ಈ ಪುಟವನ್ನು ಪರಿಶೀಲಿಸಲಾಗಿದೆ
ಕರ್ನಾಟಕ ಸಾಹಿತ್ಯ ಪರಿಷತ್ತು 5
ಹೆಚ್ಚಾಗಿ ತನ್ಮೂಲಕ ಪರಿಷತ್ತು ಏನಾದರೂ ಅನಿಷ್ಟ ಮಾರ್ಗ (ಉದಾಹರಣೆಯಾಗಿ, ರಾಜಕೀಯ ಅಥವಾ ಸಾಮಾಜಿಕ ಕಲಹ) ದಲ್ಲಿ ಪ್ರವರ್ತಿಸಬಹುದೆಂಬ ಒಂದು ಭಯವು ಕೆಲವರ ಮನಸ್ಸನ್ನು ಬಾಧಿಸುತ್ತಿದ್ದರೂ ಇರಬಹುದು. ಪರಂತು ಕೇವಲ ಸಾಹಿತ್ಯವರ್ಧನಕ್ಕಾಗಿಯೇ ಹುಟ್ಟಿರುವ ಪರಿಷತ್ತಿನಲ್ಲಿ ಬಹುಶಃ ಇಂಥ ಭಯಕ್ಕೆ ಅವ ಕಾಶವೇ ಇರಲಾರದು. ಒಂದು ವೇಳೆಗೆ ಇದೆಯೆಂದು ಯಾರಾದರೂ ವಾದಿಸುವು ದಾದರೆ ಅದನ್ನು ಪರಿಹರಿಸುವುದಕ್ಕಾಗಿ ೧ ನೇ ನಿಬಂಧನೆಗೆ 'ಪರಿಷತ್ತಿಗೆ ರಾಜಕೀಯ ಮತ್ತು ಮತ ವಿಷಯಗಳಲ್ಲಿ ಯಾವ ಸಂಬಂಧವೂ ಇರಲಾಗದು (It shall be non-political and non-Sectarian in character)' ಎಂಬ ಮಾತುಗ ಳನ್ನು ಸೇರಿಸಬಹುದು. ಹಾಗೆಯೇ ಕಾರ್ಯನಿರ್ವಾಹಕ ಮಂಡಲದಲ್ಲಿ ಆ ವರ್ಗದ ಪ್ರತಿ ನಿಧಿಗಳ ಸಂಖ್ಯೆಯನ್ನು ಇಷ್ಟೆಂದು ಕ್ಲಪ್ತಡಿಸಿ, ಸಮ್ಮೇಳನದ ಮುಂದೆ ಬರತಕ್ಕ ಯಾ ವತ್ತು ನಿರ್ಣಯಗಳು ಮೊದಲು ಕಾರ್‍ಯನಿರ್ವಾಹಕ ಮಂಡಲದಲ್ಲಿ ಅಂಗೀಕರಿಸಲ್ಪಡತ ಕ್ಕುದು' ಎಂಬುದಾಗಿ ಸಿಬಂಧಿಸಬಹುದು. ಹೀಗೆ ಮಾಡಿದರೆ ತರುವಾಯ ಯಾವ ಭಯಕ್ಕೂ ಅವಕಾಶವಿರುವುದಿಲ್ಲ. ಆದರೆ ಆ ವರ್ಗದ ಸದಸ್ಯರಿಗೆ ಶದ್ಧಂಗವಾಗಿ ಮತಾಧಿಕಾರವಿರಹಿತರನ್ನಾಗಿ ಮಾಡುವುದು ಮಾತ್ರ ಮಹತ್ತರವಾದ ದೋಷವೆಂದು ನನಗೆ ತೋರುತ್ತಿದೆ. ೬ ನೇ ನಿಬಂಧನೆಯಲ್ಲಿ ೨ ನೇ ವರ್ಗದ ಸಭ್ಯರಿಗೆ ಪರಿಷತ್ಪ ತ್ರಿಕೆಯು ಉಚಿತ ವಾಗಿ ದೊರೆಯತಕ್ಕುದೆಂದು ಹೇಳಿರುವುದು. ೫ ನೇ ನಿಬಂಧನೆಯಲ್ಲಿ ೨ ನೇ ವರ್ಗದ ವರ ವಿನಾ ಉಳಿದವರಿಗೆ ಮಾತ್ರ ದೊರೆಯತಕ್ಕುದೆಂದು ಹೇಳಿದೆ ; ಹೀಗೆ ಇವೆರಡೂ ಒಂದಕ್ಕೊಂದು ವಿರುದ್ಧಗಳಾಗಿವೆ. ಇದನ್ನು ಸರಿಪಡಿಸಿಕೊಳ್ಳುವುದು ಅಗತ್ಯವು. ಇನ್ನು ಪುಷತ್ಪತ್ರಿಕೆಯ ವಿಷಯವನ್ನು ತಿದ್ದಿಕೊಂಡ ಬಳಿಕ ೫ ನೇ ನಿಬಂಧನೆಯಲ್ಲಿ ಹೇಳಿದುದೇ ೬ ನೆಯದರಲ್ಲಿಯೂ ಬರುವುದರಿಂದ ಪುನರುಕ್ತಿ ದೋಷವನ್ನು ಹೋಗಗೊಳಿಸುವುದಕ್ಕಾಗಿ ಇವುಗಳೊಳಗೆ ಒಂದನ್ನು ಬಿಟ್ಟು ಬಿಡಬೇಕಾಗುವುದು. ೭ ನೇ, ೮ ನೇ ಮತ್ತು ೯ ನೆಯ ನಿಬಂಧನೆಗಳಲ್ಲಿ ಕಾರ್‍ಯನಿರ್ವಾಹಕಮಂಡ ಲಿಯವರು ಪರಿಷತ್ತಿನ ಆಡಳಿತ ನಡೆಯಿಸತಕ್ಕು ದೆಂದೂ ಆ ಮಂಡಲದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್‍ಯದರ್ಶಿ ಮತ್ತು ಕೋಶಾಧ್ಯಕ್ಷರ ವಿನಾ ೩೦ ಮಂದಿ (ಒಟ್ಟು ೩೪) ಸದಸ್ಯರಿರ ಬೇಕೆಂದೂ ಅವರನ್ನು ಆರಿಸುವ ಕ್ರಮವು ಯಾವುದೆಂದೂ ಹೇಳಿದೆ. ಇದರಲ್ಲಿ ನಾನು ಸೂಚಿಸತಕ್ಕ ತಿದ್ದು ಪಡೆಗಳು ಹಲವಿವೆ:-