೧೪ ಬೆನಕನ ಮಹಿಮೆ
ಮರಳಿಪೋದನು ಗಣನುನಿಲಯಕೆ |ಹರುಷದಿಂದಲಿ ಸುತನನೋಡಲು|
ಚಿರದೆತವಕಿಪ ತಾಯಿತಂದೆಯನವನು ನಂದಿಸಲು ||
ಭರದೆ ತಳೈಸಿದರು ವೃದ್ಧರು ತರಳನಾಗಚ್ಛನದೊಳಾದಾ|
ಚರಿಯವೆಲ್ಲ ವನೊಂದು ಬಿಡದೆ ಯವರ್ಗೆ ಪೇಳಿದನು || ೨೦||
ಸುತನ ಶಿರವನು ಪಿತನುಮೂಸಿದ| ನತುಳತರ ಸಂಮೋದವಾಂತನು|
ವಿತತವರ್ಷವನೆಲ್ಲ ರೊ೦ದುತೆ ಪೊಗಳಿಪಾಡಿದರು ||
ಪಿತನು ಮಗನನು ಕರೆದು ತಟ್ಟೆ |ಸುತಲಿಪೇಳಿದ ನವಗೆಸೂಕ್ತಿಯ |
ಹಿತದೊಳೊರೆವೆನುಗುಹನೆ ! ಕೇಳೆಂದೀಶತಾನೊರೆದ || ೨೧ ||
ಅರಿವುಬಿಜ್ಜೆಯು ತಪವು ಒಪಗಳು | ಸಿರಿದುಶೌರವು ಕುಲವುತಾಮಿವು|
ಮೆರೆಗು ನಿನ್ನಿಂದಧಿಕ ಮೆಂಬಂತಣುಗ ನಿನ್ನೊಳಗೆ|
ತರಳನದರಿಂ ಪಿರಿದು ರಾಜ್ಯದ |ಹೊರೆಯನಿಳಿಸುವೆ ನಿನ್ನೊಳೆನುತವ|
ನೊರೆದು ಮಂತ್ರಿಯ ಕೂಡೆ ಯೋಚಿಸಿತವಕದಲ್ಲಿರ್ದ || ೨೨||
ಪ್ರಕೃತಿಸಮ್ಮತಿಯಿಂದ ಕಾರವ| ಸುಕೃಪೆಯಿಂದಲಿ ಮಾಡಿಯೊದಗಿಸೆ|
ಸುಕೃತಿಯಭಿಜಿದ್ರೂಮಿ ಪೋತ್ತಮನಿಡಿಸಿ ಲಗ್ನ ವನು ||
ಪ್ರಕೃತವೈಭವದೊಡನೆ ಮಗನಿಗೆ ಪ್ರಕೃತಿವೆರಸಿಯ ಪಟ್ಟಗಟ್ಟು ತ।
ಭಕುಟಿವಿಭ್ರಮದಿಂದ ಮೆಲ್ಲರ ತಾನು ಮೆಚ್ಚಿಸಿದ || ೨೩ ||
ಪಟ್ಟಗಟ್ಟಿದ ಬಳಿಕ ರಾಯನು |ನೆಟ್ಟನಡವಿಗೆ ಸತಿಯೊಡನೆ ಪೊರ |
ಮಟ್ಟನಾಗಳೆ ಮುಕ್ತಿಗಾಶಿಸಿ ನೃಪಶಿರೋಮಣಿಯು ||
ದಿಟ್ಟಿದಾಳ್ತಗೆಯ್ಕೆಗಳ ಮಂದಟ್ಟಿನೊಳ್ಳಾಗಣಿಸದಿತರರ|
ತೊಟ್ಟಿನಾಳ್ತನಗಳನು ಪಡೆದನು ಗಣಮಹೀಪತಿಯು || ೨೪ ||
ಕೆಲರು ಗಣನನೆ ಸೇವಿಸಿರ್ದರು | ನೆಲದೆತವಕದೆ ಧಾಳಿಯಿಟ್ಟನು |
ನಿಲದೆರಾಯನು ಶತ್ರುರಾಯರಮೇಲೆ ದಳವೆರಸಿ ||
ಬಲುದಿನಂಗಳಿನೊಲಿಸುತಿರ್ಪರು| ಬಲಿಯು ವಿಶ್ವಜಿತಾಖ್ಯನುಂ ಮೇ |
ಣೊಲುಮೆಯಿಂ ಗುಣವಂತನುಂ ಪ್ರಮನಾಖ್ಯನಾಗ್ರಂಥ || ೨೫ ||
ತೆರಳಿ ನಾಲ್ವರು ದಳದೆಸಚಿವರು ದೊರೆಗೆ ಹರ್ಷವನೊದವಿಸುತ್ತಲಿ|
ತರಲು ಹೇಳಿದರಸ್ಯಶಕ್ತನ ಬೇಗ ಪರಿಜನಕೆ ||
ತರತರದ ಶಸ್ತ್ರಾಸ್ತ್ರಗಳ ತಾವ್ | ಭರದೆ ಪಿಡಿದರು ಕೆಲರುಯೋಧರು |
ಕರಿಯಮೇಲೆತ್ತಿಟ್ಟರಾಗಳೆ ಕೈದುಗಳನವರು || ೨೬ ||