ಈ ಪುಟವನ್ನು ಪರಿಶೀಲಿಸಲಾಗಿದೆ
28 ಕಾದಂಬರೇ ಸಂಗ್ರಹ ೧೧AAAAAAAAAA/ NNAAAAAAAAAAAAAAAAAAAAAAAAAAAAAAA ಒಂದೇ ಸಂಸಾರದಲ್ಲಿ ಎಲ್ಲರೂ ಇದ್ದರೆ ಪರಸ್ಪರ ವೈಷಮ್ಯಕ್ಕೆ ಕಾರಣವಾದೀತೆಂದು ಎಲ್ಲರಿಗೂ ಗೊತ್ತಾಯಿತು. ನಮ್ಮ ಯಜಮಾನರು ಹಿರಿಯರ ಮಾತನ್ನು ಮೀರದೆ ಹರಪುರಕ್ಕೆ ಹೊರಟು ಹೋಗಿದ್ದರೆ ಈ ವಿಧವಾದ ಅವಾಂತರಗಳಾಗುತ್ತಿರಲಿಲ್ಲ. ಹಾಗೆ ಮಾಡದಿದ್ದುದು ಬಹು ಅನರ್ಥಕ್ಕೆ ಮೂಲವಾಯಿತು.
ಸಂಸಾರದಗುಟ್ಟು, ವ್ಯಾಧಿರಟ್ಟು, ಎಂಬ ಲೋಕೋಕ್ತಿಯಂತೆ ತಮ್ಮ ತಮ್ಮ ಸಂಸಾರ ಸ್ಥಿತಿಯನ್ನು ಇತರರಿಗೆ ಹೇಳುವುದು ಅವಿವೇಕವಾದ ಕೆಲಸವೆಂಬ ವಿಷಯವು - ನನಗೆ ಗೊತ್ತಿದೆ. ಆದರೆ ನಾನು ನಮ್ಮ ಸಂಸಾರದ ರಹಸ್ಯವನ್ನು ಬಹಿರಂಗ ಪಡಿಸುವು ದಕ್ಕಾಗಿ ಈ ಕಥೆಯನ್ನು ಬರೆಯುತ್ತಿಲ್ಲ. ಕಿಂತು-ಲೋಕದಲ್ಲಿ ಇಂತಹ ಅಂತಃಕಲಹ ಗುಳುಳ್ಳ ಸಂಸಾರಗಳು ಅನೇಕವಾಗಿರುವುವೆಂಬುದನ್ನು ತೋರ್ಪಡಿಸುವುದಕ್ಕಾಗಿಯೂ ಭರತಖಂಡದಲ್ಲೆಲ್ಲೆಲ್ಲಿಯೂ ಸಮಸ್ತ ಸಂಸಾರವೂ ಶಾಂತಿಯಿಂದ ವರ್ತಿಸುವಂತೆ ಈ ಕಥೆಯಿಂದ ಸಾಧ್ಯವಾದೀತೇ ಎಂಬ ಮಾದರಿಯನ್ನು ತಿಳುವುದಕ್ಕಾಗಿಯೂ ವಿಷಯಗಳು ಪ್ರತಿಪಾದಿಸಲ್ಪಟ್ಟಿವೆ. ಮತ್ತು ನನ್ನಂತಹ ಹುರುಡುಮಾಡುವಂತಹ ತರುಣಿಯರು ಎಷ್ಟೋ ಮಂದಿ ಈ ಲೋಕದಲ್ಲಿ ಇರುವರೆಂಬುದನ್ನು ಅನೇಕ ತರುಣಿಯರು ತಮ್ಮ ತಮ್ಮ ಪತಿಗ ಳನ್ನು ತಮ್ಮ ಆಜ್ಞೆಗೆ ಅಧೀನರನ್ನಾಗಿ ಮಾಡಿ ಕೊಳ್ಳಲು ಪ್ರಯತ್ನಿಸುತ್ತಿರುವರೆಂಬುದ ನ್ನೂ, ಅದರಂತೆಯೇ ಪತ್ನಿ ಯರಿಗೆ ಸ್ವಾಧೀನರಾಗಿ ನಡೆಯುತ್ತಿರುವ ಅನೇಕ ಮನುಜರು ಈ ದೇಶದಲ್ಲಿ ವಿಶೇಷವಾಗಿರುವರೆಂಬುದನ್ನೂ ನಾನು ಕೇಳಿ, ನೋಡಿಬಲ್ಲೆನು. ಅಂದರೆ ಹೆಂಡತಿಯರ ಮಾತನ್ನು ಗಂಡಂದಿರು ಕೇಳಲೇ ಬಾರದೆಂಬುದು ನನ್ನ ತಾತ್ಪರ್ಯವಲ್ಲ. ನೀರಕ್ಷೀರ ನ್ಯಾಯದಂತೆ ಅನ್ನೋನ್ಯವಾಗಿ ಯುಕ್ತಿ ಯುಕ್ತವಾದ ವಿಷಯಗಳನ್ನು ಒಬ್ಬರಿಗೊಬ್ಬರು ಹೇಳಿ ಕೊಡುತ್ತಾ ಪುಣ್ಯವಂತರೆನಿಸಿಕೊಂಡು ಲೋಕಕ್ಕೆ ಮಾದರಿ ಯಾದ ದಂಪತಿಗಳಾಗಿ ಎಲ್ಲರೂ ಪರಿಣಮಿಸಬೇಕೆಂಬುದೇ ನನ್ನ ಕುತೂಹಲ. ನನ್ನೀ ಅಭಿಪ್ರಾಯವನ್ನು ಅನುಮೋದಿಸುವವರು ಅನುಮೋದಿಸಲಿ. ಎಲ್ಲರಿಗೂ ಬುದ್ದಿ ಹೇಳಿ ಕಲಿಸುವುದಕ್ಕೆ ನನ್ನಿಂದ ಸಾಧ್ಯವಿಲ್ಲ.
VII - ನಮ್ಮ ಸಂಸಾರವು ವಿಷಮವಾಗಿಯೇ ನಡೆಯುತ್ತಿತ್ತು. ಹೀಗೆಯೇ ಕೆಲವು ದಿನಗಳು ಕಳೆದು ಹೋದವು. ನಮ್ಮ ಯಜಮಾನರು ಹರಪುರಕ್ಕೆ ಹೊರಡುವ ಯೋಚ ನೆಯನ್ನು ಮಾಡಲೇ ಇಲ್ಲ.ಅದೇನು ದೈವಮಾಯಯೋ; ನಮ್ಮ ಗೃಹಕೃತ್ಯದಲ್ಲಿ ಅನಿ ರ್ವಚನೀಯವಾದೊಂದು ವಿಷಲತೆಯು ಹಬ್ಬಿ ವ್ಯಾಪಿಸುತ್ತ ಬಂದಿತು. ಲತೆಯು ಇನ್ನೂ ಚೆನ್ನಾಗಿಬಲಿತು ಹಬ್ಬಿರಲಿಲ್ಲ.. ಅಷ್ಟರಲ್ಲೇ ನಾವು ಆಲತೆಯನ್ನು ಕಿತ್ತು "ನಿರ್ಮಲ