ಈ ಪುಟವನ್ನು ಪರಿಶೀಲಿಸಲಾಗಿದೆ

10 ಕಾದಂಬರೀಸಂಗ್ರಹ ರಿಗೆ ಕಳುಹಿಸಿ ಬೇರೆ ಏನಾದರೂ ತಿದ್ದುಪಡಿಯ (Amendments) ಸೂಚನೆಗಳಿದ್ದರೆ ಅವನ್ನು ೨ ವಾರಗಳಿಗೆ ಮುಂಚೆ ಬರಮಾಡಿಕೊಂಡು, ಕೊನೆಯ ಕಾರ್‍ಯಕ್ರಮ ಪತ್ರಿಕೆ (Agenda paper) ಯನ್ನು ಒಂದು ವಾರಕ್ಕೆ ಮುಂಚಿತವಾಗಿ ಪ್ರಕಟಪಡಿಸಿದರೆ ಸರ್ವರಿಗೂ ತುಂಬ ಅನುಕೂಲವಾಗಬಹುದೆಂದು ನೆನಸುವೆನು.

೩೧ ನೇ ನಿರ್ಣಯದಿಂದ : ತಮ್ಮ ಅಭಿಮತವನ್ನು ಸೂಚಿಸುವ ಹಕ್ಕುಳ್ಳ' (Entitled to vote for it) ಎಂಬ ಶಬ್ದಗಳನ್ನು ತೆಗೆದುಹಾಕತಕ್ಕದ್ದು, ಇದು ೫ ನೇ ನಿಬಂಧನೆಯಲ್ಲಿ ಮಾಡುವ ತಿದ್ದುಪಡಿಗೆ ಅನುಗುಣವಾಗಿ ಆಗತಕ್ಕುದಾಗಿದೆ.

ಹೀಗೆ ಪ್ರಕೃತದ ನಿಬಂಧನೆಗಳಲ್ಲಿ ಆಗಬೇಕೆಂದು ನನಗೆ ತೋರಿದ ಕೆಲಕೆಲವು ತಿದ್ದುಪಡಿಗಳನ್ನು ಸೂಚಿಸಿದಂತಾಯಿತು. ಈಗಳಿನ್ನು ಅವುಗಳಲ್ಲಿ ಕಂಡು ಬಾರದಿರು ವುವುಗಳಾಗಿಯೂ ನೂತನವಾಗಿ ಏರ್ಪಡಿಸಲು ತಕ್ಕುದಾಗಿಯೂ ಇರುವ ಕೆಲವು ಸೂಚನೆಗಳನ್ನು ಇದರಡಿ ಕೊಡುವೆನು :-

(a). ಮೈಸೂರು ಸರ್ಕಾರದ ಸಂಪದಭ್ಯುದಯ ಸಮಾಜದವರ ಪ್ರೋತ್ಸಾ ಹವೇ ನಮ್ಮ ಪರಿಷತ್ತಿನ ಜನನಕ್ಕೆ ಹೇತುವಾಗಿರುವುದಷ್ಟೆ ! ಆದುದರಿಂದ ಈ ಸಂಗ ತಿಯು ನಿರಂತರವಾಗಿ ನಮ್ಮ ನೆನಪಿನಲ್ಲಿ ನಿಲ್ಲುವಂತೆ ಆ ಸರ್ಕಾರವನ್ನೇ ಆಗಲೀ ಸಮಾ ಜವನ್ನೇ ಆಗಲಿ ನಮ್ಮ ಪರಿಷತ್ತಿನ ಪ್ರತಿಷ್ಠಾಪಕರೆಂದು ಕಾಣಿಸುವುದು ನಮ್ಮ ಕರ್ತ ವ್ಯವಾಗಿದೆಯೆಂದು ನಾನು ಭಾವಿಸುವೆನು. ಆಂಧ್ರಸಾಹಿತ್ಯಪರಿಷತ್ತಿನವರು, ಉದಾರ ವಾಗಿ ಧನಸಹಾಯಮಾಡಿ ಆ ಪರಿಷತ್ತಿನ ಸ್ಥಾಪನೆಗೆ ಕಾರಣಭೂತರಾದ ಪಿಠಾವು ರದ ಮತ್ತು ವೇಂಕಟಗಿರಿಯ ರಾಜರುಗಳನ್ನು ತಮ್ಮ ಪ್ರತಿಷ್ಠಾಪಕರೆಂದು ಏರ್ಪಡಿ ಸಿರುವಠು.

(b). ಒಂದು ದೇಶದ ಸಾಹಿತ್ಯ ಅಥವಾ ವೈಜ್ಞಾನಿಕ ಪರಿಷತ್ತುಗಳ ಸದಸ್ಯ ರುಗಳು, ಬೇರೆಬೇರೆ ದೇಶಗಳಲ್ಲಿ ಅದೇ ವಿಷಯವಾದ ಪರಿಷತ್ತುಗಳ ಸದಸ್ಯರಾಗಿದ್ದು ಗಣ್ಯರಾಗಿರುವ ಕೆಲಕೆಲವು ದೊಡ್ಡ ಮನುಷ್ಯರನ್ನು 'Corresponding members ಎಂಬದಾಗಿ ಗೌರವಿಸುವ ಪದ್ಧತಿಯು ಪಾಶ್ಚಿಮಾತ್ಯರಾಜ್ಯಗಳಲ್ಲಿರುವುದು, ಇದರ ಮೂಲಕವಾಗಿ ಒಂದು ದೇಶದ ಪರಿಷತ್ತಿನವರು ಮಾಡಿದ ಅಭಿವೃದ್ಧಿಯು ಉಳಿದ ದೇಶದವರಿಗೆ ಅಂಥಾ ಸದಸ್ಯರ ಮೂಲವಾಗಿ ತಿಳಿಯುವುದಕ್ಕೆ ಅವಕಾಶವಾಗುವುದು. ವಿಶೇಷವಾಗಿ, Corresponding members ಆಗಿರುವವರಿಗೆ ಆ ಗೌರವವು ಯಾವ ದೇಶದವರಿಂದ ಪ್ರಾಪ್ತವಾಗಿರುವುದೋ ಆ ದೇಶದ ಭಾಷೆ ತಿಳಿಯದೆ ಇರುವು