬಾಲೆಯು ತನ್ನ ತಂದೆಯನ್ನು ತನ್ನ ಸರ್ವಸ್ವವೆಂದು ನಂಬಿ ಅವನ ಮಾತಿಗೆ ವ್ಯತಿರಿಕ್ತವಾಗಿ ನಡೆಯದೆ ಅವನ ಮಾತಿಗೊಪ್ಪಿದಳು. ಇಂಥಾ ನವಕೋಮಲಾಂಗಿಯು ಕೊನೆಗೆ ಧೂರ್ತನಾದ ತಂದೆಯ ದೆಸೆಯಿಂದಲೇ ಪ್ರಾಣಬಿಡುವ ಕಾಲವು ಬಂದಿತು.
ವಿವಾಹ ಮುಹೂರ್ತವು ಹತ್ತು ಗಂಟೆಗೆ ಸರಿಯಾಗಿಡಲ್ಪಟ್ಟಿತ್ತು. 'ನನಗೆ ಹೆಂಡತಿ ಯಿಲ್ಲವಾದ್ದರಿಂದ ಪತ್ನಿ ಯಿಲ್ಲದೇನೇ ಮದುವೆಮಾಡಿಕೊಡುತ್ತೇನೆಂದು ವಿಶ್ವನಾಥನು ಹೇಳಿದನು.' ಇಬ್ಬರು ವೈದಿಕಬ್ರಾಹ್ಮಣರು ದುಡ್ಡಿನಾಶೆಗಾಗಿ ವಿಶ್ವನಾಥನು ಹೇಳಿದ ಹಾಗೇ ವಿವಾಹ ಮಾಡಿಸುವುದಾಗಿ ಹೇಳಿ ಬಂದಿದ್ದರು. ಸೋಮೇಂದ್ರನೆಂದು ಕರಯಲ್ಪಟ್ಟ ಮದವಣಿಗನು ಅಲಂಕರಿಸಲ್ಪಟ್ಟು ಕರತರಲ್ಪಟ್ಟನು, ಅವನಿಗೆ ಸುಮಾರು ಮೂವತ್ತು ವರ್ಷ ವಯಸ್ಸಾಗಿರಬಹುದೆಂದು ಕಾಣಬಂದಿತು. ಮುಖದಲ್ಅಲಿ ಮಿಶೆಯೂ ದಾಡಿಯೂ ಇದ್ದವು. ಅವನು ಸುಂದರಿಯನ್ನು ನೋಡಿ ನಗುತ್ತಾ ಬಂದನು. ಮನೆಗೆ ಸೇರಿದ ಆವರಣದಲ್ಲೇ ಕಾಶೀಯಾತ್ರೆಯು ನಡೆಸಲ್ಪಟ್ಟಿತು, ವಧೂವರರು ಮಣೆಯಮೇಲೆ ಕುಳಿತುಕೊಂಡು ಹೋಮಾದಿಗಳನ್ನು ಮಾಡಿದರು. ಇನ್ನೇನು ಧಾರೆ