ಈ ಪುಟವನ್ನು ಪರಿಶೀಲಿಸಲಾಗಿದೆ

ನನ್ನ ಸಂಸಾರ


ನಗಳಿರುವುವೋ ಅಷ್ಟು ಕೆಡಕುಗಳೂ ಇರುವವು. ಇದು ದೈವೇಚ್ಛೆಗೆ ಅಧೀನವಾದುದು. ಹೇಗೆಂದರೆ ಪ್ರಜೆಗಳನ್ನು ಪರಿಪಾಲಿಸುವ ಸರಕಾರವು ಲೋಕಕ್ಕೆ ಎಷ್ಟು ಹಿತವನ್ನಾಚ ರಿಸುವುದೇ ದುಷ್ಟರ ವಿಷಯದಲ್ಲೂ ಅದು ಅಷ್ಟು ಕಾಠಿನ್ಯವನ್ನು ತೋರಿಸಲೇಬೇಕ ಲವೆ ? ಜಗತ್ತಿಗೆಲ್ಲಾ ಪರಮ ಪ್ರಯೋಜನವಾಗುವಂತೆ ವರ್ತಿಸುವ ಮಳೆಯಲ್ಲಿ, ಸಿಡಿಲು, ಮಿಂಚು, ಗುಡುಗು, ಮುಂತಾದುವುಗಳು ಭಯಂಕರಗಳಾಗಿವೆ. ಆರೋಗ್ಯ ದಾಯಕನಾದ ಸೂರ್ಯನೇ ತನ್ನ ತಾಪದಿಂದ ಲೋಕವನ್ನೆಲ್ಲಾ ಪರಿತಪಿಸುವಂತೆ ಮಾಡುವನು. ಇದರಂತೆ ಹಣವು ನಮ್ಮ ಅನೇಕ ಕಾರ್ಯಗಳಿಗೆ ಫಲಕಾರಿಯಾಗಿ ಪರಿಣಮಿಸಿದರೂ ಮನುಷ್ಯನನ್ನು ನಾನಾವಿಧಗಳಾದ ಕಷ್ಟಗಳಿಗೆ ಗುರಿಮಾಡುವುದರಲ್ಲಿ ಆವ ಸಂದೇಹವೂ ಇಲ್ಲವೆಂಬುದನ್ನು ಯಾವಾಗಲೂ ಮರೆಯಲಾಗದು, ಪದಾರ್ಥಗ ಳರುಚಿಗಿಂತಲೂ ಧನರುಚಿಯು ಮಾನವರಿಗೆ ಬಲು ಇಂಪಾಗಿರುವುದು, ಒಬ್ಬನಲ್ಲಿ 8-10 ರೂಪಾಯಿಗಳಿದ್ದರೆ ಅದು ಮುಗಿವ ವರೆಗೂ ಅವನು ಎಷ್ಟೊರಾಜಭೋಗ ಗಳನ್ನ ಪೇಕ್ಷಿಸ ಬಹುದು. ತನ್ನ ಸೇವೆಗೆ ಒಬ್ಬನನ್ನು ನೇಮಿಸ ಬಹುದು. ಒಬ್ಬ ಉಪಾಧ್ಯಾಯನನ್ನು ಪಾಠಹೇಳುವುದಕ್ಕೆ ಇಟ್ಟು ಕೊಳ್ಳಬಹುದು, ರುಚಿರುಚಿಯಾದ ಆಹಾರವನ್ನು ಬಯಸಬಹುದು. ಅಲ್ಬಧನದಿಂದಲೇ ಇಂತಹ ರಾಜಸುಖವನ್ನು ಪ್ರೇರಿ ರಿಸುವ ಧನವು ಹೆಚ್ಚು ಹೆಚ್ಚಾಗಿ ಬೆಳೆದಷ್ಟೂ ಎಷ್ಟೋ ಭಾವನೆಗಳನ್ನೂ ದುರಾಶೆಗೆ ಇನ್ನೂ ಮನಸ್ಸಿನಲ್ಲಿ ಉತ್ಪತ್ತಿ ಮಾಡಬಹುದಲ್ಲವೆ ! ಹಣದೊಡನೆ ಗುಣವೂ ಬೆಳೆದರೆ ಅದರಿಂದ ನಮಗೆ ಸುಖಉಂಟಾಗುವುದು. ಆಗ ವಿಚಾರಮಾಡಿದರೆ ಐಶ್ವರ್ಯವಂತರು ಬಹಳ ಕಡಮೆಯಾಗಿಯೂ ಬಡವರು ಹೆಚ್ಚಾಗಿಯೂ ಇರುವಂತೆ ತೋರುವದು. ಅನೇಕ ಧನಿಕರು ಬಡವರನ್ನು ತಿರಸ್ಕರಿಸುತ್ತಾ, ಮರಳಿಮರಳಿ ದ್ರವ್ಯ ಸಂಗ್ರಹದಲ್ಲೇ ಅಭಿಲಾಷೆಯುಳ್ಳವರಾಗಿ, ತುಂಬಾ ಅನ್ಯಾಯವನ್ನು ಮಾಡುತ್ತಿರುವರು. ಬಡವರು ಜೀವನಕ್ಕೆ ಯತ್ನವಿಲ್ಲದೆ ಧನಸಂಪಾದನೆಗಾಗಿ ನ್ಯಾಯವನ್ನುಲ್ಲಂಘಿಸಬೇಕಾಗಿದೆ. ಅಂತೂ ಇಂತೂ ಈ ಹಣದ ಮಹಿಮೆಯಿಂದ ಪ್ರಪಂಚದಲ್ಲಿ ನ್ಯಾಯ ಪ್ರಚಾರಕ್ಕೆ ಅವಕಾಶವು ಕಮ್ಮಿಯಾಗುತ್ತ ಬಂದಿದೆ. - ದ್ರವ್ಯದೇವಿಯ ಅನುಗ್ರಹವನ್ನು ಸಂಪಾದಿಸುವುದಕ್ಕಾಗಿ ಬಹು ಜನರು ಮಹಾ ಲಕ್ಷ್ಮೀವ್ರತವನ್ನು ಕಲ್ಗೊಂಡು ಆಕೆಯನ್ನು ವಿಧ ವಿಧವಾಗಿ ಅರ್ಚಿಸಿ ಅನೇಕ ವಿಧ ವಾಗಿ ಸ್ತೋತ್ರ ಮಾಡುವರು, ಅಂತಹ ಸ್ತೋತ್ರಜಾಲದಮಲಕ ಧನದೇವತೆಯನ್ನು ಪ್ರಸನ್ನಗೊಳಿಸುವ ಕವಿತಾ ಪ್ರೌಢಿಮೆಯು ನನ್ನಲ್ಲಿಲ್ಲ, ಆದುದರಿಂದ ನಮಗೆ ಹೊಗ ಳುವ ಭಟರೆಂಬ ಹೆಸರು ಬರಲಾರದು, ಆದರೆ ಆ ಧನಲಕ್ಷ್ಮಿಯು ನಮ್ಮನ್ನು ಅನುಗ್ರಹ