ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೂತನ ವತ್ಸರಾರಂಭ. ಪೋಷಕಮಹಾಶಯ! ನಿಮ್ಮ ಅಮೋಘ ಸಹಾಯ ಸಂಪತ್ತಿಯಿಂದ ಸಂಗ್ರಹಶಿಶುವು ಚತುರ್ಥ ವರ್ಷದಲ್ಲಿ ಕಾಲನ್ನಿಟ್ಟಿರುವುದು. ಕಳೆದಮೂರುವರ್ಷಕಾಲ ಸಂಗ್ರಹವು ಅನೇಕ ಕಷ್ಟದಿಂದ ಪ್ರಚುರವಾದುದು ಸರಿಯಷ್ಟೆ! ಮುಂದೆ ಈಪತ್ರಿಕೆಯು ನಿರಾಯಾಸ ವಾಗಿ ಹೊರಡುವಂತೆಯೂ, ಕಾಲಕ್ಕೆ ಸರಿಯಾಗಿ ಪ್ರಚುರವಾಗುವಂತೆಯೂ, ಗ್ರಾಹಕ ಸಂಖ್ಯೆಯು ಅಭಿವೃದ್ಧಿಯಾಗಿ ಸಂಗ್ರಹಕ್ಕೆ ಮಂಗಳ ಪುಂಟಾಗುವಂತೆಯೂ ನೀವೆಲ್ಲರೂ ಅನುಗ್ರಹಿಸುವದಲ್ಲದೆ ಸ್ವಹಸ್ತ ಪರಹಸ್ತಗಳಿಂದ ಉದಾರಾಶ್ರಯಕೊಟ್ಟು ಕಾಪಾಡ ಬೇಕಾಗಿ ಪ್ರಾರ್ಥಿಸುತ್ತೇನೆ ಸಂಗ್ರಹ ಪತ್ರಕರ್ತ. ---- ಲಲಿತೆಯ ನಾತಿವ್ರತ್ಯರಕ್ಷಣೆ. ಹೊಸೂರಿನ ಆಚೆ ಸುಮಾರು ಅರ್ಧಮೈಲಿ ದೂರದಲ್ಲಿದ್ದ ಒಂದು ಮೈದಾನ ದಲ್ಲಿ ಸಣ್ಣದೊಂದು ಗುಡಿಸಲಿದ್ದಿತು. ಒಂದು ದಿನ ಬೆಳಿಗ್ಗೆ ಹತ್ತು ಗಂಟೆಯಲ್ಲಿ ಒಬ್ಬ ಭಿಕ್ಷುಕನು ಆ ಗುಡಿಸಲಿನ ಬಾಗಿಲಿನಲ್ಲಿ ನಿಂತು ತನ್ನ ಕೈಯಲ್ಲಿದ್ದ ಕಬ್ಬಿಣದ ಝಾಲು ಯನ್ನು ಸದ್ದುಮಾಡಿದನು. ಒಳಗಿನಿಂದ ಯುವತಿಯೊಬ್ಬಳು ಭಿಕ್ಷವನ್ನು ತಂದು ಹಾಕಿದಳು. ಯುವತಿಗೆ ಹದಿನೆಂಟು ವರ್ಷ ವಯಸ್ಸು. ಸ್ವಭಾವವಾಗಿ ಆಕೆಯು ಸುಂದರಿಯಾಗಿದ್ದಳು. ಆಕೆಯ ಹೆಸರು ಲಲಿತಾಂಬ, ಲಲಿತೆಯು ಭಿಕ್ಷವನ್ನು ಹಾಕು ತ್ತಿದ್ದಾಗ ಆ ಭಿಕ್ಷುಕನು ಪಾಪಪೂರಿತವಾದ ಕ್ರೂರದೃಷ್ಟಿಯಿಂದ ಆ ಸುಂದರಿಯನ್ನು ನೋಡತೊಡಗಿದನು. ಈತನ ಸ್ಥಿತಿಯನ್ನು ನೋಡಿ ಲಲಿತೆಯು ಹೆದರಿ ಬೇಗ ಭಿಕ್ಷ ವನ್ನು ಹಾಕಿ ಒಳಕ್ಕೆ ಹೋಗಿ ಬಾಗಿಲು ಹಾಕಿಕೊಂಡಳು. ಬಳಿಕ ಭಿಕ್ಷುಕನು ಹೊಸೂರಿನ ಕಡೆಗೆ ಹೊರಟುಹೋದನು. ಆದರೆ ಅವನ ಮನಸ್ಸು ಈಗ ಮೊದಲಿನಂತಿರ ಲಿಲ್ಲ. ಊರ ಹೊರಗಿನ ನೆರೆಯಿಲ್ಲದ ಗುಡಿಸಲನ್ನೂ ಅಲ್ಲಿರುವ ಅಸದೃಶರೂಪರಾಶಿ ಯನ್ನೂ ನೋಡಿ ಅವನ ಮನಸ್ಸಿನಲ್ಲಿ ಏನೋ ಒಂದು ದುರಾಲೋಚನೆಯು ಉತ್ಪನ್ನ ವಾಯಿತು. ಹಾವು ಕಡಿದವನ ದೇಹದಲ್ಲಿ ವಿಷವೇರುವಂತೆ ಆ ಪಾಪಿಯ ಹೃದಯ ದಲ್ಲಿ ಜನಿಸಿದ ಆ ದುರಾಲೋಚನೆಯು ಒಂದು ಕ್ಷಣದೊಳಗಾಗಿ ಅವನನ್ನು ಆಕ್ರಮ ಣಮಾಡಿ ಅವನನ್ನು ಶಾಸಿಸತೊಡಗಿತು. ಅವನು ಹೊಸೂರಿಗೆ ಬಂದು ಬಹು ಚಮತ್ಕಾರದಿಂದ ಆ ಗುಡಿಸಲಿಗೆ ಸಂಬಂಧ ಪಟ್ಟ ಕೆಲವು ವಿಷಯಗಳನ್ನು ತಿಳಿದುಕೊಂಡನು. ಅಷ್ಟರಲ್ಲೇ ಸಾಯಂಕಾಲವಾ ಯಿತು. ಕತ್ತಲೆಯಾದ ಮೇಲೆ ಪೂರ್ವೋಕ್ತವಾದಾ ಗುಡಿಸಲಿನಲ್ಲಿ ವಾಸಿಸುತ್ತಿದ