ಈ ಪುಟವನ್ನು ಪರಿಶೀಲಿಸಲಾಗಿದೆ

34 ಕಾದಂಬರಿ ಸಂಗ್ರಹ

ಮಂತ್ರಿಯು ಉಚಿತಸ್ಥಾನದಲ್ಲಿ ಕುಳಿತುಕೊಂಡಮೇಲೆ ರಾಜನು ತನ್ನ ಪ್ರಕೃತಸ್ಥಿತಿಗೆ ಕಾರಣವನ್ನು ಹೇಳದೆ ಬೇರೆ ಯಾವವೋ ಒಂದೆರಡು ವಿಷಯಗಳನ್ನು ಪ್ರಸ್ತಾಪಿಸು ತ್ತಿದ್ದು ತನಗೆ ಸ್ವಲ್ಪ ಅಸ್ವಸ್ಥತೆಯುಂಟಾಗಿರುತ್ತದೆಯೆಂತಲೂ ತನ್ನಿಂದ ನಿರ್ವಹಿಸಲ್ಪಡ ಬೇಕಾದ ಯಾವತ್ತು ಕಾರ್ಯವನ್ನೂ ಮಂತ್ರಿಯೇ ಸ್ವಲ್ಪ ಕಾಲದವರೆಗೆ ನಡೆಸಬೇ ಕೆಂದೂ ಆತನಿಗೆ ಹೇಳಿ ಕಳುಹಿಸಿ ತಾನು ಹುಚ್ಚನಂತೆ ಆ ಕಿರುಮನೆಯ ಒಂದುಕಡೆ ಯಿಂದ ಮತ್ತೊಂದುಕಡೆಗೆ ಶತಪಥ ಸುತ್ತುತ್ತಾ ಇದ್ದನು.

                         ಅಸ್ಥಮಲಹರಿ.

ದಿವಾಕರನ ಪುತ್ರನಾದ ಶನೀಶ್ವರನ ದೆಶೆಯಲ್ಲಿರತಕ್ಕೆ ಯಾವ ಮನುಷ್ಯನಾದರೂ ದುಃಖ, ಅಪಮಾನ, ಅಪಯಶಸ್ಸು, ಋಣ, ದಾರಿದ್ರೆಯ್, ಇವುಗಳಿಂದ ಕಷ್ಟನಷ್ಟಗ ಳಿಗೆ ಗುರಿಯಾಗಬೇಕಲ್ಲದೆ ಸುಖವನ್ನನುಭವಿಸುವ ಸಂಭವವು ಇಲ್ಲವೆಂದೇ ಹೇಳಿ ದರೆ ಅದು ಅತಿಶಯೋಕ್ತಿಯಾಗಲಾರದು, ಅದರಲ್ಲೂ ಈ ಮಹಾರಾಯನು ಜನ್ಮ, ದ್ವಿತೀಯಾ, ಚತುರ್ಥ, ಪಂಚಮ, ಸಪ್ಥಮಿ, ಅಷ್ಟಮ, ದ್ವಾದಶ ಈ ಏಳು ಸ್ಥಾನಗಳಲದ್ದರೆ ಹೇಳಬೇಕಾದ್ದೇಇಲ್ಲ. ಇತ್ತ ರಾಜ್ಯಭ್ರಷ್ಟನಾಗಿ ಓಡಿಹೋಗಿ ಕಾಡಿನಲ್ಲಿ ತಲೆತಪ್ಪಿಸಿಕೊಂಡು ತಿರುಗಾಡುತ್ತಿದ್ದ. ಸುವರ್ಣ ಪುರಾಧೀಶ್ವರನು ಒಂದೆರಡುತಿಂಗಳುಕಾಲ ಗೆಡ್ಡೆ ಗೆಣಸುಗಳನ್ನು ತಿಂದು ಒಂದೇಮನಸ್ಸಿನಿಂದ ಈಶ್ವರನನ್ನು ಧ್ಯಾನಿಸುತ್ತಿದ್ದನು. ಈತನ ಧ್ಯಾನದಿಂದ ಈಶ್ವರನು ಪ್ರತ್ಯಕ್ಷನಾದನೋ ಎನ್ನು ವಹಾಗೆ ಸುವರ್ಣಪರಾಧೀಶನಿಗೆ ಸ್ವಲ್ಪ ದೂರದಲ್ಲಿ ಒಂದು ದೇವಸ್ಥಾನವು ಕಾಣಿಸಿತು. ಆ ದೇವಸ್ಥಾನವುಕಟ್ಟಲ್ಪಟ್ಟು ಬಹುಕಾಲವಾಗಿದ್ದಿತು, ಅದರ ಪ್ರಾಕಾರದ ಗೋಡೆಗಳೆಲ್ಲವೂ ಬಿರುಕುಬಿಟ್ಟು ಆಲ ಮತ್ತು ಅರಳಿಗಿಡಗಳಿಗೆ ಆವಾಸಸ್ಥಾ ನವಾಗಿದ್ದುವು, ದೇವಸ್ಥಾನದ ಪ್ರಾಂಗಣದಲ್ಲಿ ಒಂದು ದೊಡ್ಡ ಕೈಸಾಲೆ, ಮತ್ತು ಸುತ್ತಲೂ ಕಲ್ಲಿನಿಂದ ಕಟ್ಟಲ್ಪಟ್ಟ ಸಣ್ಣ ಸಣ್ಣ ಮಂಟಪಗಳು, ಅವುಗಳಲ್ಲಿ ಪ್ರತಿಯೊಂದರ ಲಿಯೂ, ಒಂದೊಂದು ಲಿಂಗ ಮತ್ತು ಬಸವ. ಜಗದಂಬೆಯ ದೇವಸ್ಥಾನದ ಮುಂದುಗಡೆ ಪಾರಿಜಾತ, ಮತ್ತು ಒಂದು ಸಂಪಗೆಯ ವೃಕ್ಷವು ಬಹಳ ಎತ್ತರವಾಗಿ ಬೆಳೆದು