ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೋಹಿಣಿ

ಚಕ್ರವರ್ತಿಯ ಅಪ್ಪಣೆಯಂತೆ ಸೇನಾಧಿಪತಿಯು ನಾಲ್ಕು ಕಡೆಗೂ ತನ್ನ ಸೇವ ಕರನ್ನು ರೋಹಿಣಿಯನ್ನು ಹುಡುಕುವುದಕ್ಕೆ ಅಟ್ಟಿದನು. ಎಷ್ಟು ಹುಡುಕಿದಾಗ್ಯೂ ರೋಹಿಣಿಯ ಮತ್ತು ಕರುಣಾಂಬೆಯರ ಸುಳಿವೇ ಗೊತ್ತಾಗಲಿಲ್ಲ. ಮುಂದೆ ಮಾಢ ತಕ್ಕ ಕೆಲಸದ ಯೋಚನೆಯಲ್ಲಿ ಎಲ್ಲರೂ ಕುಳಿತಿರುವಾಗ ಅಲ್ಲಿಗೆ ಸೇನಾಧಿಪತಿಯು ಬಂದನು. ರಾತ್ರಿಯಲ್ಲಿ ಹೊದ್ದು ಕೊಂಡಿದ್ದ ಕಪ್ಪು ಶಾಲನ್ನು ದೂರ ಬಿಸಾಟು ಪೂರ್ವನಿ ಶಾದೇವಿಯು ಶುಭ್ರವಸ್ತ್ರವನ್ನು ಪರಿಧಾನಮಾಡಿಕೊಳ್ಳುತ್ತಿರುವಳು. ನಿಬಿಡವೃಕ್ಷಗ ಳೊಳಗಿಂದ ಒಂದೆರಡು ಪಕ್ಷಿಗಳ ಮಂಜುಳರವವು ಕಿವಿಗೆ ಕೇಳಿಬರುತ್ತಿರುವುದು, ಸೂರ್ಯೋದಯಕ್ಕೆ ಇನ್ನೂ ಎಷ್ಟೋ ಅವಕಾಶವಿದ್ದಿತು. ಪಕ್ಷಿ ಸಮೂಹವು ಇನ್ನೂ ತಮ್ಮತಮ್ಮ ಗೂಡುಗಳಿಂದ ಹೊರಬಿದ್ದಿರಲಿಲ್ಲ. ಶೀತಲವಾದ ಮಂದಮಾರುತನು ತನ್ನ ಮಹತ್ವವನ್ನು ತೋರ್ಪಡಿಸುತ್ತಿರುವನು. ಪ್ರಾತಃಕಾಲದ ಶೀತವಾಯುವಿನ ಮಹತ್ವ ವನ್ನು ಎಷ್ಟು ಬಣ್ಣಿಸಿದರೂ ಸ್ವಲ್ಪವೇ ಸರಿ ! ಎಷ್ಟು ಶೀತಲ, ಸುಗಂದ, ಮನಸ್ಸಿಗೆ ಎಷ್ಟೊಂದು ಆಹ್ಲಾದಕರ, ಇದರ ಸುಖಕರಸ್ಪರ್ಶದಿಂದ ಸರ್ವಾಂಗವೂ ಅಮೃತರಸ ದಿಂದ ಅಭಿಷಿಕ್ತವಾದಂತೆ ಭಾಸವಾಗುತ್ತಲಿದೆ, ಅಂತಃಕರಣವು ಸುಪ್ರಸನ್ನ ವಾಗಿ ಉಲ್ಲಸಿತವಾಗುತ್ತದೆ. ಸೃಷ್ಟಿ ದೇವತೆಯ ಈ ಕಾಲದ ಸ್ವರೂಪವು ಎಷ್ಟು ಮಧುರ ! ಎಷ್ಟು ಕೋಮಲವಾದ ಆನಂದವನ್ನು ಕೊಡುವಂತಹದು ! ಈ ಮಾಧುರ್ಯದ ಅಥವಾ ಕೋಮಲತೆಯ ಅನುಭವವನ್ನು ಸ್ವತಃ ಅನುಭವಿಸಿದ ಹೊರತು ಬರಿಯ ವರ್ಣನೆಯಿಂದ ವ್ಯಕ್ತ ಮಾಡಲು ಅಶಕ್ಯವು, ದಿನಮಣಿಯು ಸ್ವಲ್ಪ ಸ್ವಲ್ಪವಾಗಿ ತನ್ನ ಮುಖಮಂಡಲದ ಕಾಂತಿಯನ್ನು ಪ್ರಪಂಚಕ್ಕೆ ತೋರ್ಪಡಿಸಹತ್ತಿದನು. ಪಕ್ಷಿಗಳೆ ಲ್ಲವೂ ಆಹಾರಾರ್ಥವಾಗಿ ಹಾರಿಹೋಗುತ್ತಿರುವುವು. ಸತಿಸಮ್ಮುಖದಿಂದ ಎದ್ದು ಗೃಹಿಣಿಯರು ತಮ್ಮ ತಮ್ಮ ಗೃಹಕಾರ್ಯನಿರತರಾಗಿರುವರು. ಕೆಲಸವಿಲ್ಲದ ಸೋಮಾ ರಿಗಳು ಇನ್ನೂ ಹಾಸಿಗೆಯಮೇಲೆ ಮಲಗಿಕೊಂಡು ಮುಸುಕುಗಳನ್ನು ಬಲವಾಗಿ ಎಳೆ ದುಕೊಳ್ಳುತ್ತಿರುವರು. ಸಣ್ಣ ಮಕ್ಕಳು ತಮ್ಮ ಮಾತೆಯರನ್ನು ಹಿಂಸಿಸಿ ತಿಂಡಿಯನ್ನು ಇಸುಕೊಂಡು ತಿನ್ನುತ್ತಾ ತಮ್ಮ ತಮ್ಮ ಕಪ್ಪುಹಲಿಗೆಗಳೊಂದಿಗೆ ಪಾಠಶಾಲೆಗೆ ಹೋಗು ತ್ತಿರುವರು. ಹೀಗಿರುವಲ್ಲಿ ಸೇನಾಪತಿಯು ತನ್ನ ಸೇವಕರನ್ನು ಈಗ ಇನ್ನೊಂದು ಬಾರಿ ಹುಡುಕಿ ಎಲ್ಲಿದ್ದಾಗ್ಯೂ ಆ ಹುಡುಗಿಯನ್ನು ಕರತರಬೇಕೆಂತಲೂ ಹಾಗೆ ಕರತರದೆ ತಪ್ಪಿದಲ್ಲಿ ಚಕ್ರವರ್ತಿಯ ಎದುರಿನಲ್ಲಿ ಅಪಮಾನ ಹೊಂದಬೇಕಾಗುತ್ತದೆಂಬದಾಗಿಯೂ ಹೇಳಿ ಅವರನ್ನೆಲ್ಲಾ ಕೆಳಂಹಿಸಿ ತಾನೂ ಬಂದದಾರಿಯಲಿ ಹೊರಟನು.