ಈ ಪುಟವನ್ನು ಪರಿಶೀಲಿಸಲಾಗಿದೆ

೨೦ ಕಾದಂಬರೀಸಂಗ್ರಹ

        ಯೋಚಿಸುತ್ತುರ.ವಾಗಲೇ ಚಂಡಾಲರೂಪವು ಬಯಲಾಗಿ ಕೋಟಿಸೂರ್ಯಪ್ರಕಾಶವಾದ 
        ದಿವ್ಯರೂಪದೊಂದಿಗೆ ಉಮಾರ್ಧದೇಹನೂ ವೃಷಭಾರೂಢನೂ ಪ್ರಮಧಗಣಯುತನೂ 
        ಚತುವೇದಸ್ತೂಯಮಾನನೂ ಆದ ದೇವೋತ್ತಮನೆನಿಸುವ ಪರಮೇಶ್ವರನು 
        ನಿಂತಿದ್ದನು.
               ಆಗ ಮಹೇಶ್ವರನು, ಮದಂಶಸಂಭೂತನಾದ ಯತಿಯೇ ! ನೀನು ಪ್ರಪಂಚವ               
        ನ್ನುಧ್ದರಿಸಿ ವೇದಾಂತಪ್ರತಿಷ್ಠಾಪನಾರ್ಧವಾಗಿ ಅವತಸಿರುವ ಕಾರಣ, ಮಹಾವಿಷ್ಣ‌೦         
        ಶಜನಾದ ವೇದವ್ಯಾಸನಿಂದ ರಚಿತವಾದ ಬ್ರಹ್ಮಸೂತ್ರಗಳಿಗೂ, ದಶೋಪನಿಷತ್ವಂಚ                    
        ರುದ್ರ, ನೃಸಿಹ್ಮತಾಪಿನೀ, ಶ್ರೀ ರುದ್ರಾದಿವೇದಾಂತಗಳಿಗೂ, ಗೀತಾ, ಸಹಸ್ರನಾಮಾ            
        ದಿಗಳಿಗೂ ಆದ್ವೆ ತಪ್ರತಿಪಾದಕವಾದ ಭಾಷ್ಯವಂ ರಚಿಸಿ, ಶಿಷ್ಯರಿಗೆ ಪ್ರವಚನಮಾಡಿಸಿ,  
        ದುರ್ಮತಗಳಂ ಖಂಡಿಸಿ, ದೇವತಾಕಲೆಗಳಂ ಪ್ರತಿಷ್ಠಿಸಿ, ವಾಣೀಹಿರಣ್ಯಗರ್ಭರಿಗೆ ಶಾಪ 
        ವಿಮೋಚನೆಯಂಮಾಡಿ, ಗುರುಪೀಠಗಳಂ ಸ್ಥಾಪಿಸಿ, ಷಡ್ಡರ್ಶನೆಸ್ಥಾಪನಾಚಾರ್ಯನೆಸಿ                     
        ಸಿಕೊಂಡು, ಶಿಷ್ಯರನ್ನು ದ್ಧರಿಸಿ, ಶಾಶ್ವತಕೀರ್ತಿಯಂಪಡೆದು, ಕೊನೆಗೆ ಸಶರೀರನಾಗಿ 
        ನನ್ನೊಳಗೈಕ್ಯವಾಗೆಂದು ಹೇಳಿ ಅಂತರ್ಧಾನವನ್ನು ಹೊಂದಿದನು.
               ಆಚಾರ್ಯರು, ಅಲ್ಲಿಂದ ಬದುಕಾಶ್ರಮಕ್ಕೆ ಹೋಗಿ, ಅಲ್ಲಿ ವ್ಯಾಸರು              
        ಕಾಣದೇ ಹೋಗಲು, ಸನಂದನರನ್ನು ಅಲ್ಲಿಯೇ ಬಿಟ್ಟು ನರನಾರಾಯಣಾಶ್ರಮಕ್ಕೆ           
        ಹೋಗಿ ಅವರ ಆತಿಧ್ಯಮಂ ಕೈಕೊಂಡು  "ನೀನು ಮಣಿಕರ್ಣಿಕಾಘಟ್ಟದಲ್ಲಿ, ಶಿಷ್ಯರಿಗೆ 
        ಭಾಷ್ಯಪ್ರವಚನಮಾಡಿಸುತ್ತಿರುವ ಸಮಯದಲ್ಲಿ ವ್ಯಾಸರಂ ಕಾಣುವಿ” ಎಂಬ ಅವರ     
        ಮಾತಿನಂತೆ, ಹಿಂತಿರಿಗಿ, ಭಾಷ್ಯಂ ರಚಿಸಿ ಶಿಷ್ಯರಿಗೆ ಉಪದೇಶಿಸುತ್ತಿದ್ದರು.
               ಅಲ್ಲಿದ್ದ ಇತರ ಶಿಷ್ಟರು, ಪದ್ಮನಾಭಾವತಾರಿಯಾದ, ಸನಂದರನ್ನು ಅಂತ       
        ರಂಗದಲ್ಲಿ ದ್ವೇಷಿಸುತ್ತಿದ್ದರು.
               ಸನಂದನಾಚಾರ್ಯನು, ಒಂದುದಿನ ಗಂಗಾನದಿಯ ಆಚೇದಡದಲ್ಲಿ, ದೇವ       
        ತಾರ್ಚನೆಗೆ ತುಲಸೀ, ಬಿಲ್ವ, ಪುಷ್ಪಗಳಂ, ಕುಯ್ಯುತ್ತಿರಲು, ಆಚಾರ್ಯರು ಅವ             
        ನನ್ನು ಆಗಲೇ ಬರಹೇಳಿ ಕೂಗಿದರು.
               ಅದನ್ನು ಕೇಳಿದಕೂಡಲೇ ಗುರುಭಕ್ತಿಯುಳ್ಳ ಶಿಷ್ಯನು, ನದಿಯ ಪ್ರವಾಹದ       
        ಮೇಲೆಯೇ ನಡೆಯಲಾರಂಭಿಸಿದನು. ಗಂಗೆಯು, ಇವನ ಗುರುಭಕ್ತಿಯನ್ನು ಕಂಡು           
        ಅವನ ಪ್ರತಿಒಂದು ಹೆಜ್ಜೆಗೂ, ಒಂದೊಂದು ಕಮಲವನ್ನು , ಒಡ್ಡುತ್ತಾ ಬಂದಳು..
               ಸನಂದನರು ಬೇಗ  ಬಂದು ಗುರುಗಳಿಗೆ ನಮಸ್ಕರಿಸಿ ನಿಲ್ಲಲು,   ಶಂಕರಾಚಾ          
        ರ್ಯರು ಬಹಳ ಸಂತೋಷದಿಂದ ಅವರನ್ನು ಕಟಾಕ್ಸಿಸಿ ಪದ್ಮಪಾದರೆಂದು ಹೆಸರಿಟ್ಟರು.