ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಶಂಕರಕಥಾಸಾರ. ೫೩ ನಾದ ಸೂರ್ಯನನ್ನು ನೋಡಬೇಕು ; ಅಥವಾ ಮಡುವಿಗೆ ಬೀಳಬೇಕು ; ಸಮಸ್ತ ಪ್ರಾಣಿಗಳಲ್ಲಿಯೂ ಅಶರೀರನಾಗಿಯೂ, ಅವಸ್ಥಾರಹಿಗಳಾದ ಸ್ಥಾವರಪದಾರ್ಥಗಳಲ್ಲಿಯೂ, ಇರತಕ್ಕ ಮಹತ್ತಾದ ನಿತ್ಯವಾದ ಬ್ರಹ್ಮವಸ್ತುವನ್ನು ತಿಳಿದ ಮನುಷ್ಯನು ದುಃಖಿಸಲಾರನು. ಆದ್ದರಿಂದ ಪರಮಾತ್ಮ ವಿದ್ಯೆಯಲ್ಲಿ ಪಂಡಿತನಾದ ಗುರುವನ್ನು ಹೊಂದಿ, ಆ ಗುರುವಿನ ಕೃಪಾಕಟಾಕ್ಷದಿಂದ ಭೇದವಿಲ್ಲದವಾದವೆಂಬ ಅಮೃತವಂ ಕುಡಿದು ತೃಪ್ತರಾಗಿ” ಎಂದುಪದೇಶಿಸಲು, ಅವರೆಲ್ಲಾ ಆಚಾರ್ಯರನ್ನು ಪೂಜಿಸಿ, ಅವರ ಪಾದೋದಕವನ್ನು ಸೇವಿಸಿ, ಅಮಂದುಪದಿಷ್ಟವಾದ ಆಚಾರಾನುಯಾಯಿಗಳಾಗಿ ಅದ್ವೈತಿಗಳಾದರು.

          ಲಿಂಗಧಾರಿಮತ ಭಂಜನವು. 

ಅನಂತರ ಲಿಂಗಚಿಹ್ನಿತರೂ, ವಿಭೂತಿರುದ್ರಾಕ್ಷಿಧಾರಿಗಳೂ ಆದ ಕೆಲವರು ಬಂದು "ಮಾಯಾವೇಷಧಾರಿಯಾದ ನೀನು ಯಾರು ? ಪ್ರಾಮಾಣ್ಯದೊಡನೆ ಈ ಮತವನ್ನು ಖಂಡಿಸಿ ಹೊರಡಲುದ್ಯುಕ್ತನಾಗಿರುವ ನೀನು ವಂಚಕನೇ ಸರಿ ; ಬ್ರಾಹ್ಮಣ್ಯಕ್ಕಿಂತಲೂ ವೈಷ್ಣವ್ಯವು ಶ್ರೇಷ್ಠವು ; ವೈಷ್ಣವ್ಯಕ್ಕಿಂತ ಶೈವವು ಶ್ರೇಷ್ಠವು ' ಎಂದು ಬ್ರಹ್ಮನು ನಾರದರಿಗೆ ಹೇಳಿದ್ದಾನೆ; ಆದ್ದರಿಂದ ಅರೂಢಪತನವು ನಿನ್ನಿಂದ ಏಕೆ ಮಾಡಲ್ಪಟ್ಟಿತು ? : ನಮಸ್ತೇ' ಎಂಬ ವೇದವಾಕ್ಯದಿಂದ ಮಹೇಶ್ವರನು ಸ್ತುತ್ಯನೇಸರಿ ; ಸರ್ವಾನನ ಶಿರೋಗ್ರೀವಃ ಸರ್ವಭೂತಗುಹಾಶಯಃ | ಸರ್ವವ್ಯಾಪೀಸ ಭಗವಾಂಸ್ತ ಸ್ಮಾತ್ಸರ್ವಗತಶ್ಶಿವಃ ' ಎಂದು ಶ್ವೇತಾಶ್ವತರೋಪನಿಷತ್ತಿನಲ್ಲಿದೆ. ಮಹೇಶ್ವರನ ತೇಜಸ್ಸಿನಿಂದ ಹರಿ, ಬ್ರಹ್ಮಾ ಮೊದಲಾದವರು ಉತ್ಪನ್ನರಾಗುತ್ತಾರೆ ; : ಆ ಈಶ್ವರನು ಧ್ಯಯನು' ಎಂಬ ವಿಷಯದಲ್ಲಿ ನಿನಗೆ ಋಷಿಗಣವೂ ; ಜ್ಞಾನಪ್ರದನು' ಎಂಬ ವಿಷಯದಲ್ಲಿ ಶುಕಋಷಿಯೂ ; ' ಸಕಲರಿಂದಲೂ ವೇದ್ಯನು' ಎಂಬ ವಿಷಯದಲ್ಲಿ ವೇದಗಳೂ, ' ತನ್ನ ಭಕ್ತರ ಶತ್ರುಗಳನಾಶಕರು ' ಎಂಬಲ್ಲಿ ಕೃತಾಂತಾದಿಗಳೂ, ' ನಿತ್ಯನು' ಎಂಬ ವಿಷಯದಲ್ಲಿ, ಬ್ರಹ್ಮನ ತಲೆಯನ್ನು ಮಾಲೆಯಂತೆ ಧುಸಿರೋಣರೂ, 'ಶೂನ್ಯನು' ಎಂಬ ವಿಷಯದಲ್ಲಿ

ವರಾಹರೂಪಿಯಾದ ವಿಷ್ಣುವೂ, ಹಂಸರೂಪಿಯಾದ ಬ್ರಹ್ಮನೂ ಸಾಕ್ಷಿಗಳು ; ಇತ್ಯಾದಿ ಶ್ರುತಿವಾಕ್ಯಗಳಿಂದ ಈಶ್ವರನಲ್ಲಿ ಜಗತ್ಕಾರಣತ್ವವು ಸಿದ್ಧವಾಗಿದೆ; ಕೋಟಿ ಜನ್ಮಾರ್ಜಿತವಾದ ಪುಣ್ಯದಿಂದ ಶಿವನಲ್ಲಿ ಭಕ್ತಿಯುಂಟಾಗುತ್ತದೆ. ಲಿಂಗದಿಂದ ಅಂಕಿತವಾದ ದೇಹವುಳ್ಳವನಾಗಿ ರುದ್ರಾಕ್ಷಿ ವಿಭೂತಿಗಳಂ ಧರಿಸಿ ರುದ್ರಾ ಧ್ಯಾಯಜಪಮಾಡುವವನು ಸರ್ವ ಪಾಪನಿರ್ಮುಕ್ತನಾಗಿ ಶಿವಲೋಕಕ್ಕೆ ಹೋಗು