46 ಕಾದಂಬರೀ ಸಂಗ್ರಹ ಹೋಗಲಾರೆನೆಂದು ಕೂಗಿ ಆ ನೀಚನು ಮೇಲಕ್ಕೇಳುತ್ತಿದ್ದ ಸುಂದರಿಯ ಹೃದಯ ಕ್ಕೊಂದು ಗೋಲಿಯನ್ನು ಕಳುಹಿಸಿ ತಾನೂ ಉಳಿದಿದ್ದ ಗೋಲಿಯಿಂದ ಭಾಸ್ಕರನು ತಡೆಯುವುದರೊಳಗಾಗಿ, ತಲೆ ಹೊಡೆದುಕೊಂಡು ಕೆಳಕ್ಕುರುಳಿದನು. ಭಾಸ್ಕರನು ಸುಂದರಿಯ ಸಮೀಪಕ್ಕೆ ಬಂದು ನೋಡುವಲ್ಲಿ ಪ್ರಾಣವು ಅವಳ ದೇಹವನ್ನು ಬಿಟ್ಟು ನೀಗಿತ್ತು. !! ಮಧುಸೂದನನನ್ನೂ ಬ್ರಾಹ್ಮಣರಿಬ್ಬರನ್ನೂ ಮೊದಲೇ ಒಂದು ಕೊಠಡಿಗೆ ಕರೆದು ಕೊಂಡುಹೋಗಿಟ್ಟು ಕೊಂಡಿದ್ದರು. ಪೋಲಿಸಿನವರ ಕಡೆಯೂ ಹತ್ತು ಜನಗಳು ಸತ್ತು ಹೋಗಿದ್ದರು. ಮತ್ತಾರು ಜನಗಳಿಗೆ ಬಹಳ ಘಾಯವಾಗಿದ್ದಿತು. 'ಎಂ' ಕೂಟದವರಲ್ಲಿ ಕೈಶೆರೇ ಸಿಕ್ಕಿದ ಏಳು ಜನಗಳನ್ನೂ ತನ್ನ ಪೋಲೀಸ್ ಸೇವಕರನ್ನೂ ಕರೆದುಕೊಂಡು ಮನೆಯಲ್ಲಿ ಬಿದ್ದಿದ್ದ ಹೆಣಗಳನ್ನೆಲ್ಲಾ ಸಾಗಿಸುವಂತೆ ಅಪ್ಪಣೇ ಮಾಡಿ ಮನೆಯ ಬಳಿ ಹತ್ತು ಜನರನ್ನು ಕಾವಲಿಟ್ಟು, ಕಮಿಷನರು ಹೊರಟುಹೋದರು. ಭಾಸ್ಕರನು ಮಧುಸೂದನನನ್ನೂ ಬ್ರಾಹ್ಮಣರಿಬ್ಬರನ್ನೂ ಕರೆದುಕೊಂಡು ಬೀದಿಗೆ ಬಂದು ಅಲ್ಲಿ ಬ್ರಾಹ್ಮಣರನ್ನು ಕಳುಹಿಸಿಬಿಟ್ಟು ಗೋವಿಂದನ ಮನೆಗೆ ಬಂದು ಅಲ್ಲಿ ಮಧುಸೂದನನನ್ನು ಬಿಟ್ಟು ತಾನು ಕಮೀಷನರ ಆಫೀಸಿಗೆ ಬಂದನು. ಇತ್ತ ಕಲ್ಕತ್ತಾ ನಗರದಲ್ಲೆಲ್ಲಾ ಈ ಸಂಗತಿಗಳು ಹರಡಿದವು. ಕೂಡಲೇ ಅನೇಕ ಸಂಘದವರು ಕಲ್ಕತ್ತಾವನ್ನು ಬಿಟ್ಟೋಡಿದರು. ಎಲ್ಲರೂ ಇವುಗಳನ್ನೆಲ್ಲಾ ಪತ್ತೇಮಾಡಿದ ಭಾಸ್ಕರನನ್ನು ಹೊಗಳಲಾರಂಭಿಸಿದರು. ಅನೇಕರು 'ಎ೦' ಸಂಘದ ಮುಕ್ತಾಯವನ್ನು ಕೇಳಿ "ಸತ್ಪುರುಷರಂತೆ ಕಾಣಬಂದ ಆ ನೀಚರುಗಳ ಹಾಗೆ ಇನ್ನೆಷ್ಟು ಜನಗಳಿದ್ದಾರೋ ?” ಎಂದು ಮಾತನಾಡಿದರು. ಅನೇಕರು ಸುಂದರಿಗಾದ ಗತಿಯನ್ನು ಕೇಳಿ ಮರುಗಿದರು. ಹತ್ತನೇ ಅಧ್ಯಾಯ. ಭಾಸ್ಕರನ ಹೇಳಿಕೆ-ಮುಕ್ತಾಯ. ವಾಸವಪುರದಿಂದ ಸೋಮಸುಂದರನೂ ತ್ರಿಯಂಬಕ ಶಾಸ್ತ್ರಿಯೂ ಕಲ್ಕತ್ತೆಗೆ. ಬಂದು ಭಾಸ್ಕರನನ್ನೂ ಮಧುಸೂದನನನ್ನೂ ಕಾಣಿಸಿಕೊಂಡರು. ಮಧುಸೂದನನು ತನ್ನ ಸ್ನೇಹಿತರಿಂದ ತಾನು ಕೆಟ್ಟುಹೋದ ವಿಷಯಗಳನ್ನೆಲ್ಲಾ ತನ್ನ ತಂದೆಗೆ ತಿಳಿಸಿ
ಪುಟ:ನನ್ನ ಸಂಸಾರ.djvu/೧೨೨
ಈ ಪುಟವನ್ನು ಪರಿಶೀಲಿಸಲಾಗಿದೆ