ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ಕಾದಂಬರೀಸಂಗ್ರಹ ಯಾರು ? ಯಾರಮಗನು ? ನಿನ್ನ ಹೆಸರೇನು ? ನಿನ್ನ ಜಾತಿ ಕುಲ ಗೋತ್ರಗಳಾವವು ಯಾಕೆ ಜಡನಂತಿರುವಿ ?” ಎಂದು ಆ ಬಾಲಕನನ್ನು ಕೇಳಿದರು. ಅದಕ್ಕೆ ಆ ಬಾಲನು " ಸ್ವಾಮಿ ! ನಾನು ಮನುಷ್ಯನಲ್ಲ; ದೇವ, ಯಕ್ಷಬ್ರಾ ಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಲ್ಲಿ ಒಬ್ಬನೂ ಅಲ್ಲ. ಬ್ರಹ್ಮಚಾರೀ, ಗೃಹಸ್ಥನೂ ವಾನಪ್ರಸ್ಥನೂ, ಸನ್ಯಾಸಿಯೂ ಅಲ್ಲ ಅಹಂಬ್ರಹ್ಮಾಸ್ಮಿ' ಎಂಬ ಅದ್ವೈ ತತತ್ತ್ವವೆ ನಾನು ” ಎಂದನು. ಅವನ ಉತ್ತರವನ್ನು ಕೇಳಿ ಆಚಾರ್ಯರು ಸಂತೋಷಪಟ್ಟು ‘ನಿನ್ನ ಮಗನ ಸನ್ಯಾಸಕ್ಕೆ ಅರ್ಹನು ' ಎಂದು ಅವನ ತಂದೆಗೆ ಹೇಳಿ ಅವನಿಗೆ ಸನ್ಯಾಸವಂ ಕೊಟ್ಟು ಅದ್ವೈತತತ್ತ್ವವನ್ನು ಕರದಲ್ಲಿರುವ ಆ ಮಲಕ (ನೆಲ್ಲಿ ಕಾಯಿ) ದಂತೆ ತೋರಿಸಿದ್ದರಿಂ! ಅವನಿಗೆ ಹಸ್ತಾಮಲಕ ' ನೆಂಬ ನಾಮಧೇಯವನ್ನಿಟ್ಟು ಭಾಷ್ಯೋಪದೇಶವಂ ಮಾಡುತ್ತಿದ್ದರು. ಹೀಗಿರಲು ಒಂದುದಿನ, ವಿಶ್ವನಾಥಾದ್ವರಿಯ ಪುತ್ರನಾದ ಕಳಾನಾಥನ ಬಂದು ಆಚಾರ್ಯರನ್ನು -

  • " ವಿದಿತಾಖಿಲಶಾಸ್ತ್ರಸುಧಾಜಲಧೇ

ಮಹತೋಪನಿಷತ್ಕಥಿತಾರ್ಥನಿಧೇ | ಹೃದಯೇ ಕಲಯೇ ವಿಮಲಂ ಚರಣಮ್ ಭವ ಶಂಕರದೇಶಿಕ ಮೇ ಶರಣಮ್ || ೧ || ಕರುಣಾವರುಣಾಲಯ ಪಾಲಯ ಮಾಮ್ ಭವಸಾಗರದುಃಖವಿದೂನಹೃದಮ್ | ರಹಿತಾಖಿಲದರ್ಶನತತ್ತ್ವವಿದಮ್ ಭವ ಶಂಕರದೇಶಿಕ ಮೇ ಶರಣಮ್ || ೨ || ಭವತಾ ಜನತಾ ಸುಹಿತಾ ಭವಿತಾ ನಿಜಬೋಧವಿಚಾರಣಚಾರುಮತೇ | ಕಲಯೇಶ್ವರಜೀವವಿವೇಕವಿದಮ್ ಭವ ಶಂಕರದೇಶಿಕ ಮೇ ಶರಣಮ್ ||೩|| * ಸದ್ಗುರು ಭಕ್ತರು ಈ ಸ್ತೋತ್ರವನ್ನು ನಿತ್ಯ ಪಾರಾಯಣದಲ್ಲಿಡುವುದು ಶ್ರೇಯಸ್ಕರವು.