36 ಕಾದಂಬರೀ ಸಂಗ್ರಹ ವ್ಯಕ್ತಿಯು 66 ಭೀಮಮಹಾರಾಜರಿಗೆ ಜಯವಾಗಲಿ” ಎಂದು ಸಾರಿದನು, ವ್ಯಕ್ತಿಯನ್ನು ಕಂಡಕೂಡಲೆ ಭೀಮರಾಜನ ಮನಸ್ಸಿನಲ್ಲಿ ಯಾವುದೋ ಒಂದುವಿಧ ಸಂತೋಷವು ಉತ್ಪನ್ನವಾಯಿತು, ಆದರೆ ಅದಕ್ಕೆ ಸರಿಯಾದ ಕಾರಣವನ್ನು ಕಂಡುಹಿಡಿಯಲಾರದೆ ಹೋದನು. ವ್ಯಕ್ತಿಗೆ ಕುಳಿತುಕೊಳ್ಳಲು ಒಂದು ಆಸನವನ್ನು ತೋರಿಸಿ ಆತನ ಸ್ಥಿತಿ ಗತಿಗಳನ್ನು ವಿಚಾರಿಸಲು ಆ ವ್ಯಕ್ತಿಯು ಸುವರ್ಣಪುರಾಧೀಶ್ವರನೆಂದು ತಿಳಿದುಬಂದ ಕೂಡಲೆ ಭೀಮರಾಜನು ಆತನಿಗೆ ದಂಡಪ್ರಣಾಮವನ್ನು ಮಾಡಿ, ಪ್ರಭುವೇ ! ತಪ್ಪನ್ನು ಮನ್ನಿಸಬೇಕು ನನ್ನನ್ನು ಪರೀಕ್ಷಿಸಬೇಕೆಂತಲೋ, ಅಥವಾ ಇನ್ಯಾವಕಾರಣದಿಂದಲೋ ತಾವು ಇಲ್ಲಿಗೆ ಏಕಾಕಿಯಾಗಿ ಬಂದಿರುವುದನ್ನು ನೋಡಿದರೆ ನನ್ನ ಮನಸ್ಸಿಗೆ ತುಂಬಾ ಅನುಮಾನವಾಗುತ್ತದೆ. ಬಾಲಕನಮೇಲೆ ಕೃವ ಯಿಟ್ಟು ತಮ್ಮ ಆಗಮನಕ್ಕೆ ಕಾರಣವನ್ನು ವಿಶದವಾಗಿ ತಿಳಿಸಬೇಕಲ್ಲದೆ ನನ್ನಿಂದಾಗಬೇಕಾದ ಕಾರ್ಯವೇನಾದರೂ ಇದ್ದಲ್ಲಿ ಅದನ್ನು ಮಾಡಲು ಅಪ್ಪಣೆಯನ್ನೂ ದಯಪಾಲಿಸಬೇಕೆಂದು « ಬೇಡಿಕೊಂಡನು. ಅದಕ್ಕೆ ಸುವರ್ಣ ಪುರಾಧೀಶ್ವರನಿಗೆ ತನ್ನ ವೃತ್ತಾಂತವನ್ನೆಲ್ಲ ಆದ್ಯಂತವಾಗಿ ತಿಳಿಸಲು ಭೀಮ ರಾಜನು ಸುವರ್ಣಭುರಾಧೀಶ್ವರನಿಗೆ ಊಟ ಉಪಚಾರಗಳನ್ನು ಮಾಡಿಸಿ ಮಾರನೆಯ ದಿವಸದ ದರ್ಬಾರದಲ್ಲಿ ತನ್ನ ಮಂತ್ರಿಸೇನಾನಾಯಕಗೆ ಸೈನ್ಯವನ್ನು ಸಜ್ಜುಗೊಳಿಸು ಬೇಕೆಂದು ಕಟ್ಟಪ್ಪಣೆಮಾಡಿದನು. ಮಾರನೆಯದಿವಸ ಚತುರಂಗ ಸೈನ್ಯಸಮೇತವಾಗಿ ಸುವರ್ಣವುರಾಧೀಶ್ವರನೂ, ಭೀಮರಾಜನೂ ಹೊರಟು ಅವಂತೀಶನು ಆಕ್ರಮಿಸಿ ಕೊಂಡಿದ್ದ ಕೋಟೆಗೆ ಮುತ್ತಿಗೆಹಾಕಿ ಕ್ಷಣಕಾಲದಲ್ಲೇ ವಶಪಡಿಸಿಕೊಂಡು ತಮ್ಮ ಧ್ವಜಪಠವನ್ನು ಎತ್ತಿಕಟ್ಟಿದರ.. ಹಠಾತ್ತಾಗಿ ಶತ್ರುಗಳು ಕೋಟಿಯನ್ನು ಮುತ್ತಿದುದನ್ನು ಕೇಳಿ ಅವಂತೀಶನು ಗಾಬರಿಬಿದ್ದನು. ಆಗ ತಾನೇ ಯುದ್ಧಮಾಡಿ ತುಂಬಾ ನಷ್ಟಪಟ್ಟಿದ್ದುದರಿಂದಲೂ, ಯಾವುದೋ ಒಂದು ಚಿಂತೆಯಿಂದ ಕೊರಗುತ್ತಿದ್ದುದರಿಂದಲೂ, ಅವಂತೀಶನು ಕೌಲು ಮಾಡಿಕೊಳ್ಳಲುದ್ಯುಕ್ತನಾದನು. ಏತನ್ಮಧ್ಯೆ ಅವಂತೀಶನು ರೋಹಿಣಿ ಮತ್ತು ಕರುಣಾಂಬೆಯರನ್ನು ತನ್ನ ಕಿರು ಮನೆಗೆ ಕರೆಯಿಸಿ ರೋಹಿಣಿಯು ಕರುಣಾಕರನಿಗೆ ಸಿಕ್ಕಿದ ವಿವರವನ್ನೆಲ್ಲಾ ಮತ್ತೊಂದು ಸಲಕೇಳಿ ಕರುಣಾಂಬೆಯನ್ನು ಕುರಿತು, "ಎಲೆ ತಾಯೆ, ಈ ಹುಡುಗಿಯೊಡನೆ ನಿಮಗೆ ಕಾಗದ ವೊಂದುಸಿಕ್ಕಿತೆಂದು ನೀವು ಹೇಳಿದಿರಷ್ಟೆ ? ದಯಮಾಡಿ ಆ ಕಾಗದ ವನ್ನು ನೋಡಲು ಕೊಡುವಿರಾ ?” ಎಂದು ಕೇಳಲು ರೋಹಿಣಿಯು ತನ್ನ ಜೇಬಿನಲ್ಲಿಟ್ಟು ಕೊಂಡಿದ್ದ ಚೀಟಿಯನ್ನು ಅವಂತೀಶನಿಗೆ ಕೊಟ್ಟಳು.
ಪುಟ:ನನ್ನ ಸಂಸಾರ.djvu/೨೬೨
ಈ ಪುಟವನ್ನು ಪರಿಶೀಲಿಸಲಾಗಿದೆ