ಕಾದಂಬರಿಸಂಗ್ರಹ
ಮತ್ತೆ ಮಾನುಷವೈದ್ಯರ ಪಾಡೇನು. ಈ ರೋಗವು ಒಂದಾವರ್ತಿ ಆಕ್ರಮಣಮಾಡಿ ದರೆ ತನ್ನ ಇಷ್ಟಾಪೂರ್ತಿಯಾದಹೊರತು ಕದಲುವುದೇ ಇಲ್ಲ.
ಪಾಠಕ ಮಹಾಶಯರೆ! ಚಿಂತೆಗಳು ಹಲವು ತರಗಳಾಗಿರುವುವು. ನವವಧು ವಿಗೆ ಪತಿಯಚಿಂತೆ. ಆವುತ್ರನಿಗೆ ಪುತ್ರನಚಿಂತೆ. ಬ್ರಹ್ಮಚಾರಿಗೆ ವಿವಾಹಚಿಂತೆ. ಕುರು ಬನಿಗೆ ಕುರಿಯಚಿಂತೆ, ಲುಬ್ಧ ನಿಗೆ ಧನದಚಿಂತೆ, ಗೌಳಿಗನಿಗೆ ಆಕಳಚಿಂತೆ, ಬೇಡನಿಗೆ ಮೃಗಗಳಚಿಂತೆ, ಬೆಸ್ತನಿಗೆ ಮೀನಿನಚಿಂತೆ, ರೋಗಿಗೆ ಮರಣದಚಿಂತೆ, ದರಿದ್ರನಿಗೆ ಸಾಲ ದಚಿಂತೆ, ವೇಶ್ಯಗೆ ಧನಿಕಪ್ರಿಯವಿಟನಚಿಂತೆ, ದೇವತೆಗಳಿಗೆ ಭೋಲೋಕದಚಿಂತೆ, ಮಕ್ಕಳಿಗೆ ತಿಂಡಿಯಚಿಂತೆ, ರೈಲ್ವೆಯವರಿಗೆ ಪ್ರಯಾಣಿಕರಚಿಂತೆ, ವಿಧುರನಿಗೆ ಪತ್ನಿಯ ಚಿಂತೆ, ವಿತಂತುವಿಗೆ ಪತಿಯಚಿಂತ ಹೀಗೆ ಇರುವುವು.
ಇವೆಲ್ಲಕ್ಕಿಂತ ಪ್ರಬಲವೂ ದುಸ್ಸಹವೂ ಆದ ಚಿಂತೆಯೊಂದು ಇರುವುದು. ಲೋಕದಲ್ಲಿ "ಅವುತ್ರಸ್ಯ ಗತಿರಾಸ್ತಿ” ಎಂಬ ಶೃತಿಯಂತೆ ಮಕ್ಕಳಿಲ್ಲದವನಿಗೆ ಗತಿಇಲ್ಲ ವೆಂಬುದೇನೋ ನಿಜ. ವಕ್ಕಳಲ್ಲಿ ಎರಡು ವಿಧವೆಂಬುದು ಸರ್ವಸಾಮಾನ್ಯವಾದ ವಿಷಯ ಅದರಲ್ಲಿ ಮೊದಲನೇಯದು ಗಂಡುಮಕ್ಕಳ ವಿಷಯವನ್ನು ನೋಡೋಣ. ಇವ ರಲ್ಲಿ ಹುಟ್ಟಿದಕೂಡಲೇ ಸಾಯುವರು ಕೆಲವರು. ಮಧ್ಯ ಕಾಲದಲ್ಲಿ ಸಾಯುವರು ಕೆಲ ವರು. ಬಹುದಿನಗಳವರಿಗೆ ಬದುಕಿ ಬಾಳೆ ದೇಹವನ್ನಿಡುವರು ಕೆಲವರು. ಇದು ಮೃತಪ ಡುವರ ಸಂಗತಿಯು. ಇನ್ನು ಜೀವಿತಪುತ್ರರ ಸಂಗತಿಯನ್ನು ನೋಡುವ ಬಾಲ್ಯದಲ್ಲಿ ಮಾತಾಪಿತೃಗಳಿಂದ ಪೋಷಿತರಾಗಿ ವರ್ಣಾಶ್ರಮಧರ್ಮಕ್ಕನುಸಾರವಾದ ಕರ್ಮಗ ಳನ್ನೂ ಯೌವನಾವಸ್ಥೆಯನ್ನೂ ಹೊಂದಿಸಿ, ತನ್ನನ್ನು ಹೊತ್ತು, ಹೆತ್ತು, ಸಾಕಿ ಸಲಹಿ, ವಿದ್ಯಾಭ್ಯಾಸಮಾಡಿಸಿದ ಮಾತಾಪಿತೃಗಳ ಇಷ್ಟಾನುಸಾರವಾಗಿ ನಡೆದು ಬಾಳುವವನು ಸುಪುತ್ರನೆನ್ನಿಸಿಕೊಂಡು ತಾನು ಸಂತೋಷವಾಗಿದ್ದು ತನ್ನ ಮಾತಾಪಿತೃ ಗಳನ್ನು ಆನಂದಾಬ್ಲಿಯಲ್ಲಿ ಮುಳುಗಿಸುವನು. ಇಂಥವರು ದುಷ್ಪುತ್ರರಾದರೆ ಅವರು ಲೋಕಕಂಟಕರಾಗಿ ಮಾತಾಪಿತೃಗಳಿಗೆ ಶೂಲಪ್ರಯರಾಗಿ ತಾವೂ ದುಃಖಪಟ್ಟು ಅವ ರನ್ನು ಚಿಂತಾಸಾಗರದಲ್ಲಿ ಯಾವಜ್ಜೀವವ ಮುಳುಗಿರುವಂತೆ ಮಾಡಿ ತಾವೂ ಕಷ್ಟಸ ಡುವರು. ಎಂತಹ ದುಷ್ವುತ್ರರಾದರೂ, ಹೊತ್ತು, ಹೆತ್ತು, ಸಾಕಿ, ಸಲಹಿದ, ಮಾತಾ ಪಿತೃಗಳು ತಮ್ಮ ಪುತ್ರರು ಎಲ್ಲಿಯಾದರೂ ಸುಖವಾಗಿರಲಿ! ಎನ್ನು ವರೇ ವಿನಹ ಅವರಿಗೆ ಯಾವ ವಿಧದಲ್ಲಿಯೂ ಕೇಡನ್ನು ಹಾರೈಸರು.