೨೨ ಕಾದಂಬರಿಸಂಗ್ರಹ ನಾಗಿಯೂ ಪ್ರಕೃತಿಯಾಗಿಯೂ ಇರುವನೆಂದು ನಿಶ್ಚಿತವಾಗಿದೆ; ಉಪಾದಾನೋಪಾ ದೇಯಗಳಿಗೆ ಸಾದೃಶ್ಯವು ಆನಪೇಕ್ಷಿತವಾಗಿರುತ್ತದೆ; ಅಚೇತನವಾದ ಗೋಮಯದಿಂದ ವೃಶ್ಚಿಕವೂ, ಚೇತನನೆಂದು ಪ್ರಸಿದ್ಧನಾದ ಪುರುಷನಿಂದ ಕೇಶನಖಾದಿಗಳೂ ಉಂಟಾದ ಹಾಗೆ ಸಚ್ಚಿದಾನಂದಸ್ವರೂಪನಾದ ಬ್ರಹ್ಮದಿಂದ ದುಃಖಾನೃತಬಹುಳವಾದೀಜಡ ಪ್ರಪಂಚವು ಉಂಟಾಗುವುದೆಂಬುದರಲ್ಲಿ ಕಾರ್ಯಕಾರಣವೈಲಕ್ಷಣ್ಯವು ಬಾಧಕವಲ್ಲವಷ್ಟೆ; ಕಾರಣವಾದ ಮಣ್ಣಿನೊಂದಿಗೆ ಅವಿಭಾಗವಾಗುವಧ್ವಸ್ತ ಘಟಾದಿಗಳು ಸ್ವೋಪಾದಾನ ವಾದ ಮಣ್ಣಿಗೆ ದೂಷಕವಲ್ಲದೇ ಅನನ್ಯಗಳಾಗಿರುವಂತೆ ಪ್ರಳಯದಲ್ಲಿ ಪ್ರಪಂಚವು ಬ್ರಹ್ಮಾನನ್ಯವೆಂಬುದಕ್ಕೆ ' ಆತ್ಮೈವೇದಂ, ಬ್ರಹ್ಮೈವೇದಂ,ಯಥಾಮರೀಚ್ಯುದಕೇನ, ಇತ್ಯಾದಿ ಶ್ರುತಿಗಳು ಪ್ರಮಾಣಗಳಾಗಿವೆ; ಅನುಭವದಲ್ಲಿಯೂ, ಸುಪ್ತೋತ್ಥಿತಪ್ರತ್ಯಭಿ ಜ್ಞೆಯೊಳಗೆ ವಿಶ್ವ ಪ್ರಪಂಚವು ಪ್ರಾಜ್ಞನಲ್ಲಿ ಅನನ್ಯವಾಗಿತ್ತೆಂದು ತಿಳಿಯಬರುತ್ತೆ"ಎಂದೀಪ್ರಕಾರವಾಗಿ ಅವರನ್ನು ಶ್ರುತ್ಯುಕ್ತಪ್ರಮಾಣಗಳಿಂದೊಡಂಬಡಿಸಿ, ಅದ್ವೈ ತಸ್ಥಾ ಪನೆಯಂ ಗೈದು ವಾದಕ್ಕೆ ಬಂದ ಭೇದವಾದಿಗಳನ್ನೂ ಬೌದ್ಧಾದಿಗಳನ್ನೂ ಆಚಾರ್ಯ ರು ಸೋಲಿಸಿದರು. ಹೀಗೆ ವೇದಾಂತವೆಂಬ ಕಾಡಿನಲ್ಲಿ ಕೃತಪ್ರಚಾರಕರಾದ ಶಂಕರರು ಸದ್ಯುಕ್ತಿಗಳೆಂಬ ತೀಕ್ಷ್ಣಗಳಾದ ನಖಗಳಿಂದ ಕೂಡಿದವರಾಗಿ ವಾದಿಗಳೆಂಬ ಆನೆಗಳ ಎದುರಿಗೆ ಸಿಹ್ಮದಂತೆ ಪ್ರಕಾಶಿಸಿದರು. ಯತಿಯೆಂಬ ಸಮುದ್ರದಲ್ಲಿ ಹುಟ್ಟಿದ ಭಾಷ್ಯವೆಂಬ ಚಂದ್ರನು ವಿಬುಧ (ದೇವತೆಗಳು ಮತ್ತು ವಿದ್ವಾಂಸರುಗಳು) ರಿಗೆ ಅಮೃತ (ಅಮೃತ ಮತ್ತು ಮೋಕ್ಷ) ವನ್ನು ಕೊಟ್ಟು ವಾಗ್ಣಕ್ಷಣಗಳೆಂಬ ಕಿರಣಗಳಿಂದ ಕುಮತಗಳೆಂಬ ಅಂಧಕಾರಗಳನ್ನು ತೊಲಗಿಸಿ ಬ್ರಾಹ್ಮಣರ ಮನಸ್ಸೆಂಬ ಚಕೋರಗಳನ್ನು ಸಂತೋಷಪಡಿಸಿದನು; ಮತ್ತು, ವಿಷ್ಣುವಿನ ಪಾದದಿಂದ ಗಂಗೆಯು ಅವತರಿಸಿದಳು; ಶಂಕರನ ಮುಖದಿಂದ ಭಾಷ್ಯವೆಂಬ ಸೂಕ್ತಿಯು ಹೊರಟಿತು; ಗಂಗೆಯು ತನ್ನಲ್ಲಿ ಮುಳಿಗಿದವರನ್ನು ದ್ದರಿಸುತ್ತದೆ; ಶಂಕರಭಾ ಷ್ಯವು ಸಂಸಾರಸಾಗರದಲ್ಲಿ ಮುಳಿಗಿಹೋಗಿದ್ದವರನ್ನೂ ಉದ್ಧರಿಸುತ್ತದೆ. ಹೀಗೆ ಮಹಾಮಹಿಮೆಯುಳ್ಳ ಶಂಕರಭಾಷ್ಯಾಮೃತವು ಶಿಷ್ಯವರ್ಗದಮೇಲೆ ಸಿಂಚಿಸಲ್ಪಟ್ಟು ಅವರನ್ನು ಜ್ಞಾನಮಾರ್ಗಗಾಮಿಗಳನ್ನಾಗಿ ಮಾಡುತ್ತಾ ಮೋಕ್ಷದಾ ಯಕವಾಗಿ ಪ್ರಕಾಶಿಸುತ್ತಿದ್ದಿತು.
ಪುಟ:ನನ್ನ ಸಂಸಾರ.djvu/೧೬೦
ಈ ಪುಟವನ್ನು ಪರಿಶೀಲಿಸಲಾಗಿದೆ