___________________________________________
ನ್ನಾಗಿ ಮಾಡುವ ಹಸುರು ರಸಗಳೂ ಸೇರಿರುತ್ತವೆ. ಈ ಔಷಧಗಳು ಹೊಟ್ಟೆಗೆ ಹೋದ ಸ್ವಲ್ಪ ಕಾಲದಲ್ಲಿ ಪ್ರಾಣವನ್ನು ಸಹ ಹಾಳುಮಾಡಿಬಿಡುತ್ತವೆ. ಬುದ್ಧಿಯಿಲ್ಲದ ಹೆಂಗಸರು ಆ ಮೋಸಗಾರರ ಸುಳ್ಳು ಮಾತುಗಳನ್ನು ನಂಬಿ ಗಂಡಂದಿರನ್ನು ವಶಮಾಡಿಕೊಳ್ಳಬೇಕೆಂದು ಇಂತಹ ಅಪಾಯಕರಗಳಾದ ಪದಾರ್ಥಗಳನ್ನು ಅವರ ಹೊಟ್ಟೆಗೆ ಹಾಕಿ ಪ್ರಾಣಭಯವನ್ನುಂಟು ಮಾಡುತ್ತಾರೆ. ಇದಕ್ಕಾಗಿ-ಗಂಡನ ಸ್ವಾಧೀನಕ್ಕಾಗಿಯಾವ ಮಂತ್ರತಂತ್ರಗಳೂ ಇಲ್ಲ. ಇಂತಹ ನಡತೆಗಳು ಎಂದಾದರೊಂದುದಿನ ಗಂಡಂದಿಗೆ ತಿಳಿಯದೆ ಹೋಗದು. ಆಗ ಹೆಂಡತಿಯರ ಮೇಲಿನ ಅಭಿಮಾನವು ಅವ ಲಗೆ ಸುತರಾಂ ತಪ್ಪಿಯೂ ಹೋಗುತ್ತದೆ. ಗಂಡನನ್ನು ಉಪಾಯದಿಂದ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಕೆಲವು ಚಮತ್ಕಾರಗಳಿವೆ. ಅದನ್ನು ಹೇಳುವೆನು ಕೇಳು, ಹೆಂಡತಿಯ ನಡತೆ ಗಂಡನ ಮನಸ್ಸಿಗೆ ಒಪ್ಪುವಂತಿರಬೇಕು, ಗಂಡನಿಗೆ ಅಹಿತವಾದುದನ್ನೆಂದಿಗೂ ಮಾಡಬಾರದು, ಅವರೆದುರಿಗೆ ಗಟ್ಟಿಯಾಗಿ ಮಾತನಾಡಬಾರದು, ಅವರ ಮನಸ್ಸಿಗೆ ಆಯಾಸವನ್ನುಂಟುಮಾಡಬಾರದು, ಅವರನ್ನು ಎಂದಿಗೂ ನಿರಾಕರಿಸಬಾರದು, ಎಷ್ಟು ಕಷ್ಟ ಬಂದರೂ ಧರ್ಮ ಮಾರ್ಗವನ್ನತಿಕ್ರಮಿಸಬಾರದು, ಗಂಡನು ಯಾವ ಸಮಯದಲ್ಲಿ ಏನು ಕೆಲಸವನ್ನು ಹೇಳುತ್ತಾನೋ ಅದನ್ನು ತಕ್ಷಣವೇ ಆತನಿಗೆ ತೃಪ್ತಿಕರವಾಗುವಂತೆ ಮಾಡಬೇಕು.ಈ ಕೆಲಸವನ್ನು ನಾನು ಮಾಡೆನೆಂದಾಗಲೀ ನನಗೆ ಬೇಜಾರಾಗುವುದಾಗಲೀ ಹೇಳ ಬಾರದು. ಆ ಕೆಲಸವು ತಮ್ಮಿಂದಾಗದ ಪಕ್ಷದಲ್ಲಿ ನಮ್ರತೆಯಿಂದ ಅದರ ಕಾರಣವನ್ನು ಅವರಿಗೆ ತಿಳಿಯಪಡಿಸಬೇಕು, ಅವರೊಡನೆ ಯಾವ ವಿಧವಾದ ಸುಳ್ಳನ್ನು ಹೇಳಬಾರದು, ಅವರೆದುರಿಗೆ ಇತರರ ನಿಂದೆಯನ್ನು ಇತರರೆದುರಿಗೆ ಅವರ ನಿಂದೆಯನ್ನು ಸರ್ವಥಾ ಮಾಡಬಾರದು, ನಿಷ್ಕಾರಣವಾಗಿ ಕೋಪಿಸಿಕೊಂಡು ಅವರೆದುರಿಗೆ ಬಾಯಿಗೆ ಬಂದಂತೆ ಮಾತಾಡಬಾರದು, ಅವರನ್ನು ಎಂದಿಗೂ ಮೋಸಗೊಳಿಸಬಾರದು, ಅವರು ಮಾಡುವ ಒಳ್ಳೆ ಕೆಲಸಕ್ಕೆ ಅಡ್ಡಿ ಮಾಡಬಾರದು. ಯಾವ ಕೆಲಸದಲ್ಲಾಗಲೀ ತಮ್ಮದು ತಪ್ಪಾಗಿದ್ದರೆ ಒಪ್ಪಿಕೊಂಡು ಕ್ಷಮೆಯನ್ನು ಕೇಳಬೇಕು, ಅವರಲ್ಲಿ ತಪ್ಪಿದ್ದರೆ ಅದಕ್ಕೆ ಕೋಪಿಸಿಕೊಳ್ಳದೆ ಸಮಾಧಾನದಿಂದ ಅದನ್ನು ಅವರಿಗೆ ತಿಳಿಸಬೇಕು. ತಮ್ಮಿಂದ ಆದಷ್ಟು ಪ್ರೀತಿಯಿಂದ ಅವರ ಸೇವೆಮಾಡಬೇಕು.
ಒಳ್ಳೇ ಸೀರೆಗಳನ್ನುಟ್ಟುಕೊಂಡು ಒಡವೆಗಳನ್ನಿಟ್ಟುಕೊಂಡು ಪತಿಗಳನ್ನು ಮೋಹಗೊಳಿಸುವ ಪ್ರಯತ್ನವನ್ನೆಂದಿಗೂ ಮಾಡಬಾರದು, ನಿಮ್ಮ ಮನಸ್ಸು ಒಳ್ಳೆಯದಾಗಿದ್ದರೆ ಅದರಿಂದಲೇ ಅವರ ಮನಸ್ಸು ನಿಮ್ಮ ಕಡೆಗೆ ತಿರುಗುತ್ತದೆ. ನಿಮ್ಮ ಸದ್ಗು