ಕದಂಬ ಸಂಗ್ರಹ ಕೈಲಾಸಪರ್ವತದ ಶಿಖರದಲ್ಲಿ ಸರ್ವ ರಕ್ಷಕನಾದ ತ್ರ್ಯಕ್ಷನು ಪಾರ್ವತೀ ಮತ್ತು ಗಜಾನನರಿಂ ಸಹಿತನಾಗಿ, ಮಹರ್ಷಿಗಳಿಂದ ಸರಿಸಲ್ಪಡುತ್ತಿರುವ ವೇದಗಳಂ ಲಾಲಿಸುತ್ತಾ ಹಸನ್ಮುಖನಾಗಿ ಕುಳಿತಿದ್ದನು. ಆಗ ದೇವತೆಗಳು ತಮಗೆಲ್ಲಾ ಹಿರಿಯನೂ, ರಕ್ಷಕನೂ ಮತ್ತು ಕರುಣಾಳುವೂ ಆದ ಪರಮೇಶ್ವರನಂ ಬಹಳವಾಗಿ ಸ್ತುತಿ ಸಲಾಮಹಾತ್ಮನು, ಬಂದ ಕಾರಣವಂ ಪೇಳಿರೆನಲಾ ದೇವತೆಗಳು ಗಂಭೀರಭಾವದಿಂದ "ಸ್ವಾಮಿ ! ಮಹಾವಿಷ್ಣುವು ಅಸುರರನ್ನು ವ್ಯಾಮೋಹಗೊಳಿಸುವುದಕ್ಕೆ ಬೌಧ್ಧವತಾರವಂ ಮಾಡಿದಾಗ, ಆತನಿಂದ ಹೇಳಲ್ಪಟ್ಟ ಶಾಸ್ತ್ರಯುಕ್ತಿಗಳ ಬಲದಿಂದ, ಬೌದ್ಧರು ಶ್ರೌತಸ್ಮಾರ್ತಸಿದ್ದಾಂತಗಳಂ ತಿರಸ್ಕರಿಸುತ್ತಾ ವೇದಗಳಿಗೆ ಅಪ್ರಾಮಾಣ್ಯವನ್ನು ಸಾಧಿಸ ತೊಡಗಿದ್ದಾರೆ. ಯಜ್ಞವೆಂಬದನ್ನು ಸಕಲರೂ ನಿಂದಿಸುತ್ತಾರೆ. ಶೈವಾಗಮ, ವೈಷ್ಣವಾಗಮಗಳು ಪ್ರಸಿದ್ದವಾಗಿವೆ. ಉಚ್ಚಿಷ್ಟ ಭಕ್ಷಣ, ನರಬಲಿ, ಮದ್ಯಪಾನ ಇವುಗಳನ್ನು ಅನೇಕ ಸಜ್ಜನರೂ ಕೂಡ ಆಚಾರಿ. ಆದ್ದರಿಂದ ಎಲೈ ಮಹಾನುಭಾವನೇ ! ನೀನು ಆ ದುಷ್ಟರಂ ನಿಗ್ರಹಿಸಿ ವೇದಮಾರ್ಗಪ್ರತಿಷ್ಠಾಪನೆಯಂಗೈದು ನಮ್ಮನ್ನುದ್ಧರಿಸಬೇಕು” ಎಂದು ಬೇಡಿದರು. ಅವರ ಪ್ರಾರ್ಥನೆಯಂ ಕೇಳಿ ಆ ಲೋಕ ಶಂಕರನು "ಎಲೈ ದೇವತೆಗಳಿರಾ! ವೇದಬ್ರಾಹ್ಮಣಿಕೆಯನ್ನುದ್ಧರಿಸಲೋಸುಗವೂ ಮತ್ತು ಧರ್ಮ ಸಂಸ್ಥಾಪನೆಯನ್ನು ಮಾಡಲೋಸುಗವೂ ರೈತಧ್ವಂತಮಧ್ಯಾಹ್ನಭಾನುಗಳಂತಿರುವ ನಾಲ್ವರು ಶಿಷ್ಯರಿಂದೊಡಗೂಡಿ ಪರಮಹಂಸನಾಗಿ, ಶಂಕರನೆಂಬ ನಾಮಧೇಯದಿಂದ ಮನುಷ್ಯಾವತಾರವಂ ಗೈಯುತ್ತೇನೆ. ನೀವೂ ಕೂಡ ಮತ್ಸಹಾಯಾರ್ಧವಾಗಿ ಮನುಷ್ಯರೂಪದಿಂದ ಅವತರಿಸಿ ನನ್ನ ಆಗಮನವನ್ನು ನಿರೀಕ್ಷಿಸಿಕೊಂಡಿರಿ. ಆಗ ನಿಮ್ಮ ಹೃದಯಾಭಿಲಾಷೆಯು ಸಂಪೂರ್ಣವಾಗುತ್ತದೆ" ಎಂದುತ್ತರವಿತ್ತನು. ಅನಂತರ ಚಂದ್ರಶೇಕರನು ತನ್ನ ತನುಜನಾದ ಗುಹನಂ ಕುರಿತು "ಎಲೈ ಕ್ರೌಂಚದಾರಣನೇ ! ಕಾಂಡತ್ರಯಾತ್ಮಕವಾದ ವೇದವು ಉದ್ದರಿಸಲ್ಪಟ್ಟರೆ ಬ್ರಾಹ್ಮಣರು ಉದ್ದರಿಸಲ್ಪಟ್ಟಂತಾಗುವರು. ನನ್ನಿಂದಲೇ ಅಪ್ಪಣೆಯಂ ಪಡೆದುಹೋಗಿರುವ ಶೇಷ ವಷ್ಣುಗಳು ಸಂಕರ್ಷಣಪತಂಚಲಿಗಳೆಂಬ ಮುನಿಗಳಾಗಿ ಉಪಾಸನಾ ಮತ್ತು ಯೋಗ ಕಾಂಡಗಳನ್ನು ಉದ್ಧಾರಮಾಡುತ್ತಲಿರುವರು. ಮೂರನೆಯದಾದ ಜ್ಞಾನಕಾಂಡವನ್ನು ನಾನೇ ಉದ್ಧಾರಮಾಡುವೆನು. ನೀನು ಬೈಮನಿಯ ಪೂರ್ವಮೀಮಾಂಸವೆಂಬ ಕರ್ಮ ಕಾಂಡವನ್ನು ಊರ್ಜಿತಸ್ಥಿತಿಗೆ ತಂದು ಸುಬ್ರಹ್ಮಣ್ಯನೆಂಬ ಹೆಸರನ್ನು ಅನ್ವರ್ಥಗೊಳಿಸಿಬೇಕು. ಬ್ರಹ್ಮನೂ ನಿನಗೆ ಸೌಗತಾದಿಗಳ ನಾಶವಿಷಯದಲ್ಲಿ ಮಂಡನ ಮಿಶ್ರಾಭಿಖ್ಯಾ
ಪುಟ:ನನ್ನ ಸಂಸಾರ.djvu/೧೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.