16 ಕಾದಂಬರಿ ಸಂಗ್ರಹ
ಗಳು ಆಗಾಗ್ಗೆ ಕರೆದುಕೊಂಡು ಹೋಗುತ್ತಲೇ ಇರುತ್ತಾರೆ. ಆದರೆ ಇನ್ನೊಂದು ವಿಶೇಷವುಂಟು;-ಯಾರಿಗಾದರೂ ಆಗಲಿ, ತನ್ನ ಮಗಳನ್ನು ಒಬ್ಬನಿಗೆ ಕೊಟ್ಟ ಮೇಲೆ ಮಗಳೂ ಅಳಿಯನೂ ತಮ್ಮ ಮನೆಯಲ್ಲಿಯೇ ಇರಬೇಕೆಂಬ ಆಶೆ ಅವರಿಗೆ ಬಹಳವಾ ಗಿ ಇದ್ದೇ ಇರುತ್ತದೆ. ಮತ್ತು ಇದರಲ್ಲೂ ಧನಿಕರಾದವರಿಗಂತೂ ಈ ವಿಧವಾದ ಆಶೆಯು ಖಂಡಿತವಾಗಿ ಇದ್ದೇ ಇರುತ್ತದೆ. ಈ ಕಾರಣದಿಂದ ಮಗಳ ಮೇಲೆ ತಂದೆತಾ ಯಿಗಳ ಪ್ರೀತಿಯು ಎಷ್ಟಿರಬಹುದೆಂಬುದನ್ನು ನಮ್ಮ ವಾಚಕರು ತಮ್ಮ ತಮ್ಮ ಹೃದ ಯದಲ್ಲಿ ಭಾವಿಸಿಕೊಳ್ಳಲಿ ? ಆದರೇನು ? ಈಶ್ವರನಿಯಾಮಕವನ್ನು ತಪ್ಪಿಸುವದಕ್ಕೆ ಆರಕೈಲೂ ಸಾಗಲಾರದು. ತಂದೆತಾಯಿಗಳಿಗೆ ಮಕ್ಕಳ ಮೇಲೆ ಅದೆಷ್ಟು ಪ್ರೀತಿ ಇದ್ದಾಗ್ಯೂ ಗೃಹಿಣಿಯಾಗಲರ್ಹಳಾದ ಮಗಳನ್ನು ಎಂದಾದರೊಂದುದಿನ ಪತಿಗೃಹಕ್ಕೆ ಕಳುಹಿಸಿಯೇ ಬಿಡಬೇಕಲ್ಲವೆ ? ಚಿಕ್ಕಂದಿನಿಂದ ಸಾಕಿದ ಮಗಳನ್ನು ತಮ್ಮ ಮನೆಯಿಂದ ಶಾಶ್ವತವಾಗಿ ಪತಿಗೃಹವಾಸಕ್ಕೆಂದು ಪ್ರಯಾಣಮಾಡಿ ಕಳುಹಿಸುವ ಸಮಯದಲ್ಲಿ ಮಾತಾಪಿತೃಗಳಿಗೆ ಎಷ್ಟು ವ್ಯಸನವಾಗಬಹುದು ? ಅದರೆ ಅವರು ಆಗಣಸ್ಥಿತಿಯಲ್ಲಿ ವ್ಯಸನಪಡುವುದು ಸರಿಯಾದುದಲ್ಲ. ಮಗಳೂ ಅಳಿಯನೂ ಅನ್ಯೋನ್ಯವಾಗಿ ಸುಖ ದಿಂದಿರಲೆಂದೂ ಸತ್ಸಂತಿಯೂ ಅವರಿಗೆ ಪ್ರಾಪ್ತವಾಗಿ ಆಯುರಾರೋಗ್ಯೈ ಶ್ವರ್ಯಾದಿ ಗಳಿಂದ ಅವರು ಚಿರಕಾಲ ಜೀವಿಸಬೇಕೆಂದೂ ಹರಸಿ ಮಗಳಿಗೆ, ಸತೀಧರ್ಮಗಳನ್ನು ಪ ದೇಶಿಸಿ ಕಳುಹಿಸಿಕೊಡುವುದು ಅವರ ಮುಖ್ಯ ಕರ್ತವ್ಯ. ಆದರೆ ಹೆಣ್ಣುಮಗಳು ಪ್ರಯಾಣಮಾಡಿಕೊಂಡು ಪತಿಗೃಹಕ್ಕೆ ಹೋಗುವಾಗ ತಂದೆತಾಯಿಗಳು ಪಡುವ ವ್ಯಸನವು ಎಂತಹ ವ್ಯಸನವೆಂಬುದನ್ನು ಆಲೋಚಿಸೋಣ. ನಮಗೆ ದುಃಖಕಾಲದಲ್ಲಾ ಗಲೀ ವಿಶೇಷ ಸಂತೋಷಕಾಲದಲ್ಲಾಗಲೀ ಸ್ವಭಾವವಾಗಿ ಕಣ್ಣೀರು ಸುರಿವುದು ಸ್ವಭಾ ವವಷ್ಟೆ. ದುಃಖದಿಂದ ಸುರಿವ ಕಣ್ಣೀರಿಗೆ ಶೋಕಬಾಷ್ಪವೆಂದೂ ಆನಂದದಿಂದ ಸುರಿವ ಕಣ್ಣೀರಿಗೆ ಆನಂದಬಾಷ್ಪವೆಂದೂ ಹೆಸರು ಕೊಡಲ್ಪಟ್ಟಿರುವುದು. ಮಗಳನ್ನು ಕಳುಹಿ ಸುವಾಗ ಸುರಿವ ಕಣ್ಣೀರು ಎರಡು ವಿಧವಾದ ಬಾಷ್ಪಗಳಿಗೂ ಸಂಬಂಧಿಸಲ್ಪಟ್ಟುದು. ಮಗಳನ್ನು ಕಳುಹಿಸಬೇಕಲ್ಲಾ, ಎಂಬ ವ್ಯಸನವೂ; ನನ್ನ ಮಗಳು ಇನ್ನು ಮುಂದೆ ಪತಿಯೊಡನೆ ಸಂಸಾರ ಮಾಡಿಕೊಂಡು ಸುಖಿಸುವಳಲ್ಲಾ ಎಂಬ ಸಂತೋಷವೂ ಮಿಳಿತ ವಾಗುವುದರಿಂದ ಆಗಣಕಾಲದ ಚಿಂತೆಯು ಅಪರಿಮಿತವಾದುದೇಸರಿ.
ನಮ್ಮ ತಂದೆತಾಯಿಗಳು ನನ್ನನ್ನು ಹರಪುರಕ್ಕೆ ಕರೆದುಕೊಂಡು ಬಂದು ಪತಿ ಗೃಹದಲ್ಲಿ ಬಿಟ್ಟು ವಿಹಿತವಾದ ನೀತಿಗಳನ್ನು ಪದೇಶಿಸಿ ರಂಗಪುರಕ್ಕೆ ಪ್ರಯಾಣಮಾಡಿ ದರು. ಇಂದು ನನಗೆ ಬಹು ದುಃಖವಾಯಿತು. ನಮ್ಮ ತಾಯಿತಂದೆಗಳನ್ನು ನಾನೊಂದು