ಈ ಪುಟವನ್ನು ಪರಿಶೀಲಿಸಲಾಗಿದೆ

೩೦ ಕಾದಂಬರೀಸಂಗ್ರಹ

  ವಪನಂಸಶಿಖಂಕೃತ್ವಾತ್ಯಜೇತ್ಸೂತ್ರಂ ಬಹಿಧೈ೯ತಮ್ || ಬ್ರಹ್ಮೈವಸೂತ್ರಮಿ ತ್ಯುಕ್ತಂತಾದೃಕ್ಸೂತ್ರಂವಹೇದ್ಬುಧಃ | ಬಹಿನ್ಸೂತ್ರಂತ್ಯಜೇದ್ಯೋಗೀವಜೇನುಕ್ತ್ಮಿ ಪದೇ ಸ್ಥಿತಃ, (ಜ್ಞಾನಿಯು ಶಿಖೆಯನ್ನೂ , ಹೊರಗೆಧರಿಸಿರುವ ಸೂತ್ರವನ್ನೂ ಬಿಟ್ಟು 'ಬ್ರಹ್ಮ' ಎಂಬ ಸೂತ್ರವನ್ನು ಧರಿಸತಕ್ಕದ್ದು; ಜೀವನ್ಮುಕ್ತಿಕಾಮನು ಹೊರಗಿನ ಯಜ್ಙೋಪ ವೀತವನ್ನು ಪರಿತ್ಯಾಗಮಾಡಬೇಕು) ಎಂಬ ವಚನಗಳಿಂದ ಸೂತ್ರತ್ಯಾಗವು ಹೇಗೆ ದೂಷ್ಯವು?
'ಯೆಚಸಂತಾನಜಾದೋಪಾಃ ಯೇಚಸ್ಯುಃಕರ್ಮಸಂಭವಾಃ | ಸನ್ಯಾಸಸ್ತಾ೯ದ ಹೇತ್ಸರ್ವಾ೯..... || ಮತ್ತು ಚತ್ವಾರೋಬ್ರಾಹ್ಮಣಸ್ಪೋಕ್ತಾಃ ಆಶ್ರಮಾಃಶ್ರು ತಿಚೋದಿತಾಃ | ಕ್ಷತ್ರಿಯಸ್ಯತ್ರಯಃಪ್ರೋಕ್ತಾಃದ್ವಾವೇಕೋವೈಶ್ಯಶೂದ್ರಯೋಃ ||' (ಸಂತಾನಜಗಳಾದ ದೋಷಗಳೂ, ಕರ್ಮಜಗಳಾದ ದೋಷಗಳೂ ಸನ್ಯಾಸದಿಂದ ನಶಿಸಲ್ಪಡುತ್ತವೆ; ಮತ್ತು ಬ್ರಾಹ್ಮಣನಿಗೆ ನಾಲ್ಕು ಆಶ್ರಮಗಳಲ್ಲಿಯೂ ಅಧಿಕಾರವಿರು ವುದರಿಂದ ಸನ್ಯಾಸ ಸ್ವೀಕಾರದಿಂದ ಬ್ರಾಹ್ಮಣ್ಯಹಾನಿಯು ಹೇಗೆ ?) ಎಂಬ ಪ್ರಮಾಣ ದಿಂದ ಸನ್ಯಾಸವು ನಿಷಿದ್ಧವಲ್ಲವಷ್ಟೆ !
 'ಅಕ್ಷರಂಪರಮಂಬ್ರಹ್ಮಸದಾಧ್ಯಾರ್ಯ ಜಿತೇಂದ್ರಿಯಃ | ಶಿಖಾಂಯಬ್ಞೊಪವೀ ಶಂಚನಿತ್ಯಕರ್ಮಪರಿತ್ಯಬೇತ್‌' (ಉತ್ಕೃಷ್ಟವೂ, ನಾಶರಹಿತವೂ ಆದ ಬ್ರಹ್ಮಸ್ವರೂಪವನ್ನು ಧ್ಯಾನಿಸುತ್ತಾ ಜಿತೇಂದ್ರಿಯನಾದವನು, ಶಿಖಾಯಜ್ಞೋಪವೀತ ಮತ್ತು ನಿತ್ಯಕರ್ಮ ಗಳನ್ನು ಪರಿತ್ಯಜಿಸಬೇಕು) ಎಂಬ ವಚನದಿಂದ, ಮೋಕ್ಷಾರ್ಥಿಯಾಗಿ ಕರ್ಮಬಿಟ್ಟವ ನಿಗೆ ನರಕಬಾಧೆಯು ಹೇಗೆ ? ಮತ್ತು ಇವನಿಗೆ ಸ್ವರ್ಗಕ್ಕಿಂತ ಅಧಿಕವಾದ ಮೋಕ್ಷ ಪ್ರಾಪ್ತವಾಗಿರುವಾಗ ಸ್ವರ್ಗಾದಿಗಳಿಂದ ಪ್ರಯೋಜನವೇನು ? ಎಂದು ಹೇಳಲು, ಮಂಡನಮಿಶ್ರರು ಪ್ರತ್ಯುತ್ತರ ಕೊಡಲು ಅಸಮರ್ಥರಾದ್ದನ್ನು ಕಂಡು, ಶಂಕರರು ಮೂಢನೇ ! ಪೂರ್ವದಲ್ಲಿ ನೀನು ಏನು ಪ್ರಲಾಪಿಸಿದೆ ? ಅಚೇತನವಾದ ಕರ್ಮವು ಹೇಗೆ ಮೋಕ್ಷಪ್ರದವು ? ಆ ಮೋಕ್ಷವನ್ನು ಕೊಡತಕ್ಕದ್ದು ಶ್ರುತಿಸಮ್ಮತವಾದ ಬ್ರಹ್ಮನಲ್ಲವೇ ? ಮತ್ತು ಉತ್ತಮವಾದ ಸನ್ಯಾಸಾಶ್ರಮವನ್ನು ದೂಷಿಸಿದವನು ಅವನಿಗಿಂತಲೂ ದೂಷ್ಯನಲ್ಲವೆ? ಎಂದು ಕೋಪದಿಂದ ಹೇಳಿದರು. "

ಆಗ ಮಧ್ಯಸ್ಥಳಾಗಿದ್ದ ಶಾರದೆಯು ಜಾಗ್ರತೆ ಎದ್ದು, ಪ್ರತಿನಿತ್ಯವೂ, ಯತಿಗಳಾದ ಶಂಕರರನ್ನು ಮಾತ್ರ ಭಿಕ್ಷಕ್ಕೆ ಕರೆಯುತ್ತಿದ್ದಂತೆ ಆ ದಿನ ಪತಿಯತಿಗಳೀರ್ವ