ನನ್ನ ಸಂಸಾರ 53 ತ ನಿಮ್ಮ ತಾಯಿಯು ಪೂರ್ವಕಾಲದ ಹಳೇನಡತೆಯುಳ್ಳವರು. ಅವರಿಗೆ ಸಮಯ ದಲ್ಲಿ ತಕ್ಕ ಸಲಹೆಗಳನ್ನು ಹೇಳಿಕೊಡುತ್ತಾ ಗೃಹಕೃತ್ಯದಲ್ಲಿ ಮಿತವ್ಯಯಿಗಳಾಗಿ ರುವಂತೆ ಹೇಳುವುದು, ಹಿಂದಿನ ಸ್ಮರಣೆಗಳನ್ನು ನೆನೆದು ಜಾಗರೂಕಳಾಗಿರು. ಚಿ|| ಮಗುವಿನ ಆರೋಗ್ಯ ವಿಷಯದಲ್ಲಿ ಬಹು ಎಚ್ಚರವನ್ನು ವಹಿಸು, ನಿನ್ನ ಕ್ಷೇಮ ಲಾಭಕ್ಕೆ ಪತ್ರಬರಿ. ಇತ್ಯಾಶಿಷಃ ಕಾಗದವನ್ನು ಓದಿಯಾದಮೇಲೆ ಪ್ರಸ್ತಕಗಳನ್ನು ಒಂದೊಂದನ್ನಾಗಿ ಓದಿ ನೋಡಿದೆನು. ಈ ನಾಲ್ಕು ಗ್ರಂಥಗಳೂ ಗೃಹಿಣಿಯಾದವಳ ನಿತ್ಯ ಪಠನಕ್ಕೆ ಯೋಗ್ಯ ವಾದುದೆಂದು ತಿಳಿದು ಬಂದುದರಿಂದ ನಾನು ಅದನ್ನು ಪುನಃ ಪುನಃ ಓದುತ್ತಾ ತದುಕ್ತ ಧರ್ಮಗಳನ್ನು ಮನನಮಾಡುತ್ತಾ ನನ್ನ ಸ್ವಾಮಿಹಿತವನ್ನೇ ಮನಸ್ಸಿನಲ್ಲಿ ಸದಾ ಚಿಂತಿಸುತ್ತಾ ಸಮಯ ದೊರೆತಾಗ ನನ್ನ ಒಡನಾಡಿ ಯರಿಗೂ ತಕ್ಕ ಧರ್ಮನೀತಿಗಳನ್ನು ಹೇಳುತ್ತಾ ಕಾಲಗಳೆಯುತ್ತಿದ್ದೆನು. ನನ್ನ ತಾಯಿಯೂ ನಾನು ಬಂದ ಇಪ್ಪತ್ತು ದಿನ ಗಳಿಗೆ ಗಂಡುಮಗುವನ್ನು ಹೆತ್ತರು. ಈ ವಿಚಾರವನ್ನು ಕುರಿತು ಹರಪುರಕ್ಕೆ ಕಾಗದವನ್ನು ಬರೆದುದೂ ಆಯಿತು. X ನಾನು ರಂಗಪುರದಲ್ಲಿ ಒಂದು ತಿಂಗಳುಕಾಲವನ್ನು ಕಳೆದೆನು. ಹರಪುರದಿಂದ ನಮ್ಮ ಯಜಮಾನರು ಈ ಅವಧಿಯಲ್ಲಿ ರಂಗಪುರಕ್ಕೆ ಬಂದಾರೆಂದು ನಿರೀಕ್ಷಿಸಿದೆನು. ಬರಲಿಲ್ಲ. ಒಂದು ತಿಂಗಳು ಕಳೆದಮೇಲೆ ಶ್ರೀ ನಗರದಲ್ಲಿ ನಡೆದ ವಿಚಿತ್ರವೃತ್ತಾಂತವೊಂ ದನ್ನು ನಮ್ಮ ಯಜಮಾನರು ಪತ್ರಮುಖೇನ ವಿಸ್ತಾರವಾಗಿ ನನಗೆ ತಿಳಿಸಿದರು. ಆ ಪತ್ರದ ಮುಖ್ಯಸಾರಾಂಶವು ಈ ಕೆಳಗೆ ಬರೆಯಲ್ಪಡುತ್ತದೆ. ಶ್ರೀ ನಗರದ ನಮ್ಮ ಮನೆಯಲ್ಲಿ ಹತ್ತು ವರ್ಷಕಾಲದಿಂದ ಒಬ್ಬಳು ಕಪಟಿಯಾದ ಮುದುಕಿಯಿದ್ದಳು. ಇವಳು ನಮ್ಮ ಬಂಧುಗಳಲ್ಲೊಬ್ಬರ ಮನೆಯವಳಾಗಿದ್ದುದರಿಂ ದಲೂ ಅವಳಿಗೆ ಯಾರೂ ದಿಕ್ಕಿಲ್ಲದ್ದರಿಂದಲೂ ನಮ್ಮ ಮನೆಯಲ್ಲೇ ಬಂದು ಸೇರಿಕೊಂ ಡಿದ್ದಳು. ಇವಳಿಂದ ಒಂದೊಂದು ಕಾಲದಲ್ಲಿ ನಮಗೆ ಅನೇಕ ಸಹಾಯವಿದ್ದುದರಿಂದ ನಮ್ಮ ತಾತನವರು ಅವಳನ್ನು ಮನೆಯಲ್ಲಿರಲು ಸ್ವಾತಂತ್ರವನ್ನು ಕೊಟ್ಟಿದ್ದರು. ಆ ಮುದುಕಿಯ ನಡತ ವಿಚಿತ್ರವಾದುದು. ಅವಳಿಗೆ ಒಬ್ಬರಮೇಲೆ ಇನ್ನೊಬ್ಬರ ಚಾಡಿ ಯನ್ನು ಹೇಳಿ ಪರದೂಷಣೆ ಯನ್ನು ಮಾಡಿ ಆವರಿವರಿಗೆ ತಂದಿಕ್ಕಿ ತಮಾಷೆ ನೋಡುವುದರಲ್ಲಿ ಬಹು ಕುತೂಹಲ. ಅಲ್ಲದೆ ಪ್ರಪಂಚದ ಎಲ್ಲಾ ವೃತ್ತಾಂತವೂ ಇವಳಿಗೆ ಬಲು ಬೇಗ ತಿಳಿಯುತ್ತಿದ್ದುದರಿಂದ ಇವಳು ಒಂದು ದೈನಂದಿನ ಪತ್ರಿಕೆಯಂತೆ ಪ್ರಸಿದ್ಧಳಾಗಿ
ಪುಟ:ನನ್ನ ಸಂಸಾರ.djvu/೬೧
ಈ ಪುಟವನ್ನು ಪರಿಶೀಲಿಸಲಾಗಿದೆ