12 ಕಾದಂಬರಿ ಸಂಗ್ರಹ
- * * * * * * * * * * * * * * * * * * * * * * *
ಬಹಳವಾಗಿತ್ತು, ಅದನ್ನು ತಾವು ಸಾಫಲ್ಯಗೊಳಿಸಿದಿರಿ, ಇನ್ನು ನಾನು ಕೃತಾರ್ಥನಾದೆನು, ತಾವು ನಾಲ್ಕಾರು ತಿಂಗಳು ಬಿಟ್ಟುಕೊಂಡು ಹುಡುಗಿಯನ್ನು ನಿಮ್ಮ ಮನೆಗೆ ಕರದುಕೊಂಡು ಹೋಗಿ ನಿಮ್ಮ ಮನೆ ಆಚಾರ ವ್ಯವಹಾರ, ಪದ್ಧತಿ, ಮಾನಮರ್ಯಾದೆಗಳನ್ನು ಕಲಿಸಿಕೊಡಿ, ಈ ಹುಡಿಗಿಯನ್ನು ಪ್ರೀತಿಯಿಂದ ಸಾಕಿರುವೆನು, ನನ್ನ ಮಗನು ವಿವೇಕಶಾಲಿಯಾಗಿ ಮಗಳಿಗೆ ಬುದ್ಧಿವಾದ ಹೇಳಿಕೊಡುವಷ್ಟು ಗುಣವಂತನಲ್ಲ, ನೀವು ನಮ್ಮನ್ನು ಮುಂದೆ ಯಾವ ವಿಧದಲ್ಲಿಯೂ ಆಕ್ಷೇಪಣೆ ಮಾಡದಿರಬೇಕಾದರೆ ನಿಮ್ಮ ಮನೆಯಲ್ಲಿಟ್ಟು ಕೊಂಡು ನಿಮ್ಮ ಮನೆಸಂಪ್ರದಾಯಗಳನ್ನು ಹೇಳಿಕೊಡಬೇಕು.” ಎಂದು ಹೇಳಿ ಅವರನ್ನು ಪ್ರಯಾಣಮಾಡಿಸಿ ಕಳುಹಿಸಿಕೊಟ್ಟನು. ನನಗೆ ಮದುವೆಯಾದ ಆರುತಿಂಗಳಿಗೆ ನಮ್ಮ ತಾತನು ಇಹಲೋಕವನ್ನು ತ್ಯಜಿಸಿ ಪರಲೋಕಕ್ಕೆ ಪ್ರಯಾಣಮಾಡಿದನು, ನನ್ನ ತಂದೆಯು ತಾತನ ಉತ್ತರಕ್ರಿಯೆ ಗಳನ್ನು ಮಾಡುವುದಕ್ಕಾಗಿ ಇನ್ನೂರು ರೂಪಾಯಿ ಸಾಲಮಾಡಬೇಕಾಯಿತು, ಎಲ್ಲಾ ಮುಗಿದಮೇಲೆ ನನ್ನನ್ನು ನಮ್ಮ ತಂದೆಯು ಕೆಲವು ದಿನಗಳ ಮಟ್ಟಿಗೆ ಪತಿಗೃಹಕ್ಕೆ ಕಳುಹಿಸಿಕೊಟ್ಟರು. ನಾನಿನ್ನೂ ಅರಿಯದ ಹುಡುಗಿ ಪರಗೃಹದಲ್ಲಿದ್ದವಳಲ್ಲ. ಮೊದಮೊದಲು ನನಗೆ ಪತಿಗೃಹಕ್ಕೆ ಬಂದಾಗ ಏನೋ ಒಂದು ವಿಧವಾಗಿ ಕಣ್ಣು ಕಟ್ಟಿದಂತಾಗಿತ್ತು. ತಂದೆ ತಾಯಿಗಳನ್ನು ನಾನೆಂದೂ ಬಿಟ್ಟಿದ್ದವಳಲ್ಲ, ಅದಲ್ಲದೆ ನಾನು ಪತಿಗೃಹಕ್ಕೆ ಬಂದಮೇಲೆ ಅಲ್ಲಿನ ನಡವಳಿಕೆ ಆಚಾರ, ಸಂಪ್ರದಾಯಗಳನ್ನು ನಮ್ಮ ಅತ್ತೆಯೂ ನಮ್ಮ ಅಕ್ಕನೂ(ಓರಗಿತ್ತಿ) ನನಗೆ ಬೋಧಿಸುತ್ತಿದ್ದರು. ನಮ್ಮ ಬ್ರಾಹ್ಮಣವೃಂದದಲ್ಲಿ ಹೆಂಡತಿ ದೊಡ್ಡವಳಾಗಿ ಗಂಡನ ಮನೆಗೆ ಹೋಗುವ ವರೆವಿಗೂ ಗಂಡಹೆಂಡರು ಮಾತನಾಡುವುದೆಂದರೆ ಬಲು ಸಂಕೋಚವೂ ಅಪಹಾಸ್ಯವೂ ವಾಮಾನಿಕೆಯೂ ಆದ ಪದ್ಧತಿಯಂತೆ, ಈ ಪದ್ಧತಿಯು ಪೂರ್ವಕಾಲದಲ್ಲಿ ವಿಶೇಷವಾಗಿ ಆಚರಣೆಯಲ್ಲಿದ್ದಿತು. ಆಗಣಕಾಲದಲ್ಲಿ ಒಂದೆರಡು ಮಕ್ಕಳಾದ ಮೇಲೂ ಹೆಂಡತಿಯಾದವಳು ಗಂಡನೊಡನೆ ಧೈರ್ಯದಿಂದ ಬಹಿರಂಗದಲ್ಲಿ ಮಾತನಾಡುವುದಕ್ಕೆ ಹೆದರಿಕೊಳ್ಳುತ್ತಿದ್ದಳು, ಅದರಲ್ಲೂ ಅತ್ತೆ, ಮಾವ, ಭಾವ, ಅತ್ತಿಗೆ, ನಾದಿನಿ ಯೆದಿರಿಗೆ, ಗಂಡನ ಸಂಗಡ ಮಾತಾಡುವುದೆಂದರೆ ಬಹುಕಷ್ಟ ತರವಾದ ಸಂಗತಿಯೇ ಸರಿ. ಒಂದುವೇಳೆ ಪ್ರತ್ಯಕ್ಷವಾಗಿ ಮಾತನಾಡಿಬಿಟ್ಟಳೆಂದರೆ, ಆ ವಿಚಾರವು ಮಾರನೆಯದಿನವೇ ಊರಲ್ಲೆಲ್ಲಾ ಹರಡಿ ಹೋಗುತ್ತಿದ್ದುದಲ್ಲದೆ, ಅಂತಹವಳಿಗೆ ಗಂಡುಬೀರಿಯೆಂಬ ಬಿರಿದು ಸಹ ಬಂದು ಬಿಡುತ್ತಿದ್ದಿತು.