ಶಂಕರಕಥಾಸಾರ ದ್ದನು. ಆ ನದಿಗೆ ಸಮೀಪದಲ್ಲಿ ವಿಖ್ಯಾತವಾದ ಕಾಲಟಿ ಎಂಬ ಅಗ್ರಹಾರವಿತ್ತು. ಅಲ್ಲಿ ವಿದ್ಯಾಧಿರಾಜನ ಮಗನಾದ ಶಿವಗುರುವು ಪತ್ನಿಯಾದ ಆರ್ಯಾಂಬಿಕೆಯಿಂದ ಸಹಿತ ನಾಗಿ ಅನೇಕ ಯಾಗಾದಿಗಳನ್ನೂ , ವ್ರತಗಳನ್ನೂ ಮಾಡಿಕೊಂಡು ಅತಿಧಿ ಅಭ್ಯಾಗತರಿಗೆ ಅನ್ನ ದಾನವಂಮಾಡುತ್ತಾ ಧರ್ಮದಿಂದಿರುತ್ತಿದ್ದನು. ಅವರಿಗೆ ಬಹಳ ಕಾಲದವರಿವಿಗೂ ಪುತ್ರೋದಯವೇ ಆಗಲಿಲ್ಲ. ಇದೊಂದು ಚಿಂತೆಯು ಅವರನ್ನು ಬಹಳವಾಗಿ ಕಾಡು ತ್ತಿತ್ತು. ಅನಂತರ ಆ ದಂಪತಿಗಳು ಜ್ಯೋತಿರ್ಲಿಂಗರೂಪಧಾರಿಯಾದ ಪರಮೇಶ್ವರನನ್ನು ಭಜಿಸಿದರೆ ಆ ಮಹಾತ್ಮನ ಅನುಗ್ರಹದಿಂದ ತಮ್ಮ ವಾಂಛಿತಾರ್ಥವು ಸಿದ್ಧಿಸ ಬಹು ದೆಂದು ತಿಳಿದು ಅಗಸ್ತಶಿಷ್ಯರಿಂದುಪದೇಶಿಸಲ್ಪಟ್ಟ ಶಿವಮಂತ್ರವನ್ನು ಜಪಿಸುತ್ತಾ ಭಕ್ತವರದನಾದ ಆ ಮಹಾದೇವನನ್ನು ಹನ್ನೆರಡುವರ್ಷ ಕಾಲ ಸಕಲಶ್ರಮಗಳನ್ನೂ ಸಹಿಸಿಕೊಂಡು ನಿಶ್ಚಲಜ್ಞಾನದಿಂದಾರಾಧಿಸುತ್ತಿದ್ದರು. ಹೀಗಿರೆ, ಒಂದಾನೊಂದುದಿನ ಮಹೇಶ್ವರನು ವೃದ್ದ ಬ್ರಾಹ್ಮಣವೇಷದಿಂದ ಬಂದು ಸ್ವಪ್ನದಲ್ಲಿ ಶಿವಗುರುವನ್ನು ಕುರಿತು "ಎಲೈಶಿವಗುರುವೇ ! ನಿನ್ನ ಭಕ್ತಿಗೆ ನಾನು ಮೆಚ್ಚಿದೆನು, ನಿನಗೇನುಬೇಕು” ಎಂದನು. ಅದಕ್ಕೆ ಶಿವಗುರುವು "ಸ್ವಾಮಿ? ಪುತ್ರರ ತ್ನವು ಉದಯಿಸುವಂತೆ ವರವನ್ನು ದಯಪಾಲಿಸಿದರೆ ಸಾಕು ” ಎಂದುತ್ತರವಿತ್ತನು. ಮಹೇಶ್ವರನು ಪುನಃ "ನಿನಗೆ ಸುಗುಣಿಯೂ, ಸಕಲಶಾಸ್ತ್ರಜ್ಞನೂ, ಅಲ್ಪಾ ಯುವೂ, ಆದಓರ್ವಪುತ್ರನುಬೇಕೋ ? ಅಥವಾ ದುರ್ಗುಣಿಗಳೂ, ದಡ್ಡರೂ, ದೀರ್ಘಾಯುಷ್ಯಂತರೂ ಆದ ಬಹುಮಂದಿ ಪುತ್ರರುಬೇಕೋ ?” ಎಂದು ಕೇಳಲುಶಿವಗುರುವುತನಗೆ, ಸುಗುಣಿಯೂ, ಸಕಲಶಾಸ್ತ್ರಜ್ಞನೂ, ಅಲ್ಪಾಯುವೂ ಆದಓರ್ವ ಪುತ್ರನೇಸಾಕೆಂದುತರವಿತ್ತನು. ಮಹೇಶ್ವರನು ಹಾಗೆಯೇ ಆಗಲೆಂದುಹೇಳಿ ವಿಭೂತಿಯನ್ನೂ, ಫಲವನ್ನೂ, ಮಂತ್ರಿಸಿಕೊಟ್ಟು ಅಂತರ್ಹಿತನಾದನು. ಅನಂತರ ಈ ದಂಪತಿಗಳು ಎಚ್ಚರವಾದಮೇಲೆ ದೇವರಿಗೆ ನಮಸ್ಕರಿಸಿ ಸ್ವಗೈ ಹಕ್ಕೆ ತೆರಳಿ ತಮಗಾದ ಶುಭವಾರ್ತೆಯನ್ನು ಬಂಧುವರ್ಗಕ್ಕೆ ತಿಳಿಸಲು ಅವರು " ನಿಮ್ಮ ವಂಶವೇಪವಿತ್ರವಾಯಿತು ನೀವು ಕೃತ ಕೃತ್ಯರಾಗಿರಿ” ಎಂದುಸುರಿದರು. ಈದಂಪತಿಗಳು, ಮಂತ್ರಜಪಶಾನ್ತಿಯನ್ನು ಮಾಡಿ, ಲಕ್ಷ ಜನ ಬ್ರಾಹ್ಮಣರ ಭೋಜನದಿಂದಲೂ, ರುದ್ರಾಭಿಷೇಕದಿಂದಲೂ, ಚತುರ್ವೆದ ಪಾರಾಯಣದಿಂದಲೂ, ಗೋಬ್ರಾಹ್ಮಣರಸೇವೆಯಿಂದಲೂ, ಪರಮೇಶ್ವರನ ಸೇವೆಯಂಮಾಡುತ್ತಾ ಸುಕೃತವೂ
ಪುಟ:ನನ್ನ ಸಂಸಾರ.djvu/೧೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.